ಉಳ್ಳಾಲ: ಸಮಾಜ ಸಂಘಟನೆಗೆ ಕ್ರೀಡಾಕೂಟಗಳು ಪೂರಕವಾಗಿದ್ದು, ಗ್ರಾಮೀಣ ಪ್ರದೇಶದ ಜನರನ್ನು ಸಂಘಟಿಸಿ ಅವರಿ ಶೈಕ್ಷಣಿದೊಂದಿಗೆ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಕಾರ್ಯ ಶ್ಲಾಘನೀಯ ಎಂದು ಅಲಂಕಾರಗುಡ್ಡೆ ಶ್ರೀ ಮಲರಾಯ ದೈವಸ್ಥಾನದ ಅಂತ ಪೂಜಾರಿ ಅಭಿಪ್ರಾಯಪಟ್ಟರು. ಅವರು ಬ್ರಹ್ಮಶ್ರೀ ಬಿಲ್ಲವ ವೇದಿಕೆ ತೊಕ್ಕೊಟ್ಟು ಉಳ್ಳಾಲ ಇದರ ಆಶ್ರಯದಲ್ಲಿ ಚೆಂಬುಗುಡ್ಡೆಯ ಮಂಗಳೂರು ವನ್ ಶಾಲಾ ಮೈದಾನದಲ್ಲಿ ಬಿಲ್ಲವರ ಕೋಟಿ ಚೆನ್ನಯ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ. ಸುವರ್ಣ ಮಾತನಾಡಿ, ಶೈಕ್ಷಣಿಕವಾಗಿ ಕಳೆದ ಹಲವು ವರ್ಷಗಳಿಂದ ವೇದಿಕೆ ಕಾರ್ಯ ನಿರ್ವಹಿಸುತ್ತಿದೆ. ಇದರೊಂದಿಗೆ ಸಮಾಜದ ಬಾಂಧವರನ್ನು ಒಂದುಗೂಡಿಸುವ ಕಾರ್ಯದೊಂದಿಗೆ ಪರಸ್ಪರ ಪರಿಚಯವಾಗುವುದರೊಂದಿಗೆ ಸಮಾಜದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉಳ್ಳಾಲದ ಅವಿನಾಶ್ ಎಂಟರ್‌ಪ್ರೈಸಸ್ ಉಳ್ಳಾಲ ಇದರ ಮಾಲಕ ಬಿಲ್ಲವ ಡಿ. ಗೋಪಾಲ, ದುಬಾಯಿ ಬಿಲ್ಲವಾಸ್‌ನ ಮುಖಂಡ ಮಾಧವ ಪೂಜಾರಿ, ಬಿಲ್ಲವ ಸಂಘ ಗ್ರಾಮಚಾವಡಿ ಇದರ ಅಧ್ಯಕ್ಷ ಲಕ್ಷ್ಮಣ್ ಕೋಟ್ಯಾನ್, ಯುವ ಉದ್ಯಮಿ ಗಣೇಶ್ ಕೊಲ್ಯ, ಬ್ರಹ್ಮಶ್ರೀ ಬಿಲ್ಲವ ವೇದಿಕೆ ತೊಕ್ಕೊಟ್ಟು ಇದರ ಸಂಚಾಲಕರಾದ ಬಾಬು ಶ್ರೀಶಾಸ್ತ ಕಿನ್ಯ, ಸುರೇಶ್ ಕೆ.ಪಿ., ಚಂದ್ರಶೇಖರ್ ಉಚ್ಚಿಲ್, ಕಾರ್ಯಾಧ್ಯಕ್ಷ ಸತೀಶ್ ಕರ್ಕೇರಾ, ಕೋಶಾಧಿಕಾರಿ ಲಕ್ಷ್ಮಣ್ ಪೂಜಾರಿ, ಕ್ರೀಡಾ ಕಾರ್ಯದರ್ಶಿ ರಾಜೇಶ್ ಉಳ್ಳಾಲ್, ದತ್ತು ಸಂಚಾಲಕ ಆನಂದ ಅಸೈಗೋಳಿ, ಗೋಪಿನಾಥ್ ಬಗಂಬಿಲ, ಹರೀಶ್ ಮುಂಡೋಳಿ, ಕೃಷ್ಣಪ್ಪ ಕಿನ್ಯ, ಪ್ರವೀಣ್ ಎಸ್. ಕುಂಪಲ ಉಪಸ್ಥಿತರಿದ್ದರು. ಬ್ರಹ್ಮಶ್ರೀ ಬಿಲ್ಲವ ವೇದಿಕೆ ಪ್ರ.ಕಾ. ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು. ಭಗವಾನ್‌ದಾಸ್ ವಂದಿಸಿದರು. ಹರೀಶ್ ಅಂಬ್ಲಿಮೊಗರು ಕಾರ್ಯಕ್ರಮ ನಿರ್ವಹಿಸಿದರು.