Advertisement
ಅಂದು ಮೊದಲು ಮಾತು ಶುರು ಮಾಡಿದ್ದು, ನಿರ್ಮಾಪಕ ವಿಜಯ್ ಕುಮಾರ್. “ನನ್ನ ಮಗ ಆಕಾಶ್‌ಗೆ ಸಿನಿಮಾ ಮೇಲೆ ಆಸಕ್ತಿ ಇತ್ತು. ಮುಂಬೈನ ಅನುಪಮ್ ಖೇರ್ ನಟನೆ ಶಾಲೆಯಲ್ಲಿ ಕಲಿತು ಬಂದ ಬಳಿಕ ಸಂತೋಷ್ ಒಂದು ಕಥೆ ಹೇಳಿದರು. ಮಗನನ್ನು ಪರಿಚಯಿಸಲು ಒಳ್ಳೆಯ ಕಥೆ ಎನಿಸಿತು. ಆದರೆ, ಚಿತ್ರದಲ್ಲಿ ಡ್ಯಾನ್ಸ್ ಕೋಚ್ ಪಾತ್ರಕ್ಕೆ ಹಲವು ನಟರ ಬಳಿ ಹೋಗಿ ಕೇಳಿಕೊಂಡರೂ ಯಾರೊಬ್ಬರೂ ಒಪ್ಪಲಿಲ್ಲ. ಕೊನೆಗೆ ಧರ್ಮ ಕೀರ್ತಿರಾಜ್ ಅವರು ಪಾತ್ರ ಮಾಡಲು ಒಪ್ಪಿದ್ದರಿಂದ ಚಿತ್ರ ಶುರುವಾಯಿತು. ಇದು ಡ್ಯಾನ್ಸ್ ಕುರಿತ ಸಿನಿಮಾ. ಇಲ್ಲಿ ಒಳ್ಳೆಯ ಸಂದೇಶವೂ ಇದೆ. ಈಗಿನ ಟ್ರೆಂಡ್‌ಗೆ ತಕ್ಕ ಚಿತ್ರ ಮಾಡಿರುವ ಖುಷಿ ನಮ್ಮದು’ ಎಂದರು ವಿಜಯ್‌ಕುಮಾರ್.
ಕಾರಣವಾಗುವಂತಹ ಪಾತ್ರ ನನ್ನದು. ಸುಮಾರು 40 ದಿನಗಳ ಕಾಲ ಬೆಳಗಾವಿಯಲ್ಲಿ ಚಿತ್ರೀಕರಣವಾಗಿದೆ. ಇಲ್ಲಿ ನಾನು ಹೀರೋ ಅಂತೇನಿಲ್ಲ. ಕಥೆ ಮುಖ್ಯ. ಆಕಾಶ್‌ಗೆ ಮೊದಲ ಚಿತ್ರವಾದರೂ ಅನುಭವಿಯಂತೆ ನಟಿಸಿದ್ದಾನೆ ಎಂದು ಆಕಾಶ್‌ಗೆ ಮಾರ್ಕ್ಸ್ ಕೊಟ್ಟರು ಧರ್ಮ. ನಾಯಕ ಆಕಾಶ್‌ಗೆ ಇದು ಮೊದಲ ಚಿತ್ರ. “ಪೂರ್ಣ ತಯಾರಿಯೊಂದಿಗೇ ನಾನು ಕ್ಯಾಮೆರಾ ಮುಂದೆ ನಿಂತಿದ್ದೇನೆ. ಚಿಕ್ಕಂದಿನಲ್ಲಿ ಇದ್ದ ಆಸೆ ಈಗ ಈಡೇರಿದೆ. ಇಡೀ ಕುಟುಂಬ ನನಗಾಗಿ ಈ ಚಿತ್ರ ಮಾಡಿದೆ. ಶೇ.100 ರಷ್ಟು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂಬ ನಂಬಿಕೆ ನನ್ನದು. ಒಬ್ಬ ಡ್ಯಾನ್ಸರ್ ಸ್ಪರ್ಧೆಯಲ್ಲಿ ಪಾಲ್ಗೊಂಡು ತನ್ನ ಬದುಕನ್ನು ಹೇಗೆ ರೂಪಿಸಿಕೊಳ್ತಾನೆ ಎಂಬ ಕಥೆ
ಇಲ್ಲಿದೆ. ಹೊಸ ಪ್ರತಿಭೆಗೆ ನಿಮ್ಮ ಸಹಕಾರ ಇರಲಿ’ ಎಂದರು ಆಕಾಶ್. ಸಂಗೀತ ನಿರ್ದೇಶಕ ವಿನು ಮನಸು ಐದು ಹಾಡುಗಳ ಜೊತೆಗೆ ಎರಡು ತುಣುಕು ನೀಡಿದ್ದಾರಂತೆ. ಪತ್ರಕರ್ತರ ಮುಂದೆ ಎಂದು ಹೆಚ್ಚು ಮಾತನಾಡದ ಮ್ಯಾಥುರಾಜನ್ ಅಂದು ಸಿಕ್ಕಾಪಟ್ಟೆ ಮಾತನಾಡಿದರು. ಮಮತಾ ರಾವತ್, ನಿಮಿಕಾ ರತ್ನಾಕರ್ ಮತ್ತು ಶಿಲ್ಪಾ ನಾಯಕಿಯರು.