Advertisement

ಮಮತಾ ಬ್ಯಾನರ್ಜಿ ಬದುಕು ಆಧರಿತ ಚಿತ್ರ ಬಿಡುಗಡೆಗೆ ಬಿಜೆಪಿ ಆಕ್ಷೇಪ; ಚು.ಆ.ಕ್ಕೆ ದೂರು

12:48 PM Apr 18, 2019 | Team Udayavani |

ಕೋಲ್ಕತ : ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬದುಕನ್ನು ಆಧರಿಸಿದ ಚಿತ್ರಕಥೆಯನ್ನು ಹೊಂದಿದೆ ಎನ್ನಲಾಗಿರುವ ಸಿನೆಮಾದ ಬಿಡುಗಡೆಯನ್ನು ಆಕ್ಷೇಪಿಸಿ ಭಾರತೀಯ ಜನತಾ ಪಕ್ಷ ಇಂದು ಬುಧವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

Advertisement

ಮೋದಿ ಬಯೋಪಿಕ್‌ ಚಿತ್ರದ ಸಂದರ್ಭದಲ್ಲಿ ಕೈಗೊಳ್ಳಲಾದ ನಿರ್ಧಾರದಂತೆ ಮಮತಾ ಬ್ಯಾನರ್ಜಿ ಚಿತ್ರದ ಬಿಡುಗಡೆಗೆ ಮುನ್ನ ಚುನಾವಣಾ ಆಯೋಗ ಅದನ್ನು ವೀಕ್ಷಿಸಬೇಕು ಎಂದು ಪಶ್ಚಿಮ ಬಂಗಾಲದ ಬಿಜೆಪಿ ಘಟಕದ ಅಧ್ಯಕ್ಷ  ಜಯ ಪ್ರಕಾಶ್‌ ಮಜುಮ್‌ದಾರ್‌ ಅವರು ತಮ್ಮ ದೂರು ಪತ್ರದಲ್ಲಿ ಹೇಳಿದ್ದಾರೆ.

ಹಾಲಿ ಲೋಕಸಭಾ ಚುನಾವಣೆಯ ಋತುವಿನ ನಡುವೆಯೇ ಮೇ 3ರಂದು ಮಮತಾ ಬ್ಯಾನರ್ಜಿ ಅವರ ಹೋರಾಟದ ಬದುಕನ್ನು ಆಧರಿಸಿದ ಭಗಿನೀ ಎಂಬ ಹೆಸರಿನ ಬಂಗಾಲೀ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ತಾವು ಕೇವಲ ಮಮತಾ ಬ್ಯಾನರ್ಜಿ ಅವರ ಹೋರಾಟಮಯ ಬದುಕಿನಿಂದ ಪ್ರೇರಿತರಾಗಿ ಈ ಚಿತ್ರವನ್ನು ಮಾಡಿರುವುದಾಗಿ ಹೇಳಿದ್ದಾರೆ.

ಹಾಗಿದ್ದರೂ ಟಿಎಂಸಿ ಯ ಅನೇಕ ಎದುರಾಳಿಗಳು ಈ ಚಿತ್ರ ಲೋಕಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಬಿಡುಗಡೆಯಾಗುವುದನ್ನು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next