Advertisement

ಅಶಕ್ತರಿಗೆ ಶಕ್ತಿ ನೀಡುವುದೇ ಅಸೋಸಿಯೇಶನ್‌ನ ಗುರಿ: ಹರೀಶ್‌ ಜಿ. ಅಮೀನ್‌

10:59 AM Jan 03, 2022 | Team Udayavani |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌ರವರ ನೇತೃತ್ವದಲ್ಲಿ ಅಸೋಸಿಯೇಶನಿನ ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ಅವರ ಅಧ್ಯಕ್ಷತೆಯಲ್ಲಿ ವಿ-ಕೇರ್‌ ಫಲಾನುಭವಿಗಳೊಂದಿಗೆ ಸಮಾಲೋಚನಾ ಸಭೆಯು ಇತ್ತೀಚೆಗೆ ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ನಡೆಯಿತು.

Advertisement

ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ಅವರು ಈ ಸಂದರ್ಭದಲ್ಲಿ ಮಾತನಾಡಿ, ಅಶಕ್ತರಿಗೆ ಶಕ್ತಿ ನೀಡುವುದೇ ನಮ್ಮ ಗುರಿ. ನಿಮ್ಮೊಂದಿಗೆ ನಾವು ಸದಾ ಇರುತ್ತೇವೆ. ಆತ್ಮ ವಿಶ್ವಾಸದಿಂದ ನೀವೆಲ್ಲರೂ ಬಾಳಿಬದುಕಬೇಕು ಹಾಗೂ ಪರಿವಾರಕ್ಕೆ ಮಾರ್ಗದರ್ಶಿ ಗಳಾಗಬೇಕು ಎಂದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕೆ. ಸುರೇಶ್‌ ಕುಮಾರ್‌, ಉಪಾಧ್ಯಕ್ಷೆ ಜಯಂತಿ ವರದ ಉಳ್ಳಾಲ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌, ಗೌರವ ಕಾರ್ಯದರ್ಶಿ ಸಬಿತಾ ಜಿ. ಪೂಜಾರಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಸದಸ್ಯರಾದ ಉಪಕಾರ್ಯಾಧ್ಯಕ್ಷೆ ಜಯಂತಿ ಎಸ್‌. ಕೋಟ್ಯಾನ್‌, ಗಿರಿಜಾ ಚಂದ್ರಶೇಖರ್‌ ಪೂಜಾರಿ ಅವರು ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್‌ ಜಿ. ಸಾಲ್ಯಾನ್‌ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಸಬಿತಾ ಜಿ. ಪೂಜಾರಿಯವರು ಪ್ರಾರಂಭದಲ್ಲಿ ಪ್ರಾರ್ಥನೆಗೈದು ಸರ್ವರಿಗೂ ವಂದಿಸಿದರು. ಈ ಸಂದರ್ಭದಲ್ಲಿ ಎಲ್ಲ ಫಲಾನುಭವಿಗಳಿಗೆ ಸೀರೆ ವಿತರಿಸಲಾಯಿತು. ಕೊನೆಯಲ್ಲಿ ಲಘು ಉಪಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ತುಳು ಕನ್ನಡಿಗರ ಪ್ರತಿಷ್ಠಿತ ಸಂಸ್ಥೆ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಸಮಾಜದ ಹಿತದೃಷ್ಠಿಯಿಂದ ಕಾರ್ಯವೆಸಗುತ್ತಿದ್ದು. ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸ್ಥಳೀಯ ಕಚೇರಿಗಳು ತಮ್ಮ ಪರಿಸರದ ಜನರ ಆಶೋತ್ತರಗಳಿಗೆ ಸ್ಪಂದಿಸಿದರೆ, ಉಪಸಮಿತಿಯು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಸದೃಢ ಸಮಾಜ ನಿರ್ಮಾಣಕ್ಕೆ ಕೆಲಸ ಮಾಡುತ್ತಿದೆ. ಶಕ್ತಿಯುತ ಸಮಾಜ ನಿರ್ಮಾಣಕ್ಕೆ ಸ್ತ್ರೀ ಶಕ್ತಿಯ ಅನಿವಾರ್ಯವನ್ನು ಕಂಡಂತಹ ಶತಮಾನದ ಶ್ರೇಷ್ಠ ಸಮಾಜ ಸೇವಕ ದಿ| ಜಯ ಸಿ. ಸುವರ್ಣರು ಮಹಿಳಾ ವಿಭಾಗವನ್ನು ಆರಂಭಿಸಿ, ಸಮಾಜದ ಮಹಿಳೆಯರನ್ನು ಅಸೋಸಿಯೇ ಶನಿನ ಮುಖ್ಯವಾಹಿನಿಗೆ ತಂದರು. 2011ರಲ್ಲಿ ಮಹಿಳಾ ವಿಭಾಗದ ಅಂದಿನ ಕಾರ್ಯಾಧ್ಯಕ್ಷೆಯಾದ ಜಯಂತಿ ವರದ ಉಳ್ಳಾಲ್‌ರವರ ನೇತೃತ್ವದಲ್ಲಿ ವಿ-ಕೇರ್‌ ಎಂಬ ನಾಮದಲ್ಲಿ ಪತಿಯನ್ನು ಕಳೆದುಕೊಂಡಂತಹ ಸಮಾಜದ ಸಹೋದರಿಯರ ಬಾಳಿಗೆ ಸಾಂತ್ವನ ನೀಡುವ ಸಲುವಾಗಿ ಮಾಶಾ ಸನವನ್ನು ಆರಂಭಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next