Advertisement

ಪಂಜಾಬ್‌ ಕ್ರೀಡಾ ಕೌನ್ಸಿಲ್‌ಗೆ ಹರ್ಭಜನ್‌, ಬಿಂದ್ರಾ

10:31 PM Aug 17, 2019 | Team Udayavani |

ಚಂಡೀಗಢ: ಖ್ಯಾತ ಕ್ರಿಕೆಟಿಗ ಹರ್ಭಜನ್‌ ಸಿಂಗ್‌, ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಶೂಟರ್‌ ಅಭಿನವ್‌ ಬಿಂದ್ರಾ ಸೇರಿದಂತೆ ಐವರು ಕ್ರೀಡಾ ತಾರೆಯರು ಪಂಜಾಬ್‌ ಇನ್‌ಸ್ಟಿಟ್ಯೂಟ್‌ ಆಫ್ ನ್ಪೋರ್ಟ್ಸ್ (ಪಿಐಎಸ್‌) ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Advertisement

ಶನಿವಾರ ಐವರು ತಾರೆಯರ ಆಯ್ಕೆಯನ್ನು ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅಧಿಕೃತವಾಗಿ ಅನುಮೋದಿಸಿದರು. ಸಮಿತಿಯ ಇತರರೆಂದರೆ ಹಾಕಿಪಟು ಹರ್‌ಚರಣ್‌ ಸಿಂಗ್‌, ಆ್ಯತೀಟ್‌ ಗುರ್ಮಿತ್‌ ಕೌರ್‌, ಕಬಡ್ಡಿ ಆಟಗಾರ ಹರ್‌ದೀಪ್‌ ಸಿಂಗ್‌. ಕ್ರೀಡಾ ಕೌನ್ಸಿಲ್‌ ಮುಂಬರುವ ಒಲಿಂಪಿಕ್ಸ್‌, ಕಾಮನ್ವೆಲ್ತ್‌, ಏಶ್ಯನ್‌ ಗೇಮ್ಸ್‌ನಲ್ಲಿ ರಾಜ್ಯದ ಕ್ರೀಡಾಪಟುಗಳು ಹೆಚ್ಚು ಪದಕ ಗೆಲ್ಲುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next