Advertisement

ಬಿಪಿಎಲ್‌ ಕುಟುಂಬಗಳಿಗೆ ಬಯೋಮೆಟ್ರಿಕ್‌ಗೆ ಆಕ್ರೋಶ

03:52 PM Aug 18, 2021 | Team Udayavani |

ಗದಗ: ಆಹಾರ ಇಲಾಖೆಯಿಂದ ಬಿಪಿಎಲ್‌ ಪಡಿತರ ಕುಟುಂಬಗಳಿಗೆ ಬಯೋಮೆಟ್ರಿಕ್‌ ಪದ್ಧತಿ ಮತ್ತು ವಿದ್ಯುತ್‌ ಖಾಸಗೀಕರಣ ಕಾಯ್ದೆ ವಿರೋಧಿಸಿ  ಜಿಲ್ಲಾ ಸ್ಲಂ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ವೇಳೆ ಮಾತನಾಡಿದ ಮುಖಂಡರು, ಕೇಂದ್ರ ಸರಕಾರ ಕಾರ್ಪೋರೇಟ್ ಕಂಪನಿಗಳ ಕೈಗೊಂಬೆಯಂತೆ ವರ್ತಿಸುತ್ತಿದೆ. ದೇಶದ ಎಲ್ಲಾ ಸೇವಾವಲಯಗಳನ್ನು ಖಾಸಗಿಕರಣಗೊಳಿಸುವ ಮೂಲಕ ಬಂಡವಾಳಶಾಹಿಗಳಿಗೆ ದೇಶದ ಸೇವಾ ವಲಯಗಳನ್ನು ಮಾರಾಟ ಮಾಡಲಾಗುತ್ತಿದೆ. ಸರಕಾರದ ಈ ನಡೆಯಿಂದ ದೇಶದ ಬಡ ಜನರಿಗೆ ರೈತರು ಮತ್ತು ಕೂಲಿ ಕಾರ್ಮಿಕರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ಇತ್ತೀಚೆಗೆ ರಾಜ್ಯ ಸರಕಾರ ಆಹಾರ ಇಲಾಖೆಯಿಂದ ಬಿಪಿಎಲ್‌ ಪಡಿತರ ಕುಟುಂಬಗಳು ತಮ್ಮ ಬೆರಳಚ್ಚು ಗುರುತು ಕಡ್ಡಾಯ ಗೊಳಿಸಿರುವುದರಿಂದ ಆಹಾರ ಧಾನ್ಯ ಪಡೆಯಲು ಹರಸಾಹಸ ಪಡುವಂತಾಗಿದೆ. ಬಳಿಕ ಜನರ ಆಕ್ರೋಶಕ್ಕೆ ಮಣಿದು ಬಯೋಮೆಟ್ರಿಕ್‌ ಪದ್ಧತಿಯನ್ನು ಸರಕಾರ ಹಿಂಪಡೆಯಿತು. ಮತ್ತೆ ರಾಜ್ಯದಲ್ಲಿ ಬಿಪಿಎಲ್‌ ಕುಟುಂಬಗಳು ತಮ್ಮ ಬೆರಳಚ್ಚು ಗುರುತುಗಳನ್ನು (ಬಯೋಮೆಟ್ರಿಕ್‌) ಮಾಡುವುದು ಕಡ್ಡಾಯವೆಂದು ಹೇಳುತ್ತಿದೆ. ಅನ್ಯ ಜಿಲ್ಲೆ ಮತ್ತು ರಾಜ್ಯಗಳಿಗೆ ಗುಳೆ ಹೋಗಿರುವ ಕಾರ್ಮಿಕರು ಪಡಿತರದಿಂದ ವಂಚಿತಗೊಳ್ಳಲಿವೆ. ರಾಜ್ಯ ಸರಕಾರ ಕೂಡಲೇ ಜನವಿರೋಧಿ ಬಯೋಮೆಟ್ರಿಕ್‌ ಪದ್ಧತಿ ಕೈಬಿಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ:ಸರಕಾರಿ ದೇವಸ್ಥಾನಗಳ ಆಸ್ತಿ ಸಮೀಕ್ಷೆ ನಡೆಸಿ : ಅಧಿಕಾರಿಗಳಿಗೆ ಸಚಿವೆ ಜೊಲ್ಲೆ ಸೂಚನೆ

ಕೇಂದ್ರ ಸರಕಾರ ವಿದ್ಯುತ್‌ ಕಾಯ್ದೆ 2020ಕ್ಕೆ ತಿದ್ದುಪಡಿ ತಂದಿದ್ದು, ಈ ಕಾಯ್ದೆಯ ಪ್ರಕಾರ ವಿದ್ಯುತ್‌ ಸೌಲಭ್ಯ ಬಂಡವಾಳ ಶಾಹಿಗಳ ಅಧೀನ ಕ್ಕೊಳಪಡಲಿದೆ. ಅವರು ನಿಗದಿಪಡಿಸುವ ದರವನ್ನು ಗ್ರಾಹಕರು ಒಪ್ಪಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಲಿದೆ.

ರೈತರಿಗೆ ಹಾಗೂ ಬಡವರಿಗೆ ನೀಡುತ್ತಿರುವ ಭಾಗ್ಯಜೋತಿ ಸ್ಥಗಿತಗೊಳ್ಳಲಿದೆ. ವಿದ್ಯುತ್‌ ದರ ಏರಿಕೆಯಿಂದ ದೇಶದ ಜನ ತತ್ತರಿಸಲಿದ್ದು, ಈ ಉದ್ಯೋಗವನ್ನೇ ನಂಬಿರುವ ಲಕ್ಷಾಂತರ ನೌಕರರು ನಿರುದ್ಯೋಗಿಗಳಾಗುವ ಆತಂಕ ವ್ಯಕ್ತಪಡಿಸಿದರು. ಈಗಾಗಲೇ ಕೇಂದ್ರ ಸರಕಾರ ವಿಮಾನ, ರೇಲ್ವೆ ಸೇರಿದಂತೆ ಸಾರ್ವಜನಿಕ ವಲಯಗಳನ್ನು ಖಾಸಗಿಕರಣಗೊಳಿಸಿದ ಪರಿಣಾಮ ದೇಶದ ಜನರು ತತ್ತರಿಸಿ ಹೋಗಿದ್ದಾರೆ.

Advertisement

ಈಗಿರುವ ವಿದ್ಯುತ್‌ ಕಂಪನಿಗಳು ಅನುಭವಿಸುತ್ತಿರುವ ಲಕ್ಷಾಂತರ ಕೋಟಿ ರೂ. ನಷ್ಟ ಸರಿದುಗಿಸುವ ನೆಪದಲ್ಲಿ ಸರಕಾರ ವಿದ್ಯುತ್‌ ನಿಗಮ ಖಾಸಗಿಕರಣಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಟೀಕಿಸಿದರು.

ಧರಣಿಯಲ್ಲಿ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮಿ¤ಯಾಜ ಮಾನ್ವಿ, ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮೆಹರುನಿಸಾ ಢಾಲಾಯತ, ಇಬ್ರಾಹಿಂ ಮುಲ್ಲಾ, ಶರಣಪ್ಪ ಸೂಡಿ, ಸುರೇಶ ಸಿಂಗಾಡಿ, ಚಾಂದಸಾಬ ಬದಾಮಿ, ದಾವಲಸಾಬ ಹಾಳಕೇರಿ, ಬಸವರಾಜ ಅಡನೂರ, ಲಕ್ಷ್ಮಣ ಗೋಕಾವಿ, ರಾಜೇಸಾಬ ತೆಹಶೀಲ್ದಾರ್, ಇಮಾಮಸಾಬ ಉಮಚಗಿ ಹಾಗೂ ಸ್ಲಂ ನಿವಾಸಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next