Advertisement
ಪ್ರಾರಂಭದಲ್ಲಿ ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನ ಕಾರ್ಯಕ್ರಮ ನಡೆಯಿತು. ಆನಂತರ ವಿದ್ಯಾ ಅಂಚನ್ ಮತ್ತು ರಾಧಾ ಪೂಜಾರಿ ಅವರ ಪ್ರಾರ್ಥನೆಯೊಂದಿಗೆ, ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗದ ಕಾರ್ಯದರ್ಶಿ ಸುಮಿತ್ರಾ ಬಂಗೇರ, ಡಾ| ಗೀತಾಂಜಲಿ, ಅನಿತಾ ಪಿ. ಪೂಜಾರಿ ತಾಕೊಡೆ, ಸ್ಥಳೀಯ ನಗರ ಸೇವಕಿ ಮೀರಾತಾಯಿ ಪಾಟೀಲ್, ಆಶಾ ಅಂಚನ್, ಸಾವಿತ್ರಿ ಪೂಜಾರಿ, ಸ್ಥಳೀಯ ಕಚೇರಿಯ ಉಪ ಕಾರ್ಯಾಧ್ಯಕ್ಷ ವಿಶ್ವನಾಥ ಕೆ. ಪೂಜಾರಿ, ಜಯಂತಿ ಕೋಟ್ಯಾನ್ ಅವರು ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿಯ ಸದಸ್ಯ ವಿಶ್ವನಾಥ ಕೋಟ್ಯಾನ್ ದಂಪತಿಯನ್ನು ಸಮ್ಮಾನಿ ಸಲಾಯಿತು. ಕಾರ್ಯಕ್ರಮದಲ್ಲಿ ಗೆಜ್ಜೆಗಿರಿ ನಂದನ ಬಿತ್ತ್ಲ್ ಮಹಿಮೆಯನ್ನು ಸಾರುವ ಸಿಡಿಯನ್ನು ನಿರ್ಮಾಪಕ ರಮೇಶ್ ಸಾಲ್ಯಾನ್ ಬಜಗೋಳಿ ಅವರ ನೇತೃತ್ವದಲ್ಲಿ ಬಿಡುಗಡೆ ಗೊಳಿಸಲಾಯಿತು. ನೆರೆದ ಸಮಾಜ ಬಾಂಧವ ರಿಗೆ ನಾರಾಯಣ ಗುರುಗಳ ಸ್ಟಿಕ್ಕರ್‌ನ್ನು ಹಂಚಲಾಯಿತು. ಅನಿತಾ ಪಿ. ಪೂಜಾರಿ ತಾಕೊಡೆ ಅವರು ಮಾತನಾಡಿ, ಮಹಿಳೆಯರು ಅಡುಗೆ ಮನೆಯಿಂದ ಹೊರಬಂದು ಸಮಾಜ ಮುಖೀ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿ
ಕೊಳ್ಳಬೇಕು. ಅರಸಿನ ಕುಂಕುಮ ಎಂಬುದು ಮಹಿಳೆಯರಿಗೆ ಆಭರಣವಿದ್ದಂತೆ ಎಂದರು.
Related Articles
Advertisement
ಸಂಘ-ಸಂಸ್ಥೆಗಳ ಮುಖಾಂತರ ಒಗ್ಗಟ್ಟಾಗಿ ಸಮಾಜವನ್ನು ಮುಂದುವರಿಸುವ ಕೆಲಸ ಮಹಿಳೆಯರಿಂದ ಆಗಬೇಕಾಗಿದೆ ಎಂದು ಡಾ| ಗೀತಾಂಜಲಿ ನುಡಿದರು. ಸ್ಥಳೀಯ ನಗರ ಸೇವಕಿ ಮೀರಾತಾಯಿ ಪಾಟೀಲ್ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ತುಂಬಾ ಸಂತೋಷವಾಗುತ್ತದೆ. ಬಿಲ್ಲವ ಸಮಾಜ ಬಾಂಧವರು ನನ್ನನ್ನು ಪ್ರೀತಿಯಿಂದ, ಗೌರವದಿಂದ ಕಾಣುತ್ತಿದ್ದು, ಅಭಿಮಾನ ವೆನಿಸುತ್ತಿದೆ. ನಾನು ಸದಾ ನಿಮ್ಮ ಸಮಾಜ ಸೇವೆಗಳಿಗೆ ಸಹಕರಿಸಲು ಸಿದ್ಧ ಎಂದರು.
ಜಯಂತಿ ಕೋಟ್ಯಾನ್ ಅವರು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಧರ್ಮದರ್ಶಿ ರಮೇಶ್ ಎಂ. ಪೂಜಾರಿ ಅವರು ಮಾತನಾಡಿ, ನಾವು ಉತ್ತಮ ಮನಸ್ಸಿನಿಂದ ಯಾವುದೇ ಕಾರ್ಯಗಳನ್ನು ಮಾಡಬೇಕು. ಗುರು ಸೇವೆಯಿಂದ ಮಾನಸಿಕ ನೆಮ್ಮದಿ ಸಾಧ್ಯ. ಸಮಾಜ ಬಾಂಧವರನ್ನು ಗುರುತಿಸಿ ಗೌರವಿಸುವ ಕಾರ್ಯ ನಮ್ಮಿಂದಾಗಬೇಕು ಎಂದರು. ಜಯಂತಿ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ಮೋಹಿನಿ ಪೂಜಾರಿ ಕಾಮೋಟೆ ವಂದಿಸಿದರು. ದಿಘಾದಿಂದ ಪನ್ವೇಲ್‌ವರೆಗಿನ ಸಮಾಜದ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು ಪರಸ್ಪರ ಅರಸಿನ ಕುಂಕುಮ ಹಚ್ಚಿ ಶುಭ ಹಾರೈಸಿದರು.