Advertisement

ಮತ್ತೂಮ್ಮೆ ಬಯೋಮೆಟ್ರಿಕ್‌-ಪ್ರತಿಭಟನೆ

08:44 AM Jun 07, 2019 | Team Udayavani |

ಧಾರವಾಡ: ಬಿಪಿಎಲ್ ಕಾರ್ಡ್‌ ಹೊಂದಿರುವ ಜನರು ಮತ್ತೂಮ್ಮೆ ಬಯೋಮೆಟ್ರಿಕ್‌ ನೀಡುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಖಂಡಿಸಿ ಬಿಜೆಪಿ ವತಿಯಿಂದ ಡಿಸಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

Advertisement

ಪಡಿತರ ಚೀಟಿ ಹೊಂದಿದ ಸದಸ್ಯರು ಈಗಾಗಲೇ ಬಯೋಮೆಟ್ರಿಕ್‌ ನೀಡಿ, ಆಧಾರ್‌ ಜೋಡಣೆ ಸಹ ಮಾಡಿದ್ದಾರೆ. ಆದರೆ, ಇದೀಗ ರಾಜ್ಯ ಸರ್ಕಾರ ಹೊರಡಿಸಿದ ಆದೇಶದಿಂದ ಬಡವರು ತಮ್ಮ ಕೂಲಿ ಕೆಲಸ ಬಿಟ್ಟು ಪಡಿತರ ಅಂಗಡಿಗಳಿಗೆ ಓಡಾಡುವ ಸ್ಥಿತಿ ಉಂಟಾಗಲಿದೆ. ಬಡವರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಲಾಯಿತು.

ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತವಾಗಿ ನೀಡುತ್ತಿರುವ ಅಕ್ಕಿ ವಿತರಣೆ ಬಂದ್‌ ಮಾಡುವ ನಿಟ್ಟಿನಲ್ಲಿ ಸರ್ಕಾರ ಈ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಇದಲ್ಲದೆ ಬಯೋಮೆಟ್ರಿಕ್‌ ಹೆಸರಿನಲ್ಲಿ ಜನರ ಜಾತಿ ತಿಳಿಯುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಈ ರೀತಿ ದಿನಕ್ಕೊಂದು ಆದೇಶ ಹೊರಡಿಸುವುದನ್ನು ಬಿಟ್ಟು ಬಡ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೊಳಿಸಲಿ ಎಂದು ಆಗ್ರಹಿಸಲಾಯಿತು.

ಪ್ರತಿ ಸದಸ್ಯರ ಬಯೋಮೆಟ್ರಿಕ್‌ ಪಡೆಯಬೇಕು ಎಂದು ಹೊರಡಿಸಿದ ಆದೇಶ ರದ್ದು ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದಿಂದ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು. ಹು-ಧಾ ಪಶ್ಷಿಮ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮೋಹನ ರಾಮದುರ್ಗ, ಬಿಜೆಪಿ ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷ ಸುರೇಶ ಬೇದರೆ, ಬಲರಾಮ ಕುಸುಗಲ್, ಆನಂದ ಯಾವಗಲ್ಲ, ಭೀಮು ಸವಣೂರ, ರಾಕೇಶ ನಾಝರೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next