Advertisement
ಬಿಲ್ಲವ ಸಮನ್ವಯಕ ಸಮಿತಿಯು ಆಯೋಜಿಸಿದ್ದ “ಬಿಲ್ಲವರ ಸಂಸ್ಥೆಗಳ ಏಕೀಕರಣ’ ಸೌಹಾರ್ದ ಸಭೆಯಲ್ಲಿ ಬಿಲ್ಲವರ ಅಸೋಸಿಯೇಶನ್ ಮತ್ತು ಬಿಲ್ಲವ ಜಾಗೃತಿ ಬಳಗದ ಪದಾಧಿಕಾರಿಗಳು ಸಾಮರಸ್ಯದ ಮುನ್ನಡೆಗೆ ಬದ್ಧರಾಗಿ ಐಕ್ಯತಾ ಪ್ರಕ್ರಿಯೆಯ “ಠರಾವು ಮಂಡನಾ ಪತ್ರ’ಕ್ಕೆ ಅಂಕಿತ ಹಾಕುವುದರ ಮುಖೇನ ವಿಲೀನಗೊಂಡು ನೂತನ ಅಧ್ಯಾಯಕ್ಕೆ ಸಾಕ್ಷಿಯಾದರು.
Related Articles
Advertisement
ಅಸೋಸಿಯೇಶನ್ ಹಾಗೂ ಬಳಗದ ಸ್ಥಳೀಯ, ಸಮನ್ವಯ ಸಮಿತಿಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು, ಸದಸ್ಯರನೇಕರ ಉಪಸ್ಥಿತಿಯಲ್ಲಿ ಸರಕಾರಿ ಚ್ಯಾರಿಟಿ ಸಂಸ್ಥೆಯ ಅಧಿನಿಯಮ, ಸಲಹೆ ಸೂಚನೆಯಂತೆ ಒಡಂಬಡಿಕೆ ಪತ್ರಕ್ಕೆ ಹಸ್ತಾಕ್ಷರ ಹಾಕುವ ಮೂಲಕ “ಬಿಲ್ಲವರು ಸಂಘಟನಾ ಚತುರರು’ ಎಂದು ಸಾಭೀತುಪಡಿಸಿದರು.
ಪ್ರಾರಂಭದಲ್ಲಿ ನೃತ್ಯ ವೈವಿಧ್ಯ, ಸಾಕ್ಷ Â ಚಿತ್ರ ಪ್ರದರ್ಶನಗೊಂಡಿತು. ರಕ್ಷಿತ್ ಪೂಜಾರಿ ಸ್ವಾಗತ ನೃತ್ಯಗೈದರು. ಹರೀಶ್ ಸಿ. ಪೂಜಾರಿ ಕೊಕ್ಕರ್ಣೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್ ಕೆ. ಹೆಜ್ಮಾಡಿ ಅವರು ಕಾರ್ಯಕ್ರಮ ನಿರೂಪಿಸಿದರು.
ಸಮನ್ವಯ ಸಮಿತಿಯ ನ್ಯಾಯವಾದಿ ರಾಜಾ ವಿ. ಸಾಲ್ಯಾನ್ ಅವರು ಚಾರೀಟಿ ಕಮೀಶನ್‌ಗೆ ಒಪ್ಪಿಸುವ ಠರಾವು ಪತ್ರದ ಮಾಹಿತಿಯನ್ನು ವಾಚಿಸಿದರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್ ಅವರು ಸ್ವಾಗತಿಸಿ ವಂದಿಸಿದರು.
ಸಭೆಯಲ್ಲಿ ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಭಾಸ್ಕರ ವಿ. ಬಂಗೇರ, ಶಂಕರ ಡಿ. ಪೂಜಾರಿ ಮತ್ತು ಡಾ| ಯು. ಧನಂಜಯ ಕುಮಾರ್, ಗೌರವ ಪ್ರಧಾನ ಕೋಶಾಧಿಕಾರಿ ಮಹೇಶ್ ಸಿ. ಕಾರ್ಕಳ, ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್, ಯುವಾಭ್ಯುದಯ ಉಪ ಸಮಿತಿಯ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರ್, ಬಳಗದ ಜೆ. ಎಂ. ಕೋಟ್ಯಾನ್, ಕೇಶವ ಕೆ. ಕೋಟ್ಯಾನ್, ಮಹೇಂದ್ರ ಎಸ್. ಕರ್ಕೇರ, ಸಂತೋಷಿ ಎಸ್. ಪೂಜಾರಿ, ಕೃಪಾ ಭೋಜ್‌ರಾಜ್, ಯಶೋದಾ ಎನ್. ಟಿ. ಪೂಜಾರಿ, ಮೀರಾ ಡಿ. ಅಮೀನ್, ಪೂಜಾ ಪುರುಷೋತ್ತಮ ಕೋಟ್ಯಾನ್, ಗಿರಿಜಾ ಚಂದ್ರಶೇಖರ್, ರೇಖಾ ಸದಾನಂದ್, ಪ್ರಭಾ ಎನ್. ಸುವರ್ಣ ಸೇರಿದಂತೆ ಬಿಲ್ಲವ ಮುಂದಾಳುಗಳು ಉಪಸ್ಥಿತರಿದ್ದರು.
ಅಂದು ನಡೆದದ್ದು…!2000ರ ಸಾಲಿನಲ್ಲಿ ಭಿನ್ನಾಭಿಪ್ರಾಯಗಳಿಂದಾಗಿ ಬೇರ್ಪಟ್ಟು ಪ್ರತ್ಯೇಕಗೊಂಡ ದಿನದಿಂದಲೂ ಉಭಯ ಸಂಸ್ಥೆಗಳು ಮನದೊಳಗೆ ಪ್ರತ್ಯೇಕಗೊಂಡಿರುವ ಬಗ್ಗೆ ಕೊರಗುತ್ತಿದ್ದವು. ಆದರೂ ಎಂದಿಗೂ ಕೋಟಿ-ಚೆನ್ನಯರಂತೆ ಸಹೋದರತ್ವ ಕಳಕೊಳ್ಳದೆ ಒಟ್ಟಾಗಿರುತ್ತಿದ್ದರು ಎನ್ನುವುದೇ ವಿಶೇಷತೆ. 2009ರಲ್ಲಿ ಬಿಲ್ಲವರ ಭವನದಲ್ಲೇ ಒಂದಾಗಿದ್ದರೂ ಆ ಸಂಧಾನ ಅಷ್ಟೇನೂ ಪ್ರಯೋಜನವಾಗಿಲ್ಲ. ಆದರೆ ಈ ಬಾರಿ ಎಲ್. ವಿ. ಅಮೀನ್ ಅವರ ಅವಿರತ ಪ್ರಯತ್ನ ಫಲಕಾರಿಯಾಗಿದೆ ಎನ್ನುವುದೇ ಬಿಲ್ಲವ ಮುಂದಾಳುಗಳ ಅಭಿಮತ. ಒಂದು ಸಮುದಾಯವು ಮಾತೃ ಸಂಸ್ಥೆಯಿಂದ ಬೇರ್ಪಟ್ಟು ಮತ್ತೆ ಒಂದಾಗಿ ಮಾತೃಸಂಸ್ಥೆಯೊಡನೆ ವಿಲೀನಗೊಳ್ಳುವುದು ಒಂದು ಅಪರೂಪದ ಮತ್ತು ಐತಿಹಾಸಿಕ ಘಟನೆಯಲ್ಲದೆ ಆಶ್ಚರ್ಯಕರ ವಿಚಾರವೇ ಸರಿ. ಮಾತಿಗೆ ಬದ್ಧರಾದ ಗಂಗಾಧರ್ ಅಮೀನ್
ಬಿಲ್ಲವ ಸಮಾಜದ ಹಿರಿಯ ಮುಂದಾಳು, ನಾಸಿಕ್‌ನ ಹಿರಿಯ ಕೈಗಾರಿಕೋದ್ಯಮಿ, ಕೊಡುಗೈದಾನಿ ಗಂಗಾಧರ್ ಅಮೀನ್ 2000 ರ ಘಟನೆಯಿಂದ ಮನನೊಂದು ಏಕತೆಗಾಗಿ ಪ್ರಯತ್ನಿಸಿದ್ದರು. 2009ರಲ್ಲಿ ನಡೆದ ಸಂಧಾನದಲ್ಲೂ ಸೂತ್ರಧಾರಿಯಾಗಿ ಶ್ರಮಿಸಿ ಒಂದಾಗದಿರುವುದನ್ನು ಕಂಡು ಉಭಯ ಸಂಸ್ಥೆಗಳ ವೇದಿಕೆಗೆ ಬಹಿಷ್ಕಾರ ಹಾಕಿದ್ದರು. ಯಾವಾಗ ನೀವೆಲ್ಲರೂ ಒಂದಾಗುತ್ತಿರೋ ಅಂದೇ ನಿಮ್ಮೊಡನೆ ನಾನೂ ಒಂದಾಗಿ ಸೇರುವೆ ಎಂದು ಹಟ ಹಿಡಿದಿದ್ದರು. ಅದರಂತೆ ಮಾತಿಗೆ ಬದ್ಧರಾದ ಅವರ ಇಂದಿನ ಉಪಸ್ಥಿತಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತ್ತು. ಸಂಧಾನ ಸಮಿತಿಗೆ ಸಂದ ಗೆಲುವು
ಎಲ್. ವಿ. ಅಮೀನ್, ನ್ಯಾಯವಾದಿ ಗೋಪಾಲ ಸಿ. ಪೂಜಾರಿ, ಸಿಎ ಅಶ್ವಜಿತ್ ಹೆಜ್ಮಾಡಿ ಇವರ ತ್ರಿಸದಸ್ಯ ಪೀಠದೊಡನೆ ಬಿಲ್ಲವರ ಅಸೋಸಿಯೇಶನ್‌ನಿಂದ ನಿತ್ಯಾನಂದ ಡಿ. ಕೋಟ್ಯಾನ್, ನ್ಯಾಯವಾದಿ ರಾಜ ವಿ. ಸಾಲ್ಯಾನ್, ಧರ್ಮಪಾಲ ಜಿ. ಅಂಚನ್ ಪ್ರಮುಖರಾಗಿ ಹಾಗೂ ಬಿಲ್ಲವ ಜಾಗೃತಿ ಬಳಗ ಎನ್. ಟಿ. ಪೂಜಾರಿ, ಪುರುಷೋತ್ತಮ ಎಸ್. ಕೋಟ್ಯಾನ್, ಹರೀಶ್ ಜಿ. ಪೂಜಾರಿ, ಡಿ. ಬಿ. ಅಮೀನ್, ನ್ಯಾಯವಾದಿ ಆನಂದ್ ಎಂ. ಪೂಜಾರಿ, ಮಹೇಂದ್ರ ಸೂರು ಕರ್ಕೇರ ಅವರ ಸಪ್ತ ಸದಸ್ಯರ ನಿಯೋಗ ಈ ಸಂಧಾನಕ್ಕೆ ಪೂರಕವಾಗಿದ್ದರೆ, ತೆರೆಮರೆಯಲ್ಲಿ ಬಿಲ್ಲವರ ಹಿರಿಯ ಮುತ್ಸದ್ಧಿಗಳಾದ ವಿ. ಆರ್. ಕೋಟ್ಯಾನ್, ಕೆ. ಭೋಜರಾಜ್, ದಯಾನಂದ ಬೋಂಟ್ರಾ ಬರೋಡ, ಗಂಗಾಧರ್ ಕೆ. ಅಮೀನ್ ನಾಸಿಕ್, ಪುರುಷೋತ್ತಮ ಎಸ್. ಕೋಟ್ಯಾನ್, ಸುರೇಶ್ ಎಸ್. ಪೂಜಾರಿ, ಸೂರು ಸಿ. ಕರ್ಕೇರ, ಡಾ| ರಾಜಶೇಖರ್ ಆರ್. ಕೋಟ್ಯಾನ್, ಹರೀಶ್ ಜಿ. ಅಮೀನ್, ಸುರೇಂದ್ರ ಎ. ಪೂಜಾರಿ ಇವರ ತೆರೆಮರೆಯ ಪಾತ್ರ ಹಿರಿದಾಗಿತ್ತು. ಒಟ್ಟಿನಲ್ಲಿ ಇವರ ಸಂಘಟನಾ ಕಾಳಜಿಗೆ ಪ್ರಶಂಸಿಸಿ ಹರ್ಷ ವ್ಯಕ್ತಪಡಿಸಿದ ನೆರೆದ ಬಿಲ್ಲವರು ಸರ್ವರ ಶ್ರಮಕ್ಕೆ ಅಭಿನಂದನೆ ಸಲ್ಲಿಸಿದರು. ಚಿತ್ರ-ವರದಿ : ರೋನ್ಸ್ ಬಂಟ್ವಾಳ್