Advertisement
ಈಗಾಗಲೇ ಹಕ್ಕಿಜ್ವರದ ಸೋಂಕಿಗೆ ತುತ್ತಾಗಿರುವ 17 ಸಾವಿರಕ್ಕೂ ಅಧಿಕ ಬಾತುಕೋಳಿಗಳನ್ನು ಕೊಲ್ಲಲಾಗಿದೆ. ಪ್ರತೀ ಗ್ರಾ.ಪಂ. ಮಟ್ಟದಲ್ಲಿ ಸಮಿತಿ ಗಳನ್ನು ರಚಿಸಿ ಕೋಳಿ ಸಾಕಣೆದಾರರಿಗೆ ಹಕ್ಕಿ ಜ್ವರದ ಬಗ್ಗೆ ಗಮನ ಹರಿಸಲು ಸೂಚಿಸಲಾಗಿದೆ. ಜನರಿಗೂ ಹಕ್ಕಿ ಜ್ವರದ ರೋಗ ಲಕ್ಷಣಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ರೋಗ ಲಕ್ಷಣಗಳು ವರದಿಯಾದರೆತತ್‌ಕ್ಷಣವೇ ಆಸ್ಪತ್ರೆಗಳಿಗೆ ತೆರಳಲು ಸೂಚಿಸಲಾಗಿದೆ.
ತಮಿಳುನಾಡು ಕೂಡ ಈ ಬಗ್ಗೆ ಮುಂಜಾಗ್ರತೆ ಕೈಗೊಂಡಿದೆ. ಕೇರಳ ಗಡಿಯ ಎಲ್ಲ 12 ಚೆಕ್‌ಪೋಸ್ಟ್ ಗಳಲ್ಲಿ ಕಣ್ಗಾವಲು ಹೆಚ್ಚಿಸಿದೆ. ಅಧಿಕಾರಿಗಳು ಮಾಹಿತಿ ನೀಡಿ ಕೇರಳದಿಂದ ಕೋಳಿ, ಬಾತುಕೋಳಿಗಳನ್ನು ಸಾಗಿಸುವ ವಾಹನ ಗಡಿ ಪ್ರವೇಶ ನಿರ್ಬಂಧಿಸಲಾಗಿದೆ ಎಂದಿದ್ದಾರೆ.