Advertisement

ಚೀನದಲ್ಲಿ ಮಾನವನಿಗೆ ಹಕ್ಕಿಜ್ವರ: ನಿರ್ಲಕ್ಷ್ಯ ಸಲ್ಲದು

01:59 AM Jun 03, 2021 | Team Udayavani |

ಚೀನದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ಆ ಬಳಿಕ ವಿಶ್ವಾದ್ಯಂತ ಜನ ರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಸಾಂಕ್ರಾಮಿಕದ ಕಪಿ ಮುಷ್ಟಿ ಯಿಂದ ಹೊರಬರಲು ಜಗತ್ತಿನ ಬಹುತೇಕ ರಾಷ್ಟ್ರಗಳು ಇನ್ನೂ ಹೆಣ ಗಾಡು ತ್ತಿರುವಾಗಲೇ ಎಚ್‌10ಎನ್‌3 ಮಾದರಿಯ ಹಕ್ಕಿಜ್ವರ ವಿಶ್ವ ದಲ್ಲಿಯೇ ಪ್ರಪ್ರ ಥಮ ಬಾರಿಗೆ ಚೀನದಲ್ಲಿ ಮಾನವನಿಗೆ ಹರಡಿರುವುದು ದೃಢಪಟ್ಟಿದೆ. ಎಚ್‌10ಎನ್‌3 ವೈರಸ್‌ ಕಾಡು ಪಕ್ಷಿಗಳು ಮತ್ತು ಪೌಲಿó ಹಕ್ಕಿಗಳಿಗೆ ಮಾರಕ ಎನ್ನಲಾಗಿದ್ದು ಮಾನವನಿಗೆ ಎಷ್ಟು ಮಾರಕ ಎಂಬ ಬಗ್ಗೆ ಇನ್ನೂ ಅಧ್ಯಯನ ನಡೆಯಬೇಕಿದೆ.

Advertisement

ಕೊರೊನಾ ಸಾಂಕ್ರಾಮಿಕದ ಬೆನ್ನಲ್ಲೇ ಈ ಎಚ್‌10ಎನ್‌3 ವೈರಸ್‌ ಮಾನ ವನಿಗೆ ತಗಲಿರುವುದು ವಿಶ್ವ ಸಮುದಾಯಕ್ಕೆ ಒಂದಿಷ್ಟು ಆತಂಕಕಾರಿ ಸಂಗತಿಯೇ. ಹಕ್ಕಿಜ್ವರದ ವೈರಸ್‌ಗಳು ಹೊಸದೇನಲ್ಲವಾದರೂ ಈ ತೆರನಾದ ಕೆಲವೊಂದು ವೈರಸ್‌ಗಳು ಮಾನವನಿಗೆ ಅಪಾಯಕಾರಿ ಯಾಗಿವೆ. 2016-17ರಲ್ಲಿ ಕಾಣಿಸಿಕೊಂಡಿದ್ದ ಎಚ್‌7ಎನ್‌9 ಮಾದರಿಯ ವೈರಸ್‌ಗಳು ನೂರಾರು ಮಂದಿಯ ಪ್ರಾಣಕ್ಕೇ ಕುತ್ತು ತಂದಿದ್ದವು. ಆದರೆ ಅ¨  ‌ಕ್ಕಿಂತ ಮೊದಲು, 1990ರ ದಶಕದ ಬಳಿಕ ಹಲವಾರು ಬಾರಿ ಹಕ್ಕಿಜ್ವರದ ವಿವಿಧ ಮಾದರಿಯ ವೈರಸ್‌ಗಳು ವಿಶ್ವದ ವಿವಿಧೆಡೆ ಮಾನ ವರಲ್ಲಿ ಕಾಣಿಸಿಕೊಂಡಿದ್ದವಾದರೂ ಅಷ್ಟೇನೂ ಮಾರಕವಾಗಿರಲಿಲ್ಲ.

ಈ ಬಾರಿ ಚೀನದ ಜಿಯಾಂಗುÕ ಪ್ರಾಂತದ 41ರ ಹರೆಯದ ವ್ಯಕ್ತಿಯಲ್ಲಿ ಹೊಸ ಮಾದರಿಯ ಹಕ್ಕಿಜ್ವರ ವೈರಸ್‌ ಕಾಣಿಸಿಕೊಂಡಿದೆ. ಬಾಧಿತನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಆತನ ಆರೋಗ್ಯ ಸ್ಥಿರವಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಸದ್ಯದ ಅಧ್ಯಯನಗಳ ಪ್ರಕಾರ ಮಾನ ವನಿಗೆ ಈ ಸೋಂಕು ತಗಲಿದರೂ ಅದು ಅಷ್ಟೇನೂ ಅಪಾಯವಲ್ಲ ಮತ್ತು ವ್ಯಾಪಕವಾಗಿ ಹರಡುವಂಥದಲ್ಲ ಎಂದು ಆಯೋಗ ತಿಳಿಸಿದೆ.

ಆದರೆ ಮನುಷ್ಯರಲ್ಲಿ ಹೊಸ ಮಾದರಿಯ ಹಕ್ಕಿಜ್ವರ ವೈರಸ್‌ ಕಾಣಿಸಿ ಕೊಂಡಿ ರುವುದು ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ಸಹಜವಾಗಿಯೇ ಆತಂಕಕ್ಕೀಡುಮಾಡಿದೆ. ಚೀನದ ಸ್ಪಷ್ಟನೆಯ ಹೊರತಾಗಿಯೂ ಇನ್ನೊಂದು ಸಾಂಕ್ರಾಮಿಕ ಹರಡುವ ಸಾಧ್ಯತೆಗಳ ಬಗೆಗೆ ಅನುಮಾನಗಳನ್ನು ವ್ಯಕ್ತ  ಪ ಡಿ ಸಲಾರಂಭಿಸಿವೆ. ಎಚ್‌10ಎನ್‌3 ವೈರಸ್‌ನ ತೀವ್ರತೆಯ ಬಗ್ಗೆ ಇನ್ನೂ ಸಮಗ್ರ ಅಧ್ಯಯನ, ಸಂಶೋಧನೆಗಳು ನಡೆಯದಿರುವ ಹಿನ್ನೆಲೆ ಯಲ್ಲಿ ಸಹಜವಾಗಿಯೇ ವಿಶ್ವ ಸಮುದಾಯ ಈ ವೈರಸ್‌ನ ಬಗೆಗೆ ತಲೆಕೆ ಡಿಸಿ   ಕೊಂಡಿವೆ. 2019ರ ಅಂತ್ಯದಲ್ಲಿ ಚೀನದಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕಿನ ಬಗೆಗೆ ಸಮರ್ಪಕವಾದ ಮಾಹಿತಿಯನ್ನು ನೀಡದೆ ಚೀನ ಸರ ಕಾರ ಮತ್ತು ಅಲ್ಲಿನ ವೈದ್ಯಕೀಯ ತಜ್ಞರು ಇಡೀ ವಿಶ್ವ ಸಮುದಾಯ ವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದನ್ನು ರಾಷ್ಟ್ರಗಳಿನ್ನೂ ಮರೆತಿಲ್ಲ. ಕೊರೊನಾ ಸೋಂಕು ವಿವಿಧ ಅವತಾರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಇಡೀ ವಿಶ್ವವನ್ನೇ ಕಂಗೆಡಿಸಿದ್ದು ವಿಶ್ವದ ಅರ್ಥ ವ್ಯವಸ್ಥೆಗೆೆ ಬಲವಾದ ಹೊಡೆತ ನೀಡಿದೆ.

ಇಂಥ ಸ್ಥಿತಿಯಲ್ಲಿ ಇದೀಗ ಚೀನದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಎಚ್‌10ಎನ್‌3 ವೈರಸ್‌ನ ಕುರಿತಂತೆ ವಿಶ್ವ ಸಮುದಾಯ ಅಧ್ಯ ಯನ ನಡೆಸಬೇಕಿದೆ. ಈ ದಿಸೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಲುವು ತಳೆಯಬೇಕು. ಚೀನದ ಬಾಯಿಮಾತಿನ ಹೇಳಿಕೆಗಳಿಗೆ ಶರಣಾ ಗದೆ ತಜ್ಞರ ತಂಡವನ್ನು ಚೀನದ ಜಿಯಾಂಗುÕ ಪ್ರದೇಶಕ್ಕೆ ಕಳುಹಿಸಿ ಬಾಧಿತ ನಿಂದ ಮತ್ತು ಆತನಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ವೈದ್ಯರಿಂದ ಮಾಹಿತಿಯನ್ನು ಕಲೆಹಾಕಿ, ಸಮರ್ಪಕ ಅಧ್ಯಯನ ನಡೆಸಿ ಪ್ರಾಥಮಿಕ ಹಂತದಲ್ಲಿಯೇ ಅದನ್ನು ನಿಯಂತ್ರಿಸುವ ಕಾರ್ಯವನ್ನು ಮಾಡಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next