Advertisement

ಬಿಲ್ಲವ ಹೊಸ ಭವನಕ್ಕೆ ಎಲ್ಲರ ಸಹಕಾರ ಅಗತ್ಯ: ಹರೀಶ್‌ ಜಿ. ಅಮೀನ್‌

11:49 AM Apr 17, 2022 | Team Udayavani |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಗೋರೆಗಾಂವ್‌ ಸ್ಥಳೀಯ ಕಚೇರಿಯ ಯುವ ಸಮಿತಿ ಸದಸ್ಯರ ವತಿಯಿಂದ ಎ.10ರ ಅಪರಾಹ್ನ 2.30 ರಿಂದ ಗೋರೆಗಾಂವ್‌ ಪೂರ್ವದ ವಿರ್ವಾನಿ ಇಂಡಸ್ಟ್ರಿಯಲ್‌ ಎಸ್ಟೇಟ್‌ ಸಮೀಪ, ಸಹಕಾರವಾಡಿ ನಿತ್ಯಾನಂದ ಆಶ್ರಮ ಸಭಾಗೃಹದಲ್ಲಿ ಗೊಬ್ಬುಲು ಒಳಾಂಗಣ ವಿನೋದಾವಳಿ ಕಾರ್ಯಕ್ರಮ ಆಯೋಜಿಸಲಾಯಿತು.

Advertisement

ಸದ್ಗುರು ನಿತ್ಯಾನಂದ ಸ್ವಾಮೀಜಿಯವರಿಗೆ ಪ್ರಾರ್ಥನೆ ಸಲ್ಲಿಸಿದ ಅನಂತರ ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಅವರೊಂದಿಗೆ ರಾಷ್ಟ್ರೀಯ ಬಿಲ್ಲವ ಮಹಾಮಂಡಳದ ಅಧ್ಯಕ್ಷ ರಾಜಶೇಖರ್‌ ಕೋಟ್ಯಾನ್‌ , ಉಪಾಧ್ಯಕ್ಷ ಸೂರ್ಯಕಾಂತ್‌ ಜೆ. ಸುವರ್ಣ, ಗೋರೆಗಾಂವ್‌ ಕರ್ನಾಟಕ ಸಂಘದ ಅಧ್ಯಕ್ಷ ಮತ್ತು ಬಿಲ್ಲವರ ಅಸೋಸಿಯೇಶನ್‌ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಉಪಸ್ಥಿತರಿದ್ದರು. ಇವೆಲ್ಲರಿಗೂ ನ್ಯಾಯವಾದಿ ಶಶಿಧರ್‌ ಕಾಪು ಅವರು ಶಾಲು ಹೊದೆಸಿ, ಪುಷ್ಪಗುಚ್ಚವನ್ನಿತ್ತು ಸತ್ಕರಿಸಿದರು.

ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್‌ ಜಿ. ಸಾಲ್ಯಾನ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಕುಂತಳಾ ಕೋಟ್ಯಾನ್‌, ಸ್ಥಳೀಯ ಕಚೇರಿಯ ಗೌರವ ಅಧ್ಯಕ್ಷ ಜೆ.ವಿ. ಕೋಟ್ಯಾನ್‌, ಉಪಾಧ್ಯಕ್ಷ ರಮೇಶ್‌ ಸುವರ್ಣ, ಕಾರ್ಯಾಧ್ಯಕ್ಷ ಸುಚೀಂದ್ರ ಕೋಟ್ಯಾನ್‌, ಕಾರ್ಯದರ್ಶಿ ವಿಜಯ್‌ ಪಾಲನ್‌ ಮತ್ತು ಕೋಶಾಧಿಕಾರಿ ಮೋಹನ್‌ ಅಮೀನ್‌ ಉಪಸ್ಥಿತರಿದ್ದರು.

ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಅಸೋಸಿಯೇಶನ್‌ ವತಿಯಿಂದ ನಡೆಸಲ್ಪಡುವ ಪಡುಬೆಳ್ಳಿಯ ಶಾಲೆಯಲ್ಲಿ ಸುಮಾರು 600 ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟದ ವ್ಯವಸ್ಥೆ ಮಾಡಿದ್ದೇವೆ. ಅದಕ್ಕೆ ಮುಂಬಯಿಯ ಬಿಲ್ಲವ ಸಮಾಜದ ಬಾಂಧವರು ಮುಂದೆ ಬಂದು ಸಹಕಾರ ಕೊಟ್ಟಿದ್ದಾರೆ. ಅವರಿಗೆಲ್ಲಾ ನಾವು ಚಿರಋಣಿ ಮತ್ತು ವಾಶಿಯಲ್ಲಿ ನಮ್ಮ ಇನ್ನೊಂದು ಬಿಲ್ಲವರ ಭವನ ತಲೆ ಎತ್ತಿ ನಿಲ್ಲಲಿದೆ. ಅದಕ್ಕಾಗಿ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ವಿನಂತಿಸಿದರು.

ರಾಷ್ಟ್ರೀಯ ಬಿಲ್ಲವ ಮಹಾಮಂಡಳ ಅಧ್ಯಕ್ಷ ರಾಜ್‌ ಶೇಖರ್‌ ಕೋಟ್ಯಾನ್‌ ಅವರು ಮಾತನಾಡಿ, ಬಹುಸಂಖ್ಯಾತರಾದ ಬಿಲ್ಲವರು ಇನ್ನಷ್ಟು ರಾಜಕೀಯ ದಲ್ಲಿ ಮುಂದೆ ಬರಬೇಕೇಂದರು. ಗೋರೆಗಾಂವ್‌ ಕರ್ನಾಟಕ ಸಂಘದ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್‌ ಮಾತನಾಡುತ್ತ, ನಮ್ಮ ಯುವ ಸಮಿತಿಗೆ ಇನ್ನಷ್ಟು ಯವಕ ಯುವತಿಯರ ಸೇರ್ಪಡೆಯಾಗಿ ಅವರು ಅಸೋಸಿಯೇಶನ್‌ ನ ಎಲ್ಲ ಕಾರ್ಯಕಲಾಪಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು.

Advertisement

ಕಾರ್ಯಾಧ್ಯಕ್ಷ ಸಚೀಂದ್ರ ಕೋಟ್ಯಾನ್‌ ಅಥಿತಿ ಗಣ್ಯ ರನ್ನು ಸ್ವಾಗತಿಸಿ, ನಾವೆಲ್ಲ ಕೊರೊನಾ ಹಾವಳಿಯಿಂದ ತುಂಬಾ ಸೋತಿದ್ದೇವೆ. ಪ್ರಸ್ತುತ ಕೊರೊನಾ ಆತಂಕ ಕೊನೆಯ ಹಂತಕ್ಕೆ ಬಂದು ತಲುಪಿದೆ. ಈಗ ಇದನ್ನೆಲ್ಲ ಮರೆಯಲು ಕಾರ್ಯಕ್ರಮದ ಅವಶ್ಯಕತೆ ಇದೆ. ಮಕ್ಕಳು ದೊಡ್ಡವರೆನ್ನದೆ ಎಲ್ಲರೂ ಒಗ್ಗೂಡಿ ಈ ಕಾರ್ಯಕ್ರಮವನ್ನು ವಿಜೃಂಬಿಸೋಣ ಎಂದರು.

ಸಭಾಗೃಹದಲ್ಲಿ ಕೇಂದ್ರ ಕಚೇರಿಯಿಂದ ಆಗಮಿ ಸಿದ ಅಥಿತಿಗಳಾದ ಉಪಕಾರ್ಯದರ್ಶಿ ವಿಶ್ವನಾಥ್‌ ತೋನ್ಸೆ, ಯುವ ಸಮಿತಿಯ ಕಾರ್ಯಾಧ್ಯಕ್ಷ ನಿಲೇಶ್‌ ಪಲಿಮಾರ್‌, ನಾಲಸೋಪಾರ ಸ್ಥಳೀಯ ಕಚೇರಿಯ ಕಾರ್ಯದರ್ಶಿ ಉಮೇಶ್‌ ಕೋಟ್ಯಾನ್‌, ಕಲ್ಯಾಣ್‌ ಸ್ಥಳೀಯ

ಕಚೇರಿಯ ಕಾರ್ಯಾಧ್ಯಕ್ಷ ವಿಠ್ಠಲ್‌ ಕೆ. ಕೋಟ್ಯಾನ್‌, ಜೋಗೇಶ್ವರಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ನಾರಾ ಯಣ್‌ ಪೂಜಾರಿ ಮತ್ತು ನೀತಾ ಎಸ್‌. ಸುವರ್ಣ , ದೀಪ್ತಿ ಯೋಗೇಶ್‌ ಸುವರ್ಣ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ನಿರ್ವಹಣೆ ಮಾಡಿದ ಯುವ ಸಮಿತಿಯ ಸದಸ್ಯ ಲತೇಶ್‌ ಎಂ. ಪೂಜಾರಿ, ಕೇಂದ್ರ ಕಚೇರಿಯ ಪೂಜಾ ಸಮಿತಿ ಮತ್ತು ನಿತ್ಯಾನಂದ ಆಶ್ರಮದ ಗೌರವ ಅಧಕ್ಷರು, ಈ ಕಾರ್ಯಕ್ರಮದ ಹೊಣೆಹೊತ್ತ ಮೋಹನ್‌ ಪೂಜಾರಿ, ನಿತ್ಯಾನಂದ ಆಶ್ರಮದ ಅಧ್ಯಕ್ಷರಾದ ರಘು ಮೂಲ್ಯ, ಮುತುವರ್ಜಿ ವಹಿಸಿ, ಕಾರ್ಯ ನಿರ್ವಹಿಸಿದ ಕೇಂದ್ರ ಕಚೇರಿಯ ಪ್ರತಿನಿಧಿ ಬಬಿತಾ ಜೆ. ಕೋಟ್ಯಾನ್‌ ಮತ್ತು ಸ್ಥಳೀಯ ಕಚೇರಿಯ ಉಪ ಕಾರ್ಯದರ್ಶಿ ಜನಾರ್ಧನ್‌ಡಿ. ಕೋಟ್ಯಾನ್‌ ಅವರಿಗೆ ಪುಷ್ಪಗುತ್ಛ ನೀಡಿ ಸತ್ಕರಿಸಲಾಯಿತು.

ಸ್ಥಳೀಯ ಕಚೇರಿಯ ಸದಸ್ಯರಾದ ಪದ್ಮಾವತಿ ಪೂಜಾರಿ, ಪುಷ್ಪಾ ಅಮೀನ್‌, ವಿಶೇಷ ಆಮಂತ್ರಿತ ವಿಶ್ವನಾಥ್‌ ಪೂಜಾರಿ ಉಪಸ್ಥಿತರಿದ್ದರು. ಕೇಂದ್ರ ಕಚೇರಿಯ ಉಪಾಧ್ಯಕ್ಷ ಶಂಕರ್‌ ಡಿ. ಪೂಜಾರಿ, ಸ್ಥಳೀಯ

ಕಚೇರಿಯ ನವೀನ್‌ ಪೂಜಾರಿ, ಯಶ್‌ವಂತ್‌ ಪೂ ಜಾರಿ, ಸತೀಶ್‌ ಕೋಟ್ಯಾನ್‌, ಮಧುಕರ್‌ ಕೋಟ್ಯಾನ್‌ ಗೆದ್ದವರಿಗೆ ಪ್ರಶಸ್ತಿ, ಫಲಕವನ್ನಿತ್ತರು. ಕಾರ್ಯದರ್ಶಿ ಅವರು ಉಪಸ್ಥಿತರಿದ್ದ ಎಲ್ಲರಿಗೆ ವಂದಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಚಿತ್ರವರದಿ- ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next