Advertisement

ಜೈವಿಕ ಇಂಧನ ಪಾರ್ಕ್‌ಗೆ ಸಿಕ್ಕಿಲ್ಲ ಉದ್ಘಾಟನೆ ಭಾಗ್ಯ

01:48 PM Nov 26, 2019 | Team Udayavani |

ಕಕ್ಕೇರಾ: ತಿಂಥಣಿ ಗ್ರಾಮದ ಬಳಿ ಇರುವ ರಾಜ್ಯದ ಎರಡನೇ ಜೈವಿಕ ಇಂಧನ ಪಾರ್ಕ್ ಗೆ ಇನ್ನೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ.

Advertisement

10ರಂದು ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆದಂದು ಉದ್ಘಾಟನೆಯಾಗಲಿದೆ ಎಂದು ಸಂಬಂಧಿಸಿದ ಅಧಿಕಾರಿಗಳೇ ಹೇಳಿದ್ದರು. ಆದರೂ ಈಗ ನಾಲ್ಕು ತಿಂಗಳಾದರೂ ಇನ್ನೂ ಉದ್ಘಾಟನೆಯಾಗದೇ ದಿನ ದೂಡಲಾಗುತ್ತಿದೆ.

ತಿಂಥಣಿ ಗ್ರಾಮದ ಬಳಿ 2016-17ನೇ ಸಾಲಿನಲ್ಲಿ ಸುಮಾರು 1 ಕೋಟಿ ರೂ. ವೆಚ್ಚದ ಅನುದಾನದಲ್ಲಿ ಪಾರ್ಕ್‌ ನಿರ್ಮಿಸಲಾಗಿದೆ. ಬಹುತೇಕ ಕಟ್ಟಡ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಗತಿಸಿವೆ. ಈ ಬಗ್ಗೆ ಸಕ್ತ ಕಾಳಜಿ ಇಲ್ಲದಂತಾಗಿದೆ ಎಂಬ ಮಾತು ಕೇಳಿ ಬಂದಿದೆ. ಅಧಿಕಾರಿಗಳು ಜೈವಿಕ ಇಂಧನ ಪಾರ್ಕ್‌ ಕಚೇರಿಯಲ್ಲಿಯೇ ಉಳಿದುಕೊಂಡು ಅಭಿವೃದ್ಧಿಗೊಳಿಸಲು ಹಾಗೂ ವಿವಿಧ ಜಾತಿ ಮರಗಳನ್ನು ನಾಶವಾಗದಂತೆ ಪಾಲನೆ-ಪೋಷಣೆ ಮಾಡಿಕೊಂಡು ಹೋಗಬೇಕು. ಇಲ್ಲಿ ಖಾಯಂ ಅಧಿಕಾರಿಗಳೇ ಇಲ್ಲ. ಶಹಾಪುರ ಭೀಮರಾಯನ ಗುಡಿ ಪ್ರಧಾನ ಅನ್ವೇಷಕರೇ ಇದರ ಉಸ್ತುವಾರಿ ವಹಿಸಿಕೊಂಡು ಹೋಗುತ್ತಿದ್ದಾರೆ. ಈ ಭಾಗದ ರಾಯಚೂರು ಮತ್ತು ಯಾದಗಿರಿ ಜಿಲ್ಲಾ ಪ್ರದೇಶವನ್ನೊಳಗೊಂಡ ರೈತರಿಗೆ ಜೈವಿಕ ಇಂಧನದ ಬಗ್ಗೆ ತರಬೇತಿ ನೀಡಿ ಪ್ರೋತ್ಸಾಯಿಸಲು ಉಪಯುಕ್ತವಾಗಲು ಕಚೇರಿ ಸ್ಥಾಪಿಸಲಾಗಿದೆ. ಅದು ಈಗ ಇದ್ದೂ ಇಲ್ಲದಂತಾಗಿದೆ.

ಕಚೇರಿಯಲ್ಲಿ ಜೈವಿಕ ಸಸ್ಯಗಳ ಬಗ್ಗೆ ರೈತರಿಗೆ ತರಬೇತಿ ನೀಡಲು ದೊಡ್ಡ ಹಾಲ್‌ ಕೂಡ ಇದೆ. ಇಲ್ಲಿಯೇ ಕಾರ್ಯಕ್ರಮ ನಡೆಸಿ ಪ್ರತಿಯೊಬ್ಬ ರೈತರಿಗೆ ತರಬೇತಿ ನೀಡುವುದರ ಜತೆಗೆ ಪ್ರೋತ್ಸಾಯಿಸಿ ಬಂಜರು ಭೂಮಿಯಲ್ಲಿ ಜೈವಿಕ ಸಸಿ ನೆಡುವಂತೆ ಪ್ರೇರಿಪಿಸುವುದಾಗಿದೆ.

ಆದರೆ ಇನ್ನೂ ಉದ್ಘಾಟನೆ ಇಲ್ಲದೆ ಈ ಒಂದು ಕಚೇರಿ ಯಾರಿಗೂ ಅಷ್ಟೊಂದು ಉಪಯುಕ್ತವಾಗಿಲ್ಲದಿರುವುದು ಬೇಸರ ತರಿಸಿದೆ. ಸುತ್ತಲಿನ ಶಾಲಾ ವಿದ್ಯಾರ್ಥಿಗಳಿಗೂ ಜೈವಿಕ್‌ ಇಂಧನ ಹಾಗೂ ಸಸ್ಯಗಳ ಕುರಿತು ಅರಿವು ಮೂಡಿಸಬೇಕು. ಜೈವಿಕ್‌ ಇಂಧನ ಪಾರ್ಕ್‌ಗೆ ಭೇಟಿ ನೀಡಿದಾಗ ಆಡಳಿತಾತ್ಮಕ ಅಧಿಕಾರಿಗಳು ಶಾಲಾ ಮಕ್ಕಳಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಆದರೆ ಅಧಿಕಾರಿಗಳು ತಮಗೆ ತಿಳಿದಾಗ ಕಚೇರಿ ಬರುವುದರಿಂದ ವಿದ್ಯಾರ್ಥಿಗಳಿಗೆ ಮಾಹಿತಿ ಸಿಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.

Advertisement

ಪರಿಸರ ಸ್ನೇಹಿ ಜೈವಿಕ ಇಂಧನ ಪಾರ್ಕ್‌ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಸಿದ್ಧ ಗೊಂಡಿರುವ ಆಡಳಿತ ಕಚೇರಿಯನ್ನು ಆದಷ್ಟು ಬೇಗ ಉದ್ಘಾಟಿಸಿ ಈ ಭಾಗದ ರೈತರಿಗೆ ತರಬೇತಿ ಸಿಗಬೇಕು. ಹಾಗೇ ಅಧಿಕಾರಿಗಳಿಂದ ಅಗತ್ಯ ಮಾಹಿತಿ ದೊರಕುವಂತಾಗಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

 

-ಬಾಲಪ್ಪ ಎಂ. ಕುಪ್ಪಿ

Advertisement

Udayavani is now on Telegram. Click here to join our channel and stay updated with the latest news.

Next