Advertisement

90 ಹೊಡಿ ಮನೀಗ್‌ ನಡಿ ಚಿತ್ರಕ್ಕೆ ಬಿರಾದಾರ್‌ ಹೀರೋ

03:49 PM Oct 02, 2020 | Suhan S |

ಸಿಕ್ಕ ಪಾತ್ರಗಳಲ್ಲಿ ಖುಷಿ ಕಾಣುತ್ತಾ ಕನ್ನಡ ಚಿತ್ರರಂಗದಲ್ಲಿ ಸಾಗಿ ಬರುತ್ತಿರುವ ವೈಜನಾಥ್‌ ಬಿರಾದಾರ್‌ ಅವರು ಈಗ 500ನೇ ಚಿತ್ರದ ಹೊಸ್ತಿಲಿನಲ್ಲಿದ್ದಾರೆ. ಈಗಾಗಲೇ ಅವರ500ನೇ ಸಿನಿಮಾದ ಚಿತ್ರೀಕರಣ ಕೂಡಾ ಆರಂಭವಾಗಿದೆ. ವಿಶೇಷವೆಂದರೆ ಈ ಚಿತ್ರದಲ್ಲಿ ಸ್ವತಃ ಬಿರಾದಾರ್‌ ಅವರೇ ಹೀರೋ. ಅಂದಹಾಗೆ, ಆ ಚಿತ್ರದ ಹೆಸರು “90 ಹೊಡಿ ಮನೀಗ್‌ ನಡಿ’.

Advertisement

ಮದ್ಯಪಾನದಿಂದಾಗುವ ದುಷ್ಪರಿಣಾಮ ಗಳನ್ನು ಮನರಂಜನೆಯ ಮೂಲಕ ಉತ್ತಮ ಸಂದೇಶ ಹೇಳುವ ಕಥಾಹಂದರ ಈ ಚಿತ್ರದಲ್ಲಿದೆ. ಅಮ್ಮ ಟಾಕೀಸ್‌ ಬಾಗಲಕೋಟೆ ಸಂಸ್ಥೆ ಲಾಂಛನದಲ್ಲಿ ರತ್ನಮಾಲ ಬಾದರದಿನ್ನಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಉಮೇಶ್‌ ಬಾದರದಿನ್ನಿ ಹಾಗೂ ನಾಗರಾಜ್‌ ಅರೆಹೊಳೆ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.ಕಥೆ ಹಾಗೂ ಸಂಭಾಷಣೆ ಉಮೇಶ್‌ ಬಾದರದಿನ್ನಿ ಅವರು ಬರೆದರೆ, ಚಿತ್ರಕಥೆಯನ್ನು ಇಬ್ಬರು ನಿರ್ದೇಶಕರು ಸೇರಿ ರಚಿಸಿದ್ದಾರೆ. ಈ ಹಿಂದೆ “ಬಿಡಲಾರೆ ಎಂದೂ ನಿನ್ನ’ ಚಿತ್ರ ನಿರ್ದೇಶಿಸಿದ್ದ ಉಮೇಶ ಬಾದರದಿನ್ನಿ ಅವರಿಗೆ ಇದು ಎರಡನೇ ಚಿತ್ರ.

“ಹಾರೋ ಹಕ್ಕಿ’ ಹಾಗೂ “ಕೀಟ್ಲೆಕೃಷ್ಣ’ ಎಂಬ ಮಕ್ಕಳ ಚಿತ್ರಗಳನ್ನು ನಿರ್ದೇಶಿಸಿದ್ದ ಅನುಭವ ನಾಗರಾಜ್‌ ಅರೆಹೊಳೆ ಅವರಿಗಿದೆ. ಈವರೆಗೂ ಅರ್ಧಭಾಗದಷ್ಟು ಚಿತ್ರೀಕರಣ ಬಾಗಲಕೋಟೆಯಲ್ಲಿ ನಡೆದಿದೆ. ಮುಂದಿನ ಭಾಗದ ಚಿತ್ರೀಕರಣ ಬೆಂಗಳೂರು, ಬಿಡದಿ ಮುಂತಾದಕಡೆ ನಡೆಯಲಿದೆ. ಮೂರು ಹಾಡುಗಳಿದ್ದು, ಕಿರಣ್‌ ಶಂಕರ್‌, ಶಿವು ಬೀರಗಿ ಸಂಗೀತ ನಿರ್ದೇಶನವಿದೆ. ಡಾ. ವಿ.ನಾಗೇಂದ್ರ ಪ್ರಸಾದ್‌ ಎರಡು ಹಾಡುಗಳನ್ನು ಹಾಗೂ ಶಿವು ಒಂದು ಹಾಡನ್ನು ಬರೆದಿದ್ದಾರೆ. ಚಿತ್ರಕ್ಕೆಕೃಷ್ಣ ಅವರ ಛಾಯಾಗ್ರಹಣ, ರಾಜಾ ರಮೇಶ್‌ ಸಾಹಸ ನಿರ್ದೇಶನ ಹಾಗೂ ಭೂಷಣ್‌ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ವೈಜನಾಥ್‌ ಬಿರಾದಾರ್‌,ಕರಿಸುಬ್ಬು, ಧರ್ಮ, ನೀತು, ಪೂಜಾ, ಅಭಯ್‌ ಪ್ರಶಾಂತ್‌ ಸಿದ್ಧಿ, ವಿವೇಕ್‌ ಜಂಬಗಿ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ. ­

Advertisement

Udayavani is now on Telegram. Click here to join our channel and stay updated with the latest news.

Next