Advertisement
ಬೊರಿವಲಿಯ ಜೋಗರ್ಸ್ ಪಾರ್ಕ್ ಫುಟ್‌ಬಾಲ್ ಗ್ರೌಂಡ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಉದ್ಘಾಟನ ಕಾರ್ಯಕ್ರಮದಲ್ಲಿ ಸಂಸದ ಗೋಪಾಲ್ ಶೆಟ್ಟಿ ಮಾತನಾಡಿ, ಎಳವೆಯಿಂದಲೇ ಮಕ್ಕಳಿಗೆ ಕ್ರೀಡೆ ಬಗ್ಗೆ ಅರಿವು ಮೂಡಿಸಿ ಅವರನ್ನು ಪ್ರೋತ್ಸಾಹಿಸಬೇಕು. ಇಂತಹ ಪಂದ್ಯಾವಳಿಗಳಿಗೆ ಸಹಕರಿ ಸಲು ಉತ್ಸುಕನಾಗಿದ್ದೇನೆ. ಸರಕಾರವು ಕೂಡ ಇಂತಹ ಕ್ರೀಡೆಯನ್ನು ಬೆಳೆಸಲು ವಿಶ್ವದರ್ಜೆಯ ಮೂಲ ಸೌಕರ್ಯ ಒದಗಿ ಸುತ್ತಿದೆ. ಮಕ್ಕಳು ಎಳವೆಯಲ್ಲಿಯೇ ಕ್ರೀಡೆ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ದೇಶದ ಕೀರ್ತಿ ಎತ್ತಿ ಹಿಡಿಯಬೇಕು. ಫುಟ್‌ಬಾಲ್ ಆಡುವುದರಿಂದ ದೇಹದ ಫಿಟ್ನೆಸ್ ವೃದ್ಧಿ ಜತೆಗೆ ಒಂದು ಶ್ರೇಷ್ಠ ತಂಡವನ್ನು ಕಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಬಿಪಿನ್ ಫುಟ್‌ಬಾಲ್ ಅಕಾಡೆಮಿಯ ಕ್ರೀಡಾ ಕ್ಷೇತ್ರದ ಸಾಧನೆ ಅಪಾರವಾಗಿದೆ. ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಟೂರ್ನಿಗಳಲ್ಲಿ ಪಾಲ್ಗೊಂಡು ರಾಷ್ಟ್ರೀಯ ತಂಡದಲ್ಲಿ ಆಡುವಂತಾಗಬೇಕೆಂದು ಎಂದು ತಿಳಿಸಿದರು.
Related Articles
Advertisement
ಸಂಸ್ಥಾಪಕ ಸುರೇಂದ್ರ ಕರ್ಕೇರ : ಮೂಲತಃ ಉಡುಪಿ ಜಿಲ್ಲೆಯ ಕಾಪು ಪೊಲಿಪುವಿನವರಾದ ಸುರೇಂದ್ರ ಕರ್ಕೇರ ಅವರು ಬಿಪಿನ್ ಫುಟ್‌ಬಾಲ್ ಅಕಾಡೆಮಿಯ ಸಂಸ್ಥಾಪಕರಾಗಿದ್ದು, ಅಕಾಲಿಕವಾಗಿ ಮರಣ ಹೊಂದಿದ ತನ್ನ ಪುತ್ರನ ನೆನಪಿನಲ್ಲಿ ಅಕಾಡೆಮಿಯನ್ನು ಸ್ಥಾಪಿಸಿ ಅದರ ಮುಖಾಂತರ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತವಾಗಿ ಫುಟ್‌ಬಾಲ್ ತರಬೇತಿ ನೀಡುತ್ತಿದ್ದಾರೆ. ಮಹಾರಾಷ್ಟ್ರ ಫುಟ್‌ಬಾಲ್ ಕ್ಷೇತ್ರದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿದ ಖ್ಯಾತಿ ಸುರೇಂದ್ರ ಕರ್ಕೇರರಿಗಿದೆ. ಮಹಾರಾಷ್ಟ್ರ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಆಯ್ಕೆಗಾರರಾಗಿ, ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿರುವ ಇವರು, ಮುಂಬಯಿ ಫುಟ್‌ಬಾಲ್ ಅಸೋಸಿಯೇಶನ್‌ನ ಎಕ್ಸಿಕ್ಯುಟಿವ್ ಸಮಿತಿಯ ಸದಸ್ಯರಾಗಿ ಹಾಗೂ ಮಹಾರಾಷ್ಟ್ರ ವುಮೆನ್ಸ್ ಫುಟ್‌ಬಾಲ್ ಸಂಸ್ಥೆಯ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 1989ರಲ್ಲಿ ಪ್ರಥಮ ಉಚಿತ ಫುಟ್‌ಬಾಲ್ ತರಬೇತಿ ಶಿಬಿರವನ್ನು ಆರಂಭಿಸಿದ ಸುರೇಂದ್ರ ಕರ್ಕೇರ ಅವರು ಇದರ ಯಶಸ್ಸಿನ ಬಳಿಕ ಪ್ರತೀ ವರ್ಷವೂ ಉಚಿತ ತರಬೇತಿ ನಡೆಸುತ್ತಿದ್ದಾರೆ.