ಬೀಜಿಂಗ್: ಚೀನದ ಅಲಿಬಾಬಾ ಗ್ರೂಪ್ ಹೋಲ್ಡಿಂಗ್‌ನ ಸಹ-ಸಂಸ್ಥಾಪಕ ಮತ್ತು ಉದ್ಯಮಿ ಜಾಕ್ ಮಾ ಅವರು ತಮ್ಮ ಮಾಲೀಕತ್ವದಲ್ಲಿ ಇರುವ ಆ್ಯಂಟ್ ಗ್ರೂಪ್ ಮತ್ತು ಕಂಪನಿಯ ಮಾಲೀಕತ್ವ ತ್ಯಜಿಸಲು ನಿರ್ಧರಿಸಿದ್ದಾರೆ.
ಈ ನಿರ್ಧಾರ ಕೈಗೊಳ್ಳುವ ಮೂಲಕ ಚೀನ ಸರ್ಕಾರದ ತನಿಖೆಯ ವ್ಯಾಪ್ತಿಯಿಂದ ಪಾರಾಗಲು ಚಿಂತನೆ ನಡೆಸಿದ್ದಾರೆ ಎಂದು “ದ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.
ಈ ಬಗ್ಗೆ ಜಾಕ್ ಮಾ ಮತ್ತು ಅವರ ಕಂಪನಿ ಪ್ರತಿಕ್ರಿಯೆ ನೀಡಿಲ್ಲ. ಜಾಕ್ ಮಾ ಅವರು ಶೇ.50.52 ಷೇರುಗಳನ್ನು ಆ್ಯಂಟ್ ಗ್ರೂಪ್‌ನಲ್ಲಿ ಹೊಂದಿದ್ದಾರೆ. ಇದರ ಜತೆಗೆ ಎರಡು ವರ್ಷಗಳ ಅವಧಿಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇರುವ ಜಾಕ್ ಮಾ ವಿಲಾಸಿ ನೌಕೆಯ ಮೂಲಕ ಆಸ್ಟ್ರಿಯಾ ಪ್ರವಾಸವನ್ನು ಕೈಗೊಂಡಿದ್ದಾರೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಹೇಳಿಕೊಂಡಿದೆ.
ಹಿಂದೊಮ್ಮೆ ಕೂಡ ಅವರು ವಿದೇಶ ಪ್ರವಾಸ ಕೈಗೊಂಡಿದ್ದರು.