ಹೊಸದಿಲ್ಲಿ: ಶಬರಿಮಲೆಗೆ ಆಗಮಿಸುವ ಎಲ್ಲ ವಯೋಮಾನದ ಮಹಿಳೆಯರಿಗೆ ರಕ್ಷಣೆ ಒದಗಿಸಬೇಕು ಎಂದು ಬಿಂದೂ ಅಮ್ಮಿನಿ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
ಎಲ್ಲ ವಯೋಮಾನದ ಮಹಿಳೆಯರು ದೇಗುಲ ಪ್ರವೇಶಿಸಬಹುದು ಎಂಬ 2018ರ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಿಲ್ಲ. ಆದ್ದರಿಂದ ಶಬರಿಮಲೆಗೆ ಬರುವ ಎಲ್ಲ ಮಹಿಳೆಯರಿಗೆ ಕೇರಳ ರಾಜ್ಯ ಸರಕಾರ ರಕ್ಷಣೆ ನೀಡಬೇಕು ಎಂದು ಅಮ್ಮಿನಿ ಅವರು ಅರ್ಜಿಯಲ್ಲಿ ಉಲ್ಲೇಖೀಸಿದ್ದಾರೆ. ಈ ಕುರಿತಂತೆ ಈ ಹಿಂದಿನ ತೀರ್ಪನ್ನು ಪಾಲಿಸಲು ರಾಜ್ಯದ ಸರಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ.
ಕಳೆದ ವರ್ಷ ಶಬರಿಮಲೆ ದೇಗುಲ ಪ್ರವೇಶಿಸಿದ್ದ ಇಬ್ಬರು ಮಹಿಳೆಯರಲ್ಲಿ ಕಾರ್ಯಕರ್ತೆ ಬಿಂದು ಅಮ್ಮಿನಿ ಕೂಡ ಇದ್ದರು. ವಯಸ್ಸಿನ ಮಿತಿ ಇಲ್ಲದೆ ಎಲ್ಲ ವಯೋಮಾನದ ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಬಹುದು ಎಂದು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಆ ಬಳಿಕ ಮಹಿಳೆಯರು ಪೊಲೀಸರ ರಕ್ಷಣೆಯಲ್ಲಿ ಶಬರಿಮಲೆ ಪ್ರವೇಶಿಸಿದ್ದರು.
ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತ ಪ್ರಕರಣವನ್ನು ಸುಪ್ರೀಂಕೋರ್ಟ್ ನವೆಂಬರ್ 14ರಂದು 7ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಹಿಸಿದ ಬಳಿಕ ರಾಜ್ಯ ಸರಕಾರದ ನಿಲುವಿನಲ್ಲಿ ಬದಲಾವಣೆಯಾಗಿದೆ. ನ್ಯಾಯಾಲಯ ಹೇಳುವವರೆಗೂ ದೇಗುಲ ಪ್ರವೇಶಿಸುವ ಮಹಿಳೆಯರಿಗೆ ರಕ್ಷಣೆ ಒದಗಿಸಲಾಗುವುದಿಲ್ಲ ಎಂದು ಕೇರಳ ಸರಕಾರ ಹೇಳಿದೆ. ಶಬರಿಮಲೆ ಕುರಿತಾಗಿ ಅಲ್ಲಿನ ರಾಜ್ಯಸರಕಾರ ತಾಳಿದ ನಿಲುವು ಚುನಾವಣೆಯಲ್ಲಿ ಜಾನಾಕ್ರೋಶವಾಗಿ ಆಕ್ರೋಶವಾಗಿ ಬದಲಾಗಿತ್ತು.
ಪುಣೆ ಮೂಲದ ತೃಪ್ತಿ ದೇಸಾಯಿ ಅವರೊಂದಿಗೆ ನವೆಂಬರ್ 26ರಂದು ಅವರು ಶಬರಿಮಲೆ ದೇಗುಲ ಪ್ರವೇಶಿಸಲು ಮುಂದಾದಾಗ ಪೆಪ್ಪರ್ ಸ್ಪ್ರೆà ಮಾಡುವ ಮೂಲಕ ದಾಳಿ ಮಾಡಿದ್ದರು.
ಎಲ್ಲಾ ವಯಸ್ಸಿನ ಮಹಿಳೆಯರು ಮತ್ತು ಬಾಲಕಿಯರಿಗೆ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡುವ ಸುಪ್ರೀಂ ಕೋರ್ಟ್‌ನ 2018ರ ತೀರ್ಪನ್ನು ಕೇರಳ ಸರಕಾರ ಬಹಿರಂಗವಾಗಿ ಧಿಕ್ಕರಿಸಿದೆ. ದೇಗುಲ ಪ್ರವೇಶಿಸಿದ ಮಹಿಳೆಯರ ಮೇಲೆ ಕೆಲವು ರಾಸಾಯನಿಕ ವಸ್ತುಗಳನ್ನು ಸಿಂಪಡಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖೀಸಲಾಗಿದೆ.