Advertisement

ಕಾಲೇಜುಗಳಲ್ಲಿ  ಕಾರ್ಯ ನಿರ್ವಹಿಸದ ಬಯೋಮೆಟ್ರಿಕ್‌ ಯಂತ್ರ

12:30 AM Feb 03, 2019 | |

ಬೆಂಗಳೂರು: ಉಪನ್ಯಾಸಕರ ಹಾಜರಾತಿಯ ಮೇಲೆ ನಿಗಾ ಇಡಲು ರಾಜ್ಯದ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಅಳವಡಿಸಿರುವ ಬಯೋಮೆಟ್ರಿಕ್‌ ಯಂತ್ರಗಳು ಆಟ ಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿವೆ.

Advertisement

ರಾಜ್ಯದಲ್ಲಿ 1,240ಕ್ಕೂ ಅಧಿಕ ಸರಕಾರಿ ಪದವಿ ಕಾಲೇಜುಗಳಿದ್ದು, 18 ಸಾವಿರಕ್ಕೂ ಅಧಿಕ ಖಾಯಂ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲ ಕಾಲೇಜುಗಳಲ್ಲೂ ಉಪನ್ಯಾಸಕರ ಹಾಜರಾತಿಗೆ ಬಯೋಮೆಟ್ರಿಕ್‌ ಅಳ ವಡಿಸುವಂತೆ ಈಗಾಗಲೇ ಇಲಾಖೆ ಯಿಂದ ಸ್ಪಷ್ಟ ಸೂಚನೆ ನೀಡಲಾಗಿದ್ದು, ಇದಕ್ಕಾಗಿ ಹಣಕಾಸಿನ ಸೌಲಭ್ಯವನ್ನು ಒದಗಿಸಲಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಬಯೋಮೆಟ್ರಿಕ್‌ ಅಳವಡಿಸಲಾಗಿದೆ. ಆದರೆ ಉಪನ್ಯಾಸಕರ ಹಾಜರಾತಿ ಮಾತ್ರ ಪುಸ್ತಕದಲ್ಲೇ ಮುಂದುವರಿಯುತ್ತಿದೆ. ಇದಕ್ಕೆ ತಾಂತ್ರಿಕ ಕಾರಣವೂ ಇದೆ. ಜತೆಗೆ  ಜಿಲ್ಲಾ ಉಪನಿರ್ದೇಶಕರು ಹಾಗೂ ಶಾಲಾ ಪ್ರಾಂಶುಪಾಲರ ನಿರ್ಲಕ್ಷ್ಯವೂ ಇದೆ ಎಂದು ಮೂಲಗಳು ತಿಳಿಸಿವೆ.

ನಗರ ಪ್ರದೇಶದಲ್ಲಿ ಬಯೋಮೆಟ್ರಿಕ್‌ ಯಂತ್ರಗಳ ನಿರ್ವಹಣೆ ಚೆನ್ನಾಗಿದೆ. ಗ್ರಾಮೀಣ ಭಾಗದಲ್ಲಿ ಬಯೋ ಮೆಟ್ರಿಕ್‌ ವ್ಯವಸ್ಥೆ ಇದ್ದರೂ ಹಾಜರಾತಿ ಮಾತ್ರ ಪುಸ್ತಕದಲ್ಲೇ ಬರೆಯಲಾಗುತ್ತಿದೆ. ಬಯೋಮೆಟ್ರಿಕ್‌ ಹಾಜರಾತಿ ಅಪ್‌ಡೇಟ್‌ ಕೂಡ ಕೇಂದ್ರ ಕಚೇರಿಗೆ ಸರಿ ಯಾಗಿ ಆಗುತ್ತಿಲ್ಲ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಯೋಮೆಟ್ರಿಕ್‌ ಅಳವಡಿಕೆಗೆ ನಮ್ಮ ವಿರೋಧ ಇಲ್ಲ. ಆದರೆ ಸರಕಾರದಿಂದ ನೀಡಬೇಕಾದ ಅಗತ್ಯ ಸೌಲಭ್ಯವನ್ನು ನೀಡದೆ, ತುರ್ತಾಗಿ ಬಯೋಮೆಟ್ರಿಕ್‌ ಅಳವಡಿಸಿ ಎನ್ನುವುದು ಸರಿಯಲ್ಲ.
– ತಿಮ್ಮಯ್ಯ ಪುರ್ಲೆ,
 ಸರಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ

 ರಾಜು ಖಾರ್ವಿ ಕೊಡೇರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next