Advertisement

ಪಕ್ಷಿ ಗಣತಿ ಪೂರ್ಣ ! ಹೊಸ ಪ್ರಭೇದದ ಹಕ್ಕಿಗಳು ಗೋಚರ

01:34 PM Feb 08, 2021 | Team Udayavani |

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಶುಕ್ರವಾರದಿಂದ ನಡೆಯುತ್ತಿದ್ದ ಮೂರು ದಿನಗಳ ಪಕ್ಷಿ ಗಣತಿ ಕಾರ್ಯ ಭಾನುವಾರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

Advertisement

ಬಂಡೀಪುರ ಉದ್ಯಾನ ವ್ಯಾಪ್ತಿಯ 13 ವಲಯಗಳಲ್ಲಿ ಗಣತಿಯಲ್ಲಿ ಪಾಲ್ಗೊಂಡ 80 ಸ್ವಯಂಸೇವಕರು ಭಾನುವಾರ ಆಯಾ ವಲಯಗಳಲ್ಲಿ ತಾವು ಗುರುತಿಸಿ ವಲಸೆ ಮತ್ತು ಅಳಿವಿನಂಚಿನಲ್ಲಿರುವ ಪಕ್ಷಿಗಳ ವಿವರಗಳುಳ್ಳ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದರು.

ಪಕ್ಷಿಗಳ ಅಂಕಿ ಅಂಶಗಳ ವಿವರವನ್ನು ಸೋಮವಾರ ಪ್ರಕಟಿಸುವುದಾಗಿ ಅರಣ್ಯ ಇಲಾಖೆ ತಿಳಿಸಿದೆ. ಮದ್ದೂರು ಅರಣ್ಯ ವಲಯದಲ್ಲಿ ಗಣತಿಯಲ್ಲಿ 30 ಪ್ರಭೇದದ ಪಕ್ಷಿಗಳು ಕಂಡು ಬಂದಿವೆ. ಇಲ್ಲಿ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಆರ್‌.ಕೆ.ಮಧು ಚೀನಾದಿಂದ ವಲಸೆ ಬಂದಿರುವ ಬೂಟೆಡ್‌ ವಾಬ್ಲಿರ್‌ ಹಕ್ಕಿಯನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಭಾನುವಾರ ಮಧ್ಯಾಹ್ನ ಬಂಡೀಪುರದಲ್ಲಿ ಎಸಿಎಫ್ ಪಾಟೀಲ್‌, ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ಕೆ.ಪರಮೇಶ್‌, ಹೆಡಿಯಾಲದಲ್ಲಿ ಎಸಿಎಫ್ ಎಂ.ಎಸ್‌.ರಕುಮಾರ್‌ ಗಣತಿದಾರರಿಗೆ ಪ್ರಮಾಣಪತ್ರ ವಿತರಿಸಿದರು.

ಇದನ್ನೂ ಓದಿ: ಕುರುಚಲು ಕಾಡಿಗೆ ಬೆಂಕಿ: ತೋಟಗಳು ಹಾನಿ

Advertisement

ಈ ವೇಳೆ ಆರ್‌ಎಫ್ಒ ಗಳಾದ ಎನ್‌.ಪಿ.ನವೀನ್‌ಕುಮಾರ್‌, ಗೀತಾನಾಯಕ್‌, ಮಂಜುನಾಥ್‌, ಮುನಿರಾಜು, ಡಾ.ಲೋಕೇಶ್‌ ಸೇರಿದಂತೆ ಹಲವರು ಇದ್ದರು.

ಯಶಸ್ವಿ ಪಕ್ಷಿಗಣತಿ: ಈ ಬಗ್ಗೆ ಪ್ರತಿಕ್ರಿಯಿಸಿರುವ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್‌, 80 ಜನ ಸ್ವಯಂ ಸೇವಕರು ಮತ್ತು ನಮ್ಮ ಸಿಬ್ಬಂದಿ ಉತ್ತಮ ರೀತಿಯಲ್ಲಿ ಪ್ರಥಮ ಬಾರಿಗೆ ಪಕ್ಷಿಗಣತಿಯನ್ನು ಮಾಡಿ ಯಶಸ್ವಿಯಾಗಿದ್ದಾರೆ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next