Advertisement
ಕೇಂದ್ರ ಸರಕಾರದ “ನೆರೆರಾಷ್ಟ್ರಗಳೇ ಮೊದಲು’ ಎಂಬ ನೀತಿಗೆ ಅನುಸಾರವಾಗಿ ಈ ರಾಷ್ಟ್ರಗಳ ನಾಯಕರನ್ನು ಪ್ರಧಾನಿ ಮೋದಿ, ಸಂಪುಟ ಸಚಿವರ ಪದಗ್ರಹಣ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಇವರಲ್ಲದೆ ಶಾಂಘೈ ಸಹಕಾರ ಸಂಸ್ಥೆಯ ಮುಖ್ಯಸ್ಥ, ಕಿರ್ಗಿಝ್ ರಿಪಬ್ಲಿಕ್‌ನ ಅಧ್ಯಕ್ಷರು, ಪ್ರಸಕ್ತ ವರ್ಷದ ಪ್ರವಾಸಿ ಭಾರತೀಯ ದಿವಸ್‌ನ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾರಿಷಿಯಸ್ ಪ್ರಧಾನಮಂತ್ರಿಗೂ ಆಹ್ವಾನ ನೀಡಲಾಗಿದೆ ಎಂದು ಸರಕಾರದ ಅಧಿಕೃತ ವಕ್ತಾರರು ತಿಳಿಸಿದ್ದಾರೆ. 2014ರಲ್ಲಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮೋದಿ ಪಾಕಿಸ್ಥಾನದ ಅಂದಿನ ಪ್ರಧಾನಿ ನವಾಜ್ ಶರೀಫ್ ಸಹಿತ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಿದ್ದರು.
ಕಳೆದ ಬಾರಿಯೂ ಹಸೀನಾ ಅವರು ವಿದೇಶ ಪ್ರವಾಸದ ನಿಮಿತ್ತ ಮೋದಿ ಪ್ರಮಾಣ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ರಜನಿ, ಕಮಲ್‌ಗೂ ಆಹ್ವಾನ: ಈ ನಡುವೆ ತಮಿಳುನಾಡಿನ ಟಾಪ್ ಸಿನೆಮಾ ಸ್ಟಾರ್‌ಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರಿಗೂ ಮೇ 30ರ ಕಾರ್ಯಕ್ರಮಕ್ಕೆ ಆಹ್ವಾನ ಒದಗಿ ಸಲಾಗಿದೆ. ಆದರೆ ಇವರಿಬ್ಬರೂ ಪಾಲ್ಗೊಳ್ಳುವುದು ಇನ್ನೂ ಖಚಿತವಾಗಿಲ್ಲ.