ಅಯ್ಯೋ… ನಮ್ಮ ಜಾಯಮಾನದಲ್ಲೇ ಕಾರು ಕೊಳ್ಳೋದಕ್ಕೆ ಸಾಧ್ಯವಾಗುತ್ತೋ ಇಲ್ಲವೋ ಎಂದು ವ್ಯಥೆ ಪಡುವ ಕಾಲವೊಂದಿತ್ತು. ಅದೆಷ್ಟೋ ಮಧ್ಯಮ ವರ್ಗದ ಕುಟುಂಬಗಳು ಕಾರುಕೊಳ್ಳುವ ಕನಸನ್ನು ಹತ್ತಾರು ವರ್ಷಗಳ ನಂತರವೂ ನನಸಾಗಿಸಿಕೊಂಡಿದ್ದಿಲ್ಲ. ಮುಂದೊಂದು ದಿನ, ಅಬ್ಬಬ್ಟಾ… ಅಂತೂ ಒಂದು ಕಾರು ಕೊಂಡೆವಪ್ಪಾ ಎಂದು ನಿಟ್ಟುಸಿರು ಬಿಟ್ಟವರು ನಮ್ಮ ನಡುವೆ ಎಷ್ಟಿಲ್ಲ ಹೇಳಿ.
ಆದರೆ ಇಂದು ಜಮಾನ ಬದಲಾಗಿದೆ. ಕಾರು ಕೊಳ್ಳುವುದೆಂದರೆ ಪರ್ವತ ಅಗೆದು ಮೈದಾನ ಸೃಷ್ಟಿಸುವಂಥಸಾಧನೆಯೇನಲ್ಲ. ಮನಸ್ಸು ಮಾಡಿದರೆ ಚಿಟಕಿ ಹಾಕುವಷ್ಟರಲ್ಲಿ ಕಾರು ಮನೆ ಬಾಗಿಲಿಗೆ ಬಂದು ನಿಲ್ಲಿವಷ್ಟು ಬದಲಾಗಿದೆ ವ್ಯವಸ್ಥೆ. ದಿನಬೆಳಗಾದರೆ ಹೊಸ ಹೊಸ ಮಾಡೆಲ್ ಕಾರುಗಳನ್ನು ಕಂಪನಿಗಳು ತನ್ನ ಗ್ರಾಹಕನ ಮುಂದೆ ಪರಿಚಯಿಸಲು ಸಿದ್ಧವಾಗಿರುತ್ತವೆ. ಬ್ಯಾಂಕ್‌ಗಳು ವಾಹನ ಸಾಲ ಕೊಡುವುದಕ್ಕೆ ಕ್ಯೂ ನಿಂತಿರುತ್ತವೆ. ಕಾರು ಡೀಲರ್‌ಗಳು ಮನೆ ಬಾಗಿಲಿಗೇ ಬಂದು ಕಾರಿನ ಮಹಿಮೆ ಪ್ರದರ್ಶಿಸಿ ಹೋಗುತ್ತಾರೆ. ಅಷ್ಟೇ ಏಕೆ, ನಾವು-ನೀವು ಕೇಳಿದ ಬ್ಯಾಂಕ್‌ಗಳಲ್ಲಿ ಸಾಲ ಮಾಡಿಸಿಕೊಡುವುದಕ್ಕೂ ಸೈ ಎನ್ನುತ್ತಾರೆ.
ಇಷ್ಟೆಲ್ಲ ಇದ್ದ ಮೇಲೆ ಕಾರು ಕೊಂಡುಕೊಳ್ಳಲು ಇನ್ನೇನ್ ಕಷ್ಟ? ಎಂದು ಸುಲಭವಾಗಿ ಹೇಳಿ ಬಿಡಬಹುದು. ಆದರೆ ಇಂದಿನ ಸಮಸ್ಯೆ ಅದಲ್ಲ, ಯಾವುದನ್ನು ಕೊಳ್ಳಬೇಕು? ಯಾವುದು ಜಾಸ್ತಿ ಪ್ರಯೋಜನಕಾರಿ? ಕಾರು ಕೊಳ್ಳುವ ಉದ್ದೇಶ ಏನು? ಎಂಥ ರಸ್ತೆಗಳಿಗೆ ಎಂಥಾ ಕಾರು ಸೂಟೆಬಲ್? ನೋಡಲಿಕ್ಕೆ ಚೆನ್ನಾಗಿದ್ದರೆ ಸಾಕಾ, ಇಲ್ಲ ಸಖತ್ತಾಗಿ ಓಡುವಂಥದ್ದಾಗಿರಬೇಕಾ? ಅಪ್ ಡೆಟೆಡ್ ಬೇಕಾ, ಬೇಸಿಕ್ ಮಾಡೆಲ್ ಸಾಕಾ? ಟೆಕ್ನಾಲಜಿ ಪ್ಲಸ್ ಫುಲ್ ಲೋಡೆಡ್ ಅಂದ್ರೆ ಹೇಗೆ? ಐಶಾರಾಮಿ ಪ್ರಯಾಣಕ್ಕೆ ಯಾವುದು ಬೆಟರ್? ಕ್ರೇಜಿಗಾಗಿಯೇ ಕೊಳ್ಳೋದಾ ಹೇಗೆ? ಹೀಗೆ ಒಂದೋ ಎರಡೋ, ನೂರಾರು ಪ್ರಶ್ನೆಗಳು ಎದುರಾಗುತ್ತವೆ. ಇವೆಲ್ಲದರ ನಡುವೆ ಎಸ್‌ಯುವಿ, ಎಂಯುವಿ, ಮಿನಿ ಎಸ್‌ಯುವಿ ಮಾದರಿಯ ಕಾರುಗಳೇ ಇವತ್ತಿನ ಟ್ರೆಂಡ್.
ಹೀಗಾಗಿಯೇ ಬಹುತೇಕ ಕಾರು ತಯಾರಿಕಾ ಕಂಪನಿಗಳು ಇದೇ ಮಾದರಿಯಲ್ಲೇ ಕನಿಷ್ಠವೆಂದರೂ ನಾಲ್ಕಾರು ವೇರಿಯಂಟ್ ಗಳನ್ನು ವಿನ್ಯಾಸಗೊಳಿಸಿ ಮಾರುಕಟ್ಟೆಗೆ ಪರಿಚಯಿಸಿವೆ. ಇವುಗಳ ಸಾಲಿಗೆ ಸೇರಿದ ವಾಹನಗಳಲ್ಲಿ ಟಾಟಾ ಮೋಟಾರ್ ಅವರ ಹೆಕ್ಸಾ ಕೂಡ ಒಂದು. ಟೊಯೊಟಾ ಇನ್ನೋವಾದಂತಹ ಜನಪ್ರಿಯ ವಾಹನಗಳಿಗೆ ಸವಾಲಾಗಿ ಪರಿಚಯಿಸಿದ ಅತ್ಯಾಧುನಿಕ ತಂತ್ರಜ್ಞಾನದ ಎಂಯುವಿ ಮಾದರಿಯ ವಾಹನ ಟಾಟಾ ಹೆಕ್ಸಾ. ಸಫಾರಿ, ಆರ್ಯ ಹೊರತು ಪಡಿಸಿದರೆ ಟಾಟಾ ಇಂಥದ್ದೊಂದು ಕಾರನ್ನು
ಇದುವರೆಗೂ ತಯಾರಿಸಿರಲಿಲ್ಲ. ಆರ್ಯ ಉತ್ತಮ ವಾಹನವೇ ಆಗಿದ್ದರೂ ಪರಿಚಯಿಸಿದ ಸಂದರ್ಭ ಸೂಕ್ತವಾಗಿಲ್ಲದ್ದಕ್ಕೋ ಏನೂ ಬೇಗ ತೆರೆಮರೆಗೆ ಸೇರಿಕೊಂಡಿತು. ಆದರೆ ಈಗ ಇನ್ನೋವಾಕ್ಕೆ ಸಡ್ಡು ಹೊಡೆಯುವಂತೆ ಹೆಕ್ಸಾ ಎಂಟ್ರಿ ಕೊಟ್ಟಿದೆ. ನಿಧಾನವಾಗಿ ಧೂಳೆಬ್ಬಿಸುತ್ತಿವೆ. ಆರ್ಯ ವಿನ್ಯಾಸದಲ್ಲೇ ಆತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ಹೆಕ್ಸಾ ರೂಪಿಸಲಾಗಿದೆ.
ಡೆಕೋರ್ ಎಂಜಿನ್ ಎಕ್ಸ್‌ಟಿ, ಎಕ್ಸ್‌ಟಿಎ ಹಾಗೂ ಎಕ್‌ಕ್ಸಎಂಎ ಶ್ರೇಣಿಗಳಲ್ಲಿ ಹೆಕ್ಸಾ ಲಭ್ಯವಿದೆ. ಎಕ್‌ಟಿ ಫೋರ್ ವೀಲ್ ಡ್ರೈವ್ ಮ್ಯಾನುವೆಲ್ ಗೇರ್‌ಗಳಿಂದ ಕೂಡಿದ್ದರೆ, ಉಳಿದ ಎರಡು ಶ್ರೇಣಿಗಳು ಆಟೋ ಗೇರ್‌ಗಳಿಂದ ಕೂಡಿವೆ. ಮ್ಯಾನುವಲ್ ಗೇರ್‌ನಲ್ಲಿ ಮುನ್ನುಗುವಿಕೆ ಸ್ವಲ್ಪ ಮಟ್ಟಿಗೆ ಕಡಿಮೆ ಎನಿಸುತ್ತದೆ. ಆದರೆ ಆಟೋ ಗೇರ್‌ನಲ್ಲಿ ಇದು ಅಷ್ಟೇನು ಕಾಣಿಸುವುದಿಲ್ಲ. ಮ್ಯಾನುವೆಲ್ ಗೇರ್‌ನಲ್ಲಿ ಐದು ಮತ್ತು ಆರನೇ ಗೇರ್‌ನಲ್ಲಿ ಓಡಿಸುವಾಗ ಐಶಾರಾಮಿ ಕಾರಿನಲ್ಲಿ ಸಿಗಬಹುದಾದ ವೇಗ ಮತ್ತು ಲಕ್ಸುರಿ ಅನುಭವ
ನಿರೀಕ್ಷಿಸಬಹುದಾಗಿದೆ.
ಹೇಗಿದೆ ವಿನ್ಯಾಸ?
ಯಾವುದೇ ವಾಹನಕ್ಕೆ ಸರಿಸಾಟಿಯಲ್ಲದ ವಾಹನ ಹೆಕ್ಸಾ. ಸಧೃಡ ಹಾಗೂ ದೈತ್ಯಾಕಾರದ ಮೈಕಟ್ಟು ಇದರದ್ದು. ಮೊದಲ ನೋಟದಲ್ಲಿ ಹೇಗಪ್ಪಾ ಪಾರ್ಕ್ ಮಾಡೋದು ಅನ್ನಿಸಬಹುದು. ಯಾಕೆಂದರೆ ಅಷ್ಟು ಅಗಲ-ಎತ್ತರದ ಚಕ್ರಗಳು ಇದರದ್ದು. ಮುಂಬಾಗದ ಸ್ಟೀಲ್ ಗ್ರಿಲ್, ಎಲ್‌ಇಡಿ ಹೆಡ್‌ಲ್ಯಾಂಪ್ ಹಾಗೂ ಫಾಗ್‌ಲೈಟ್ ಆಕರ್ಷಣೀಯ. ಒಳ ಮತ್ತು ಹೊರ ವಿನ್ಯಾಸ ಯಾವ ಲಕ್ಸುರಿ ಕಾರಿಗೂ ಕಡಿಮೆ ಇಲ್ಲ.
ಸ್ವತಃ ಟಾಟಾ ಅಭಿವೃದ್ಧಿಪಡಿಸಿದ 2200 ಸಿಸಿ, ನಾಲ್ಕು ಸಿಲಿಂಡರ್‌ನ ವರಿಕೋರ್ 400 ಎಂಜಿನ್ ಅಳವಡಿಸಲಾಗಿದೆ. ಸಾಮಾನ್ಯವಾಗಿ ಡೆಕೋರ್‌ನಲ್ಲಿ ಸದ್ದು ಜಾಸ್ತಿ ಇರುತ್ತೆ
ಪ್ರತಿ ಲೀಟರ್ ಡೀಸೆಲ್‌ಗೆ 14 -18 ಕಿಲೋ ಮೀಟರ್ ಮೈಲೇಜ್
ಬೆಲೆ ಎಷ್ಟು?
ಬೆಂಗಳೂರಿನ ಶೋರೂಂನಲ್ಲಿ ಹೆಕ್ಸಾ ಬೆಲೆ 12.50 ಲಕ್ಷ ರೂ.ನಿಂದ ಆರಂಭವಾಗಿ 20 ಲಕ್ಷದ ವರೆಗೆ ಇದೆ.
ಅಗ್ನಿಹೋತ್ರಿ