Advertisement

ಹಕ್ಕಿ ಜ್ವರ ಹಿನ್ನೆಲೆ : ಅಲರ್ಟ್‌ ಆಗಿರಲು ಮೋದಿ ಸಲಹೆ

02:13 AM Jan 12, 2021 | Team Udayavani |

ಹೊಸದಿಲ್ಲಿ: ದೇಶದ ಹಲವು ಭಾಗಗಳಲ್ಲಿ ಹಕ್ಕಿಜ್ವರವು ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ, ಅಲರ್ಟ್‌ ಆಗಿರುವಂತೆ ಎಲ್ಲ ರಾಜ್ಯ ಸರಕಾರಗಳಿಗೂ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಜತೆಗೆ, ಜಲಮೂಲಗಳು, ಪ್ರಾಣಿ ಸಂಗ್ರಹಾಲ ಯಗಳು ಹಾಗೂ ಪೌಲಿó ಫಾರ್ಮ್ಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಸ್ಥಳೀಯಾಡಳಿತಗಳಿಗೆ ಸೂಚಿಸಿದ್ದಾರೆ.

Advertisement

ಎಲ್ಲ ರಾಜ್ಯ ಸರಕಾರಗಳೂ ತಮ್ಮ ಮುಖ್ಯ ಕಾರ್ಯ ದರ್ಶಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮಾರ್ಗದರ್ಶನ ನೀಡಬೇಕು. ಹಕ್ಕಿಜ್ವರದ ಸಮಸ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅರಣ್ಯ, ಆರೋಗ್ಯ, ಪಶುಸಂಗೋಪನೆ ಇಲಾಖೆಗಳ ನಡುವೆ ಸಮನ್ವಯತೆಯಿದ್ದರೆ ಈ ಸವಾಲನ್ನು ಆದಷ್ಟು ಬೇಗನೆ ಮೆಟ್ಟಿ ನಿಲ್ಲಲು ಸಾಧ್ಯವಿದೆ ಎಂದೂ ಮೋದಿ ಹೇಳಿದ್ದಾರೆ.

10 ರಾಜ್ಯಗಳಲ್ಲಿ ಸೋಂಕು: ಸೋಮವಾರ ದಿಲ್ಲಿ, ಉತ್ತರಾಖಂಡ ಮತ್ತು ಮಹಾರಾಷ್ಟ್ರಗಳಲ್ಲಿ ಹಕ್ಕಿಜ್ವರ ಪ್ರಕರಣಗಳು ದೃಢಪಟ್ಟಿದ್ದು, ಈವರೆಗೆ ಸೋಂಕು ಹಬ್ಬಿದ ರಾಜ್ಯಗಳ ಸಂಖ್ಯೆ 10ಕ್ಕೇರಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಹಕ್ಕಿಜ್ವರ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಮತ್ತು ತಪ್ಪು ಮಾಹಿತಿ ಹರಿದಾಡದಂತೆ ಕ್ರಮ ಕೈಗೊಳ್ಳಿ ಎಂದೂ ಸರಕಾರ ರಾಜ್ಯಗಳಿಗೆ ಸಲಹೆ ನೀಡಿದೆ. ಜತೆಗೆ, ಹಕ್ಕಿಗಳನ್ನು ಕೊಲ್ಲುವ ಸಿಬ್ಬಂದಿಗೆ ಅಗತ್ಯ ಪಿಪಿಇ ಕಿಟ್‌ಗಳು ಹಾಗೂ ಇತರೆ ಪರಿಕರಗಳು ದಾಸ್ತಾನಿರುವಂತೆ ನೋಡಿ ಕೊಳ್ಳಿ ಎಂದೂ ಹೇಳಿದೆ.

8 ಸ್ಯಾಂಪಲ್‌ಗ‌ಳೂ ಪಾಸಿಟಿವ್‌: ದಿಲ್ಲಿಯಲ್ಲಿ ಹಕ್ಕಿಜ್ವರದ ಅನುಮಾನದ ಮೇರೆಗೆ ಭೋಪಾಲ್‌ನ ಪ್ರಯೋಗಾಲ ಯಕ್ಕೆ ಕಳುಹಿಸಿದ್ದ ಎಲ್ಲ 8 ಮಾದರಿಗಳ ವರದಿಯೂ ಪಾಸಿಟಿವ್‌ ಎಂದು ಬಂದಿದೆ. ಈ ಹಿನ್ನೆಲೆಯಲ್ಲಿ ಬಾತುಕೋಳಿಗಳನ್ನು ವಧಿಸುವ ಪ್ರಕ್ರಿಯೆ ಆರಂಭಿಸ ಲಾಗಿದೆ. ಸಂಜಯ್‌ ಲೇಕ್‌ ಅನ್ನು ಮುಚ್ಚಲಾಗಿದೆ. ಬೇರೆ ನಗರಗಳಿಂದ ಸಂಸ್ಕರಿತ ಮತ್ತು ಪ್ಯಾಕ್‌ ಮಾಡಿರುವ ಕೋಳಿ ಮಾಂಸವನ್ನು ದಿಲ್ಲಿಗೆ ತರುವುದಕ್ಕೆ ನಿಷೇಧ ಹೇರಿ ದಿಲ್ಲಿ ಸರಕಾರ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next