Advertisement

ಜೆಟಿ ಕಾಲೇಜಿನಲ್ಲಿ ಜೈವಿಕ ಇಂಧನ ಕ್ರಾಂತಿ

06:40 AM Sep 10, 2018 | |

ಗದಗ: ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಿಂದ ಪರಿಸ್ಥಿತಿ ಬಿಗಡಾಯಿಸಿದ್ದು, ಸೋಮವಾರ “ಭಾರತ್‌ ಬಂದ್‌’ಗೆ ಕರೆ ನೀಡಲಾಗಿದೆ. ಆದರೆ, ನಗರದ ಜಿಲ್ಲಾ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರ ಪರ್ಯಾಯ ಇಂಧನದತ್ತ ಬೆರಳು ತೋರಿದೆ. ಸದ್ದಿಲ್ಲದೆ ಜೈವಿಕ ಇಂಧನ ಬಳಕೆ ಜತೆಗೆ, ಜನರನ್ನು ಪ್ರೇರೇಪಿಸುತ್ತಿದೆ.

Advertisement

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ 2012ರಲ್ಲಿ ಜಿಲ್ಲೆಗೆ ಮಂಜೂರಾಗಿದೆ. ನಗರದ ಜಗದ್ಗುರು ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾತ್ಯಕ್ಷಿಕೆ ಕೇಂದ್ರ, ಕಾಲೇಜಿನ ವಾಹನಗಳಿಗೆ ಜೈವಿಕ ಇಂಧನ ಬಳಸುವುದರ ಜತೆಗೆ ಪರ್ಯಾಯ ಇಂಧನ ಬಳಕೆಗೆ ಸಾರ್ವಜನಿಕರನ್ನು ಪ್ರೇರೇಪಿಸುತ್ತಿದೆ.

ಕೇಂದ್ರದಲ್ಲಿ ಹೊಂಗೆ, ಬೇವು ಹಾಗೂ ಜಟ್ರೋಪ ಬೀಜಗಳಿಂದ ಬಯೋ ಡೀಸೆಲ್‌ ಉತ್ಪಾದಿಸಲಾಗುತ್ತಿದೆ.ಇದಕ್ಕೆ ಬೇಕಾಗುವ ಬೀಜಗಳನ್ನು ಗದಗ, ಕೊಪ್ಪಳ,ದಾವಣಗೆರೆ ಭಾಗದ ರೈತರಿಂದಲೇ ಪ್ರತಿ ಕೆಜಿಗೆ 10ರಿಂದ 25 ರೂ. ಖರೀದಿಸಲಾಗುತ್ತಿದೆ. ನಿಗಮದ ಸಂಸ್ಕರಣಾ ಘಟಕದಲ್ಲಿ ರುಬ್ಬಿ ಎಣ್ಣೆ ತೆಗೆದ ಬಳಿಕ ಎಥೆನಾಲ್‌,ಮಿಥೇನಾಲ್‌ ಹಾಗೂ ನ್ಯಾಫೂ¤àಲಿನ್‌ ರಾಸಾಯನಿಕ ಮಿಶ್ರಣವನ್ನು ವಿವಿಧ ಯಂತ್ರೋಪಕರಣಗಳಲ್ಲಿ ಸಂಸ್ಕರಿಸಿ ಬಯೋ ಡೀಸೆಲ್‌ ಉತ್ಪಾದಿಸಲಾಗುತ್ತಿದೆ.

ಲೀಟರ್‌ ಡೀಸೆಲ್‌ಗೆ ಏನೇನು ಬೇಕು?: ಆ ಪೈಕಿ 1 ಕೆಜಿ ಹೊಂಗೆ, 7 ಕೆಜಿ ಜೆಟ್ರೋಪ್‌ (ಕಾಡು ಔಡಲ) ಹಾಗೂ 2 ಕ್ವಿಂಟಲ್‌ ಬೇವು ಬೀಜಗಳಿಂದ 1 ಲೀಟರ್‌ ಬಯೋ ಡೀಸೆಲ್‌ ತಯಾರಿಸಲಾಗುತ್ತದೆ. ಇದರ ಜತೆಗೆ, 3-5 ಕೆಜಿ ಹಿಂಡಿ, ಜಟ್ರೋಪ್‌ ಮತ್ತು ಹೊಂಗೆಯಿಂದ ಬರುವ 200 ಎಂಎಲ್‌ ಗ್ಲಿಸರಿನ್‌ ಸಹ ಉತ್ಪಾದಿಸಲಾಗುತ್ತಿದೆ. ಮಾಹಿತಿ ಕೇಂದ್ರದಲ್ಲಿ ಪ್ರತಿ ನಿತ್ಯ 30-45 ಲೀ.ಉತ್ಪಾದಿಸಲಾಗುತ್ತಿದ್ದು, ಜೆಟಿ ಕಾಲೇಜಿನ ಎಲ್ಲ ವಾಹನಗಳಿಗೆ ಇದನ್ನು ಬಳಸಲಾಗುತ್ತಿದೆ. ಅಲ್ಲದೆ, ಸ್ವಯಂ ಪ್ರೇರಿತವಾಗಿ ಮುಂದೆ ಬರುವ ಗ್ರಾಹಕರಿಗೆ ಪ್ರತಿ ಲೀಟರ್‌ಗೆ 45 ರೂ.ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಹೊಂಗೆ ಹಿಂಡಿಗೆ ಬೇಡಿಕೆ: ಮಣ್ಣಿನ ಫಲವತ್ತತೆ ಹೆಚ್ಚಿಸುವ, ಕಾಂಡ ಕೊರೆತ ಕೀಟನಾಶಕವಾಗಿರುವ ಹೊಂಗೆ ಹಿಂಡಿಗೆ
(ಉಪ ಉತ್ಪನ್ನ) ರೈತರಿಂದ ಹೆಚ್ಚಿನ ಬೇಡಿಕೆಯಿದೆ. ಪ್ರತಿ ಕೆಜಿಗೆ 20 ರೂ.ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸಾಬೂನು ತಯಾರಕರು 100 ರೂ.ಬೆಲೆಯಲ್ಲಿ ಒಂದು ಲೀಟರ್‌ ದರದಲ್ಲಿ ಗ್ಲಿಸರಿನ್‌ ಕೊಂಡೊಯ್ಯುತ್ತಿದ್ದಾರೆ.

Advertisement

ಜೊತೆಗೆ, ಇದು ನಗರದ ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಿಗೆ ಜೈವಿಕ ಇಂಧನದ ಬಗ್ಗೆ ಅಧ್ಯಯನ, ಸಂಶೋಧನೆ ನಡೆಸಲೂ ಪೂರಕವಾಗಿದೆ ಎನ್ನುತ್ತಾರೆ ಕೇಂದ್ರದ ತಾಂತ್ರಿಕ ಅಧಿಕಾರಿ ಎಂ.ಎಸ್‌.ಪಾಟೀಲ. ಇತರ ಡೀಸೆಲ್‌ಗೆ ಹೋಲಿಸಿದರೆ ಬಯೋಡೀಸೆಲ್‌ ಬೆಲೆ ಕಡಿಮೆ. ಪರ್ಯಾಯ ಇಂಧನ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚಿನ ಒತ್ತು ನೀಡಿದರೆ ಭವಿಷ್ಯದಲ್ಲಿ ದೇಶ ಸ್ವಾವಲಂಬನೆ ಕಾಣಬಹುದು. ಪರಿಸರ ಮಾಲಿನ್ಯವನ್ನೂ ತಡೆಯಬಹುದು ಎಂಬುದು ತಜ್ಞರ ಅಭಿಪ್ರಾಯ.

ಕೆಲ ಯಂತ್ರೋಪಕರಣಗಳಿಗೆ ಶೇ.100, ಕೃಷಿ ಪಂಪ್‌ಸೆಟ್‌ಗೆ ಶೇ.80, ಇನ್ನೋವಾ, ಟ್ರಾÂಕ್ಟರ್‌ಗಳಿಗೆ ಶೇ.50, ಇತರ ಡೀಸೆಲ್‌ ವಾಹನಗಳಿಗೆ ಶೇ.40ರಷ್ಟು ಬಯೋ ಡೀಸೆಲ್‌ ಬಳಸಬಹುದು. ಬಯೋಡೀಸೆಲ್‌ ಮಾರಾಟಕ್ಕಿಂತ ಜಾಗೃತಿ ಮೂಡಿಸುವುದು ಕೇಂದ್ರದ ಮುಖ್ಯ ಉದ್ದೇಶ. ನಿಗಮದಿಂದ ಇಂಧನ ಪ್ರಮಾಣೀಕರಿಸುವುದು ಹಾಗೂ ಪ್ರತ್ಯೇಕ ಪೆಟ್ರೋಲ್‌ ಬಂಕ್‌ ಸ್ಥಾಪನೆಗೆ ಚಿಂತನೆ ನಡೆದಿದೆ.
– ನಿಂಗಪ್ಪ ಪೂಜಾರ, ಘಟಕದ ಸಂಯೋಜಕರು

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next