Advertisement
ಸುಮಾರು 73.73 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಈ ಕೆಲಸ ಪೂರ್ಣ ಗೊಳ್ಳಲಿದೆ. ಎಡಿಯು ಇನ್‌ಪ್ರಾ, ಬಿವಿಜಿ ಇಂಡಿಯ ಪ್ರç ಲಿ. ಮತ್ತು ನಕಾಫ್ ಸಂಸ್ಥೆಗಳ ಹೆಸರು ಟೆಂಡರ್ ಪ್ರಕ್ರಿಯೆ ಯಲ್ಲಿ ಆಂತಿಮಗೊಳಿಸಿ ತಾಂತ್ರಿಕ ಮೌಲ್ಯ ಮಾಪನಕ್ಕಾಗಿ ಸರಕಾರಕ್ಕೆ ಕಳುಹಿಸಲು ಮಹಾನಗರ ಪಾಲಿಕೆ ನಿರ್ಧರಿಸಿದೆ. ಸರಕಾರದ ಮಟ್ಟದಲ್ಲಿ ತಾಂತ್ರಿಕ ಮೌಲ್ಯ ಮಾಪನ ಮತ್ತು ಅರ್ಥಿಕ ಲೆಕ್ಕಾಚಾರ ಪರಿಗಣಿಸಿ ಒಂದು ಸಂಸ್ಥೆಗೆ ಟೆಂಡರ್ ಅಂತಿಮಗೊಳಿಸಲಿದೆ. ಈ ಎಲ್ಲ ಪ್ರಕ್ರಿಯೆ ಒಂದು ತಿಂಗಳೊಳಗೆ ಪೂರ್ಣ ಗೊಳ್ಳಲಿದ್ದು, 2022ರ ಆರಂಭದಲ್ಲಿ ಈ ಯೋಜನೆ ಜಾರಿಗೊಳ್ಳುವ ಸಂಭವವಿದೆ.
Related Articles
Advertisement
ತ್ಯಾಜ್ಯ ದುರಂತ ಸಂಭವಿಸಿದ ಸ್ಥಳದಲ್ಲಿ ಮತ್ತಷ್ಟು ಅನಾಹುತ ಸಂಭವಿಸದಂತೆ 7 ಮೀಟರ್ ಎತ್ತರದ ತಡೆ ಗೋಡೆ ನಿರ್ಮಿಸ
ಲಾಗಿದೆ. ಸಾಯಿಲ್ ಕ್ಯಾಪಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದ್ದು, ತ್ಯಾಜ್ಯದ ನೀರು ಶೇಖರಣೆಗೆ ಟ್ಯಾಂಕ್ ಅಳವಡಿಸಲಾಗಿದೆ. ಅನಧಿಕೃತವಾಗಿ ಕಸ ವಿಲೇವಾರಿ ಮಾಡುವವರ ಬಗ್ಗೆ ನಿಗಾ ಇರಿಸಿದ್ದು, ಸಿ.ಸಿ. ಕೆಮರಾ ಅಳವಡಿಸಲಾಗಿದೆ.
2,295.00: ಲಕ್ಷರೂ. ಮರುಬಳಕೆ ವಸ್ತುಗಳಿಂದ ಪಡೆಯಬಹು ದಾದಅಂದಾಜು ಮೊತ್ತ
ಯೋಜನೆಯ ಆರ್ಥಿಕ ವಿವರ : 7,373.22 ಲಕ್ಷ ರೂ. ಯೋಜನೆ ಅಂದಾಜು ವೆಚ್ಚ
1,523.47 : ಲಕ್ಷ ರೂ. ಮಹಾನಗರ ಪಾಲಿಕೆ ಭರಿಸಲು ಪ್ರಸ್ತಾವಿಸಿರುವ ಮೊತ್ತ (ಶೇ.30)
3,554.75: ಲಕ್ಷ ರೂ. ಪಾಲಿಕೆಯು ಪಡೆಯಲು ಉದ್ದೇಶಿಸಿರುವ ಸಾಪ್ಟ್ ಲೋನ್ ಮೊತ್ತ
ಬಯೋ ಮೈನಿಂಗ್ ಏನಿದು ವ್ಯವಸ್ಥೆ ? :
ಗುಡ್ಡದಂತೆ ಬೆಳೆದಿರುವ ಡಂಪಿಂಗ್ ಯಾರ್ಡ್‌ಗಳ ತ್ಯಾಜ್ಯ ವನ್ನು ಜೈವಿಕ ವಿಧಾನದ ಮುಖೇನ ಕರಗಿಸುವ ವ್ಯವಸ್ಥೆಗೆ ಬಯೋ ಮೈನಿಂಗ್ ಎನ್ನಲಾಗು ತ್ತದೆ. ಈ ಮೂಲಕ ಪ್ರಕೃತಿಯಲ್ಲಿ ಕರಗುವ ಮತ್ತು ಕರಗ ದಿರುವ ತ್ಯಾಜ್ಯ ವನ್ನು ಬೇರ್ಪಡಿಸಿ ಗೊಬ್ಬರ ಇತ್ಯಾದಿಗೆ ಬಳಸಲಾಗುತ್ತದೆ. ಪ್ಲಾಸ್ಟಿಕ್, ರಬ್ಬರ್, ಗಾಜು ಮರು ಬಳಕೆಗಾಗಿ ಸಿಮೆಂಟ್ ಕಾರ್ಖಾನೆಗೆ ನೀಡಬಹುದು. ಹಸಿ ತ್ಯಾಜ್ಯವನ್ನು ಸಂಸ್ಕರಿಸಿ, ಉಳಿದದ್ದನ್ನು ನಾಶಪಡಿಸಲಾಗುತ್ತದೆ. ಇನ್ನು, ಮರಳನ್ನು ಸಂಸ್ಕರಿಸಿ ಮರು ಬಳಕೆ ಮಾಡಲು ಅವಕಾಶ ಇದೆ.