Advertisement

ಬರಲಿದೆ…ಬಾಸ್ಕೆಟ್‌ಬಾಲ್‌ ತಾರೆಯ ಜೀವನ ಚರಿತ್ರೆ

02:36 AM Aug 03, 2020 | Hari Prasad |

ಭಾರತದ ಬಾಸ್ಕೆಟ್‌ಬಾಲ್‌ ತಂಡದ ಅತೀ ಕಿರಿಯ ನಾಯಕ ವಿಶೇಷ್‌ ಭೃಗುವಂಶಿ ಅವರ ಸ್ಫೂರ್ತಿದಾಯಕ ಕಥನ

Advertisement

ಹೊಸದಿಲ್ಲಿ: ವಿಶೇಷ್‌ ಭೃಗುವಂಶಿ… ಭಾರತದ ಬಾಸ್ಕೆಟ್‌ಬಾಲ್‌ ಇತಿಹಾಸದಲ್ಲಿ ಈ ಹೆಸರಿಗೆ ವಿಶೇಷ ಮಹತ್ವವಿದೆ.

ಅವರು ಭಾರತೀಯ ಬಾಸ್ಕೆಟ್‌ಬಾಲ್‌ ತಂಡದ ಅತೀ ಕಿರಿಯ ನಾಯಕನೆಂಬ ದಾಖಲೆ ಹೊಂದಿದ್ದಾರೆ.

ಇವರ ಸ್ಫೂರ್ತಿದಾಯಕ ಜೀವನ ಕಥನವೀಗ ಪುಸ್ತಕ ರೂಪದಲ್ಲಿ ಹೊರ ಬರಲಿದೆ.

ವಿಶೇಷ್‌ ಭೃಗುವಂಶಿ ಅವರ ಈ ಜೀವನ ಚರಿತ್ರೆಯ ಹೆಸರು ‘ವಿಶೇಷ್‌: ಕೋಡ್‌ ಟು ವಿನ್‌’. 130 ಪುಟಗಳ ಈ ಪುಸ್ತಕ ರಾಷ್ಟ್ರೀಯ ಕ್ರೀಡಾ ದಿನವಾದ ಆ. 29ರಂದು ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

Advertisement

ವಾರಾಣಸಿಯವರಾದ 29 ವರ್ಷದ ವಿಶೇಷ್‌ ಭೃಗುವಂಶಿ 2007ರಿಂದ ಭಾರತೀಯ ಬಾಸ್ಕೆಟ್‌ಬಾಲ್‌ ತಂಡವನ್ನು ಪ್ರತಿನಿಧಿಸುತ್ತ ಬಂದಿದ್ದಾರೆ.

2010ರಲ್ಲಿ ಇವರಿಗೆ ತಂಡದ ನಾಯಕತ್ವ ಒಲಿದು ಬಂದಿತ್ತು. ಭಾರತೀಯ ಬಾಸ್ಕೆಟ್‌ಬಾಲ್‌ ತಂಡದ ಅತೀ ಕಿರಿಯ ಕಪ್ತಾನನೆಂಬ ಹಿರಿಮೆ ಇವರದಾಗಿತ್ತು. ಆಸ್ಟ್ರೇಲಿ ಯದ ನ್ಯಾಶನಲ್‌ ಬಾಸ್ಕೆಟ್‌ಬಾಲ್‌ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಯೂ ಭೃಗುವಂಶಿ ಅವರದಾಗಿದೆ.

‘ಕ್ರಿಕೆಟ್‌ ಹುಚ್ಚಿನ ಭಾರತದ ಯುವ ಜನತೆಗೆ ಬಾಸ್ಕೆಟ್‌ಬಾಲ್‌ ಪ್ರೀತಿ ಮೂಡಿಸಬೇಕೆಂಬುದು ನನ್ನ ಉದ್ದೇಶ. ಇವರಿಗೆಲ್ಲ ವಿಶೇಷ್‌ ಭೃಗುವಂಶಿ ಅವರ ಯಶೋಗಾಥೆ ಸ್ಫೂರ್ತಿಯಾಗಲಿದೆ ಎಂಬ ವಿಶ್ವಾಸ ನನ್ನದು’ ಎಂಬುದಾಗಿ ಲೇಖಕಿ ನಿರುಪಮಾ ಯಾದವ್‌ ಹೇಳಿದ್ದಾರೆ.

13 ವರ್ಷಗಳ ಪಯಣ
13 ವರ್ಷಗಳ ಈ ಕ್ರೀಡಾ ಜೀವನದಲ್ಲಿ ವಿಶೇಷ್‌ ಭೃಗುವಂಶಿ ಅನೇಕ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಏಶ್ಯಾಡ್‌ (2), ಏಶ್ಯನ್‌ ಚಾಂಪಿಯನ್‌ಶಿಪ್‌ (5), ಬೀಚ್‌ ಏಶ್ಯಾಡ್‌ (3), ಇಂಡೋರ್‌ ಏಶ್ಯಾಡ್‌ (2), ಸೌತ್‌ ಏಶ್ಯನ್‌ ಗೇಮ್ಸ್‌ (2) ಮತ್ತು ಸೌತ್‌ ಏಶ್ಯನ್‌ ಚಾಂಪಿಯನ್‌ಶಿಪ್‌ (7 ಸಲ) ಇದರಲ್ಲಿ ಪ್ರಮುಖವಾದುದು.

Advertisement

Udayavani is now on Telegram. Click here to join our channel and stay updated with the latest news.

Next