ಬೆಂಗಳೂರು: ಪೌರಕಾರ್ಮಿಕರ ಹಾಜರಾತಿಯಲ್ಲಿ ಯಾವುದೇ ಲೋಪವಾಗದಂತೆ ತಡೆಯುವ ಉದ್ದೇಶದಿಂದ ಬಿಬಿಎಂಪಿ ಪರಿಚಯಿಸಿರುವ ಬಯೋ ಮೆಟ್ರಿಕ್ ಪದ್ಧತಿಯನ್ನು ನಿಷೇಧಿಸಬೇಕು ಎಂದು ಪೌರಕಾರ್ಮಿಕರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗಿತ್ತು.
ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಷೇಧಿಸಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದ್ದು, ಬಯೋಮೆಟ್ರಿಕ್‌ನಿಂದ ಪೌರಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ತಪ್ಪಿಸುವುದು ಮತ್ತು ಅದರಲ್ಲಿನ ಲೋಪಗಳನ್ನು ಸರಿಪಡಿಸಲು ಬಿಬಿಎಂಪಿ ಮುಂದಾಗಿದೆ. ಈ ನಿಟ್ಟಿನಲ್ಲಿ ಮೊದಲ ಹಂತವಾಗಿ ಬಯೋಮೆಟ್ರಿಕ್‌ನ ‘ಮಸ್ಟರಿಂಗ್ ಸೆಂಟರ್’ (ಪೌರಕಾರ್ಮಿಕರ ಹಾಜರಾತಿ ಕೇಂದ್ರಗಳು) ಹೆಚ್ಚಿಸಲು ಬಿಬಿಎಂಪಿ ಮುಂದಾಗಿದೆ.
ಬಯೋಮೆಟ್ರಿಕ್ ಸೆಂಟರ್ ದೂರದ ಪ್ರದೇಶಗಳಲ್ಲಿ ಮಸ್ಟರಿಂಗ್ ಸೆಂಟರ್ ಹೆಚ್ಚಿಸಲು ನಿರ್ಧರಿಸಿದ್ದು, ಬೆಳ್ಳಂದೂರಿ ನಲ್ಲಿ ಈ ಹಿಂದೆ ಇದ್ದ 3 ಮಸ್ಟರಿಂಗ್ ಸೆಂಟರ್‌ಗಳ ಬದಲಿಗೆ 5 ಮಸ್ಟರಿಂಗ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ.
‘ಬಯೋಮೆಟ್ರಿಕ್ ಲೋಪದಿಂದ ಕೂಡಿದ್ದು, ಪೌರಕಾರ್ಮಿಕರು ಬಹಳ ದೂರ ಸಂಚಾರ ಮಾಡಬೇಕು ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮತ್ತಷ್ಟು ಜನ ಸ್ನೇಹಿ ತಂತ್ರಜ್ಞಾನ ಅಳವಡಿ ಸಿಕೊಳ್ಳಲು ಸಹ ಬಿಬಿಎಂಪಿ ಚಿಂತಿಸಿದೆ’ ಎಂದು ವಿಶೇಷ ಆಯುಕ್ತ (ಘನತ್ಯಾಜ್ಯ ವಿಭಾಗ) ರಣದೀಪ್ ಮಾಹಿತಿ ನೀಡಿ ದರು. ‘ಬೆಳಗ್ಗೆ 6.30 ಮತ್ತು 10.30ರ ಒಳಗೆ ಹಾಗೂ ಮಧ್ಯಾಹ್ನ 2.30ರ ಒಳಗೆ ಎಂಟ್ರಿ ಮಾಡದಿದ್ದಲ್ಲಿ ಪೌರಕಾರ್ಮಿಕರ ವೇತನ ಕಡಿತವಾಗಲಿದೆ. ಇದರಿಂದ ಯಾರು ಕೆಲಸ ಮಾಡುತ್ತಿದ್ದಾರೆ, ಯಾರು ಮಾಡು ತ್ತಿಲ್ಲ ಎನ್ನುವುದು ತಿಳಿಯುತ್ತದೆ. ಈ ನಿಯಮವನ್ನು ಸಡಿಲಿಸಲು ಸಾಧ್ಯವಿಲ್ಲ. ಇದರಲ್ಲಿರುವ ಲೋಪಗಳನ್ನು ಸರಿಪಡಿಸಿ ಕೊಳ್ಳಲಾಗುವುದು’ ಎಂದು ರಣದೀಪ್ ಹೇಳಿದರು.
‘ಪೌರಕಾರ್ಮಿಕರು ಬಯೋಮೆಟ್ರಿಕ್ ಎಂಟ್ರಿ ಮಾಡಲು ತುಂಬಾ ದೂರಬರುವು ದನ್ನು ತಪ್ಪಿಸುವ ಉದ್ದೇಶದಿಂದ ಬಯೋ ಮೆಟ್ರಿಕ್ ಸೆಂಟರ್‌ಗಳನ್ನು ಹೆಚ್ಚಿಸಲಾಗು ತ್ತಿದೆ. ಈಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ 532 ಮಸ್ಟರಿಂಗ್ ಸೆಂಟರ್‌ಗಳಿವೆ. ಬೆಳ್ಳಂದೂರು 25ಕಿ.ಮೀ ವ್ಯಾಪ್ತಿ ಇದೆ. ಇಲ್ಲಿ ಮಸ್ಟರಿಂಗ್ ಹೆಚ್ಚಿಸಲು ಕೋರಲಾಗಿತ್ತು. ಇದೇ ರೀತಿ ಬೇಡಿಕೆಗಳಿಗೆ ಅನುಗುಣವಾಗಿ ಮಸ್ಟರಿಂಗ್ ಸೆಂಟರ್‌ಗಳನ್ನು ಹೆಚ್ಚಿಸಲಾಗುವುದು’ ಎಂದರು.