Advertisement

ಮೂತ್ರದಿಂದ ಜೈವಿಕ ಇಟ್ಟಿಗೆ!

08:29 AM Oct 30, 2018 | Harsha Rao |

ಜೊಹಾನ್ಸ್‌ಬರ್ಗ್‌: ಮಾನವನ ಮೂತ್ರ ಬಳಸಿ ಇಟ್ಟಿಗೆ ತಯಾರಿಸುವ ವಿಶಿಷ್ಟ ವಿಧಾನ ವನ್ನು ದಕ್ಷಿಣ ಆಫ್ರಿಕಾದ ಕೇಪ್‌ ಟೌನ್‌ ವಿಶ್ವ ವಿದ್ಯಾಲಯದ ಸಂಶೋಧಕರು ಕಂಡು ಕೊಂಡಿದ್ದಾರೆ. ಇದು ವಿಶ್ವದ ಪ್ರಥಮ ಜೈವಿಕ ಇಟ್ಟಿಗೆ ಎಂಬ ಹೆಸರನ್ನೂ ಪಡೆದುಕೊಂಡಿದೆ.

Advertisement

ಮೈಕ್ರೋಬಯಲ್‌ ಕಾಬೊìನೇಟ್‌ ಪ್ರಿಸಿಪಿಟೇಶನ್‌ ಎಂಬ ನೈಸರ್ಗಿಕ ಪ್ರಕ್ರಿಯೆಯಿಂದ ಇಟ್ಟಿಗೆಯನ್ನು ತಯಾರಿಸಲಾಗಿದೆ. ಮರಳನ್ನು ಬ್ಯಾಕ್ಟೀರಿಯಾಗಳ ಬಳಕೆಯಿಂದ ಸಂಕೋಚನಗೊಳಿಸಲಾಗುತ್ತದೆ. ಈ ಬ್ಯಾಕ್ಟೀ ರಿಯಾಗಳು ಮೂತ್ರದಲ್ಲಿನ ಯುರೀಸ್‌ ಕಿಣ್ವಗಳನ್ನು ಒಡೆದು, ಕ್ಯಾಲಿÏಯಂ ಕಾಬೊì ನೇಟ್‌ ಉತ್ಪಾದಿಸುತ್ತವೆ. ಈ ಪ್ರಕ್ರಿಯೆಯಿಂದ ಮರಳು ಒಂದಕ್ಕೊಂದು ಅಂಟಿಕೊಳ್ಳುತ್ತದೆ. ಈ ವಿಧಾನ ಬಳಸಿ ಯಾವುದೇ ಆಕೃತಿಯಲ್ಲಿ ಇಟ್ಟಿಗೆ ತಯಾರಿಸಬಹುದು ಎಂದು ಎನ್ವಿರಾನ್ಮೆಂಟಲ್‌ ಕೆಮಿಕಲ್‌ ಇಂಜಿನಿಯರಿಂಗ್‌ ಜರ್ನಲ್‌ನಲ್ಲಿ ವಿವರಿಸಲಾಗಿದೆ.

ಸಾಮಾನ್ಯವಾಗಿ ಇಟ್ಟಿಗೆಗಳನ್ನು 1400 ಡಿಗ್ರಿ ಉಷ್ಣತೆಯಲ್ಲಿ ಉತ್ಪಾದಿಸುವುದರಿಂದ, ಭಾರಿ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೆ„ಡ್‌ ಉತ್ಪತ್ತಿ ಯಾಗುತ್ತದೆ. ಆದರೆ ಈ ಜೈವಿಕ ಇಟ್ಟಿಗೆಗಳು ಸಾಮಾನ್ಯ ತಾಪಮಾನದಲ್ಲೇ ತಯಾರಾಗುವುದರಿಂದ ಪರಿಸರ ಸ್ನೇಹಿಯೂ ಆಗಿರಲಿದೆ ಎಂದು ಕೇಪ್‌ಟೌನ್‌ ವಿವಿ ಸಂಶೋಧಕರಾದ ಸುಜಾನೆ ಲ್ಯಾಂಬರ್ಟ್‌ ಮತ್ತು ವುಖೆಟಾ ಮುಖಾರಿ ಹೇಳಿದ್ದಾರೆ.

ಗ್ರಾಹಕರ ಬೇಡಿಕೆಗೆ ತಕ್ಕಂತೆ ಇಟ್ಟಿಗೆಗಳನ್ನು ಗಟ್ಟಿಗೊಳಿಸಬಹುದು. ಸಾಮಾನ್ಯಕ್ಕಿಂತ ಹೆಚ್ಚು ಗಟ್ಟಿ ಇಟ್ಟಿಗೆಗಳು ಬೇಕಾದರೆ, ಬ್ಯಾಕ್ಟೀರಿಯಾ ವನ್ನು ಹೆಚ್ಚು ಹೊತ್ತು ಬೆಳೆಯಲು ಬಿಡಬೇಕು. ಬ್ಯಾಕ್ಟೀರಿಯಾ ಹೆಚ್ಚು ಹೊತ್ತು ಸಕ್ರಿಯ ವಾಗಿದ್ದಷ್ಟೂ ಇಟ್ಟಿಗೆ ಗಟ್ಟಿಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next