Advertisement

ಬಯೋತೆರಪ್ಯುಟಿಕ್ಸ್‌ ಕ್ಷೇತ್ರಕ್ಕೀಗ ಆದ್ಯತೆ: ಬಗಾರಿಯಾ

01:27 AM Oct 17, 2021 | Team Udayavani |

ಉಡುಪಿ: ಕಳೆದ 40 ವರ್ಷಗಳಲ್ಲಿ ಬಯೋತೆರಪ್ಯುಟಿಕ್ಸ್‌ ಪ್ರಮುಖ ಕ್ಷೇತ್ರವಾಗಿ ಹೊರ ಹೊಮ್ಮುತ್ತಿದೆ ಎಂದು ಬೆಂಗಳೂರಿನ ಕೆಮ್‌ವೆಲ್‌ ಬಯೋಫಾರ್ಮ ಅಧ್ಯಕ್ಷ, ಸಿಇಒ ಅನುರಾಗ ಬಗಾರಿಯಾ ಹೇಳಿದರು.

Advertisement

ಶುಕ್ರವಾರ ಮಣಿಪಾಲ ಮಾಹೆಯ ಮಣಿಪಾಲ್‌ ಸೆಂಟರ್‌ ಫಾರ್‌ ಬಯೋತೆರಪ್ಯುಟಿಕ್ಸ್‌ ರಿಸರ್ಚ್‌ (ಎಂಸಿಬಿಆರ್‌) ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿ ಹೊಂದಿದ ದೇಶಗಳ ಲ್ಲಿರುವ ವಿ.ವಿ.ಗಳು ಮಾಡುತ್ತಿರುವ ಬಯೋತೆರಪ್ಯುಟಿಕ್ಸ್‌ ಸಂಶೋಧನೆಗೆ ಮಾಹೆ ಕಾಲಿಟ್ಟಿರುವುದು ಸಂತೋಷ ತರುತ್ತಿದೆ. ಜಗತ್ತಿನ ಮುಂಚೂಣಿ ಕೇಂದ್ರವಾಗಿ ಈ ಕೇಂದ್ರ ಮೂಡಿ ಬರಲಿದೆ ಎಂಬ ವಿಶ್ವಾಸವಿದೆ ಎಂದು ಬಗಾರಿಯಾ ಹೇಳಿದರು.

ಸೆಲ್‌ ತೆರಪಿ, ಜೀನ್‌ ತೆರಪಿ, ಪ್ರೊಟೀನ್‌ ತೆರಪಿ, ಬಯೋಮೆಟೀರಿ ಯಲ್ಸ್‌ ಇತ್ಯಾದಿ ಕ್ಷೇತ್ರಗಳ ಮೇಲೆ ಆಧುನಿಕ ವೈದ್ಯ ವಿಜ್ಞಾನ ಗಮನ ಹರಿಸುತ್ತಿದೆ. ಬಯೋತೆರಪ್ಯುಟಿಕ್ಸ್‌ ಸಂಶೋಧನೆಗೆ ದೀರ್ಘ‌ ಇತಿಹಾಸವಿದೆ. ಸೆಲ್‌ ಮತ್ತು ಜೀನ್‌ ತೆರಪಿ ಮೂಲಕ ಬಯೋತೆರಪ್ಯುಟಿಕ್ಸ್‌ ಸಂಶೋಧನೆಯಲ್ಲಿ ಕೆಲವು ಕಾಯಿಲೆಗಳನ್ನು ವಾಸಿ ಮಾಡಬಹುದಾಗಿದೆ. ಶೈಕ್ಷಣಿಕ ಮತ್ತು ಕೈಗಾರಿಕಾ ಸಹಭಾಗಿತ್ವವಿಲ್ಲದೆ ಇದಾವುದೂ ಸಾಧ್ಯವಿಲ್ಲ ಎಂದರು.

ಫಾರ್ಮ ಕೈಗಾರಿಕೆಯಲ್ಲಿ ಬಯೋತೆರಪ್ಯುಟಿಕ್ಸ್‌ ಕ್ಷೇತ್ರ ವೇಗವಾಗಿ ಬೆಳೆ ಯುತ್ತಿದೆ. ಇದಕ್ಕೆ ಸೆಲ್‌ ತೆರಪಿಗಳಲ್ಲಿ ಆಳವಾದ ಅಧ್ಯಯನ ಸಾಗಬೇಕು ಎಂದು ಎಂಇಎಂಜಿ ಅಧ್ಯಕ್ಷ ಡಾ| ರಂಜನ್‌ ಆರ್‌. ಪೈ ಹೇಳಿದರು.

Advertisement

ಮಾಹೆ ಟ್ರಸ್ಟ್‌ ಟ್ರಸ್ಟಿ ವಸಂತಿ ಆರ್‌. ಪೈ ವೆಬ್‌ಪೇಜ್‌ ಬಿಡುಗಡೆಗೊಳಿಸಿದರು. ಅತ್ಯಾಧುನಿಕ ಸೌಕರ್ಯದೊಂದಿಗೆ ಬಯೋ ತೆರಪ್ಯುಟಿಕ್ಸ್‌ ಸುಧಾರಿತ ಸಂಶೋಧನೆ ನಡೆಯಲಿದೆ ಎಂದು ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಹೇಳಿದರು.

ಇದನ್ನೂ ಓದಿ: ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

ಎಂಸಿಬಿಆರ್‌ ಸಂಶೋಧನೆ ಮೂಲಕ ಡಾಕ್ಟರಲ್‌ ಮತ್ತು ಪೋಸ್ಟ್‌ ಡಾಕ್ಟರಲ್‌ ಕೋರ್ಸ್‌ಗಳನ್ನು ಆರಂಭಿಸಲಿದೆ. ಬಯೋ ತೆರಪ್ಯುಟಿಕ್ಸ್‌ ಉತ್ಪನ್ನಗಳನ್ನು ಉತ್ಪಾದಿಸುವ ಗುರಿ ಇದೆ ಎಂದು ಕುಲಪತಿ ಲೆ|ಜ|ಡಾ| ಎಂ.ಡಿ. ವೆಂಕಟೇಶ್‌ ಹೇಳಿದರು.

ನಾವು ಬಯೋಫಾರ್ಮ ಕಂಪೆನಿಗಳ ಪಾಲುದಾರಿಕೆಯಲ್ಲಿ ಅತಿ ಕಡಿಮೆ ದರದಲ್ಲಿ ಉತ್ಪನ್ನಗಳನ್ನು ಉತ್ಪಾದಿಸಬಹುದು ಎಂದು ಮಾಹೆ ಕಾರ್ಪೊರೆಟ್‌ ರಿಲೇಶನ್ಸ್‌ ನಿರ್ದೇಶಕ, ಎಂಸಿಬಿಆರ್‌ ಸಮನ್ವಯಕಾರ ಡಾ| ರವಿರಾಜ ಎನ್‌.ಎಸ್‌. ಹೇಳಿದರು.

ಡಿಬಿಟಿ ವೆಲ್‌ಕಂ ಟ್ರಸ್ಟ್‌ ಇಂಡಿಯ ಅಲಯನ್ಸ್‌ ಸಿಇಒ ಡಾ| ವಾಸನ್‌ ಸಂಬಂಧಮೂರ್ತಿ, ಸಿಪ್ಲಾ ಲಿ. ಉಪಾಧ್ಯಕ್ಷ, ಆರ್‌ ಆ್ಯಂಡ್‌ ಡಿ ಕ್ಲಿನಿಕಲ್‌ ಹೆಡ್‌ ಡಾ| ಮುಖೇಶ್‌ ಕುಮಾರ್‌, ಸ್ಟೆಂಪ್ಯುಟಿಕ್ಸ್‌ ರಿಸರ್ಚ್‌ ಪ್ರೈ.ಲಿ. ಎಂಡಿ ಮತ್ತು ಸಿಇಒ ಮನೋಹರ್‌ ಬಿ.ಎನ್‌. ಆರ್‌ಸಿಆರ್‌ಐ ಸಹಸ್ಥಾಪಕ ಡಾ| ಸಾಯಿರಾಮ್‌ ಅತ್ಲುರಿ, ಸ್ವಿಜರ್‌ಲ್ಯಾಂಡ್‌ನ‌ ಕ್ಯೂರಿಯೋ ಬಯೋಟೆಕ್‌ ಲ್ಯಾಬ್‌ ಹೆಡ್‌ ಡಾ| ರೋಬರ್ಟೊ ಸಾಲ್ವಿ ಶುಭ ಕೋರಿದರು. ಎಂಸಿಬಿಆರ್‌ ಪ್ರಾಧ್ಯಾಪಕ ಡಾ| ಸಚಿನ್‌ ಕದಂ ಕಾರ್ಯಕ್ರಮ ನಿರ್ವಹಿಸಿ ಡಾ| ಮಂಜುನಾಥ ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next