Advertisement

ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಮಾಸ್ಕ್ ಪೋನ್ ಹೆಡ್ ಸೆಟ್

12:18 PM Jan 14, 2021 | Team Udayavani |

ನವದೆಹಲಿ: ವಿಶ್ವದೆಲ್ಲೆಡೆ ಕೋವಿಡ್ ಸೋಂಕಿನ ಅಟ್ಟಹಾಸ  ಆರಂಭಗೊಂಡ ನಂತರ ಜನರು ಏನಿಲ್ಲವೆಂದರೂ ಮಾಸ್ಕ್ ಅನ್ನು ಮಾತ್ರ ಬಳಸಬೇಕಾದ ಪರಿಸ್ಥಿತಿ ಒದಗಿತು. ಈ ನಡುವೆ ಈ ಮಾಸ್ಕ್ ಗಳಲ್ಲಿಯೂ ಹಲವು ಆವಿಷ್ಕಾರಗಳಾಗಿ ಚಿನ್ನದ ಮಾಸ್ಕ್ ಗಳನ್ನೂ ಕೂಡ ತಯಾರಿಸಲಾಯಿತು. ಹೀಗಿರುವಾಗ ಈ ಮಾಸ್ಕ್ ಗಳಲ್ಲಿ ಹಲವು ತಂತ್ರಜ್ಞಾನದ ಪ್ರಯೋಗಗಳೂ ನಡೆದಿದ್ದು, ಇದೀಗ ಮಾಸ್ಕ್ ಬ್ಲೂಟೂತ್ ಹೆಡ್ ಸೆಟ್  ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

Advertisement

ಬಿನಾಟೋನ್ಸ್ ಕಂಪನಿಯು ಈ ಹೊಸ ವಿನ್ಯಾಸದ  ಹೆಡ್ ಸೆಟ್  ಅನ್ನು ಅಭಿವೃದ್ಧಿಪಡಿಸಿದ್ದು, ಎನ್ 95 ಆವೃತ್ತಿಯ ಈ ಮಾಸ್ಕ್  ಹೆಡ್ ಸೆಟ್  ಗೆ ‘ಮಾಸ್ಕ್ ಪೋನ್’ ಎಂದು ಹೆಸರಿಟ್ಟಿದೆ. ಇದು ವಯರ್ ಲೆಸ್ ಹೆಡ್ ಸೆಟ್   ಆಗಿದ್ದು, ತನ್ನಲ್ಲಿ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.

ಮಾಸ್ಕ್ ಪೋನ್ ನ ವಿಶೇಷತೆಗಳು

ಈ ಬ್ಲೂಟೂತ್ ಹೆಡ್ ಸೆಟ್  ಅನ್ನು ಐ ಪಿ ಎಕ್ಸ್ 5 ಫ್ಯಾಬ್ರಿಕ್ ಅನ್ನು ಬಳಸಿಕೊಂಡು ರೂಪಿಸಲಾಗಿದ್ದು,  ಪಿ ಎಮ್ 2.5 / ಎ‍ಫ್ ಎ‍ಫ್ ಪಿ 2 ಫಿಲ್ಟರ್ ಅನ್ನು ಅಳವಡಿಸಲಾಗಿದೆ. ಈ ಹೆಡ್ ಸೆಟ್ ಅನ್ನು ನೀರಿನಲ್ಲಿ ತೊಳೆಯಬಹುದಾಗಿದೆ.

ಇದನ್ನೂ ಓದಿ:ಬೆಂಗಳೂರಿಗೆ ಬಂತು ಕೊವಾಕ್ಸಿನ್ ಕೋವಿಡ್ ಲಸಿಕೆ

Advertisement

ಬ್ಯಾಟರಿ ಸಾಮರ್ಥ್ಯ

ಎನ್ 95 ಆವೃತ್ತಿಯ ಈ ಮಾಸ್ಕ್  ಹೆಡ್ ಸೆಟ್ ಅತ್ಯದ್ಭುತವಾದ  ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ ಸತತ 12 ಗಂಟೆಗಳ ಕಾಲ ಬಳಕೆ ಮಾಡಬಹುದಾಗಿದೆ.

ಈ ಮಾಸ್ಕ್  ಹೆಡ್ ಸೆಟ್ ನಲ್ಲಿ ಸಂಗೀತವನ್ನು ಕೇಳಲು ಹಾಗೂ  ಕರೆಗಳನ್ನು ಸ್ವೀಕರಿಸಲು ಮಾಸ್ಕಿನ ಬಲಭಾಗದಲ್ಲಿ ಮೂರು ಬಟನ್ ಗಳನ್ನು ಅಳವಡಿಸಲಾಗಿದ್ದು, ಇದರ ಮೂಲಕ ಕರೆಗಳನ್ನು ಸ್ವಿಕರಿಸಲು, ಕಟ್ ಮಾಡಲು, ಪಾಸ್/ ಪ್ಲೇ ಮಾಡಬಹುದಾಗಿದೆ. ಗ್ರಾಹಕರ ಉಪಯೋಗಕ್ಕಾಗಿ S/M ಹಾಗೂ M/L ಗಾತ್ರಗಳಲ್ಲಿ ಲಭ್ಯವಿದೆ. ಈ ಮಾಸ್ಕ್ ಫೋನ್ IPX5 ನಿಂದ ಪ್ರಮಾಣಿಕರಿಸಲ್ಪಟ್ಟಿದೆ.

ಇಷ್ಟು ಮಾತ್ರವಲ್ಲದೆ ಈ ಮಾಸ್ಕ್ ಪೋನಿನ ಮೂಲಕ ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಹಾಗೂ ಸಿರಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಬೆಲೆ: ಪ್ರಸ್ತುತ ಈ ಬ್ಲೂಟೂತ್ ಹೆಡ್ ಸೆಟ್  ನ ಬೆಲೆ 49 ಡಾಲರ್ ಗಳಾಗಿದ್ದು , ಭಾರತೀಯ ಕರೆನ್ಸಿಯಲ್ಲಿ 3,600 ರೂಗಳಾಗಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next