Advertisement

ಬಿಲವರ ಅಸೋಸಿಯೇಶನ್‌ ಕೂಡು ಕುಟುಂಬದ ಚಾವಡಿ: ಶ್ರೀನಿವಾಸ ಕರ್ಕೇರ

01:50 PM Aug 17, 2021 | Team Udayavani |

ಮೀರಾರೋಡ್‌: ಸಮಾಜಮುಖಿ ಚಿಂತನೆ, ದೂರಗಾಮಿ ಯೋಜನೆ, ಕೂಡಿ ಬಾಳುವ ಕಲೆ ಮೊದಲಾದ ಮಾನವ ಕ್ಷೇಮಾಭಿವೃದ್ಧಿಯೊಂದಿಗೆ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾದ ಮುಂಬಯಿ ಬಿಲ್ಲವರ ಅಸೋಸಿಯೇಶನ್‌ಗೆ ಈಗ ಶತಮಾನದ ಇತಿಹಾಸ. ಮಾನವ ಸಂಪನ್ಮೂಲ ವನ್ನು ಕ್ರೋಢಿಕರಿಸಿ ಸಾಮಾಜಿಕ, ಕ್ರೀಡೆ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳಲ್ಲಿನ ಸಾಧಕರಿಗೆ ನೆರವಿನೊಂದಿಗೆ ಪ್ರೋತ್ಸಾಹ ನೀಡಿದೆ. ವಿಶ್ವಮಟ್ಟದಲ್ಲಿ ಗುರುತಿಸಲ್ಪಡುವ ಈ ಸಂಸ್ಥೆ ಕೂಡು ಕುಟುಂಬದ ಚಾವಡಿಯಾಗಿದೆ ಎಂದು ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಉಪಾಧ್ಯಕ್ಷ ಶ್ರೀನಿವಾಸ ಕರ್ಕೇರ ತಿಳಿಸಿದರು.

Advertisement

ಆ. 14ರಂದು ಸಂಜೆ ಬಿಲ್ಲವರ ಅಸೋಸಿಯೇಶನ್‌ ಇದರ ಮೀರಾರೋಡ್‌ ಸ್ಥಳೀಯ ಸಮಿತಿಯ ಕಚೇರಿಯಲ್ಲಿ ಆಯೋಜಿಸಿದ್ದ ಆಟಿದ ಕೂಟ ಸಮಾರಂಭದಲ್ಲಿ ಮಾತನಾಡಿದ ಅವರು, ಆಚಾರ-ವಿಚಾರಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿರುವ ತುಳುನಾಡು ಹಲವಾರು ಆಚರಣೆಗೆ ಪ್ರಸಿದ್ಧಿ ಪಡೆದಿದೆ. ಸಂಘಟನೆಯ ನೈಜತೆ ಫಲಪ್ರದವಾಗಲು ಸಂಸ್ಕಾರ ಸಂಸ್ಕೃತಿಯ ಪಾಲನೆ ಅತ್ಯಗತ್ಯ ಎಂದರು.

ಮಹಿಳಾ ವಿಭಾಗದ ಪರವಾಗಿ ಸಂಜೀವಿ ಎಸ್‌. ಪೂಜಾರಿ ಮಾತನಾಡಿ, ವೈಜ್ಞಾನಿಕವಾಗಿ, ವೈದ್ಯಕೀಯವಾಗಿ ಹಿರಿಯರು ವಿಶೇಷ ತಜ್ಞರಾಗಿದ್ದರು. ಅವರ ವಿಶಿಷ್ಟ ಅನುಭವದಿಂದ ಸಾಂಕ್ರಾಮಿಕ ಮಹಾಮಾರಿಯಲ್ಲೂ ಗಿಡಮೂಲಿಕೆಯನ್ನು ಉಪಯೋಗಿಸಿ ಕಾಯಿಲೆಯನ್ನು ವಾಸಿ ಮಾಡು ತ್ತಿದ್ದರು.ಜೀವನದಲ್ಲಿ ಉಲ್ಲಾಸ ಬರಲು ಚೆನ್ನೆಮಣೆಯಂತಹ ಒಳಾಂಗಣ ಆಟಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅವರ ಪ್ರತಿಯೊಂದು ಆಚರಣೆಯಲ್ಲಿ ಉತ್ತಮ ಉದ್ದೇಶ ಇರುತ್ತಿತ್ತು ಎಂದರು.

ಇದನ್ನೂ ಓದಿ:ಪೂರ್ವಜರ ದೇವಾಲಯ ಬಿಟ್ಟು ಓಡಿಹೋಗಲ್ಲ: ಕಾಬೂಲ್ ನ ಏಕೈಕ ಹಿಂದೂ ಪುರೋಹಿತ್ ರಾಜೇಶ್

ಸಮಿತಿ ಸದಸ್ಯರಾದ ಜಿ. ಕೆ. ಕೆಂಚನಕೆರೆ, ದಯಾನಂದ ಅಮೀನ್‌, ಶಂಕರ ಪೂಜಾರಿ, ಕೇಂದ್ರ ಕಚೇರಿಯ ಪ್ರತಿನಿಧಿ ಮೋಹನ್‌ ಡಿ. ಪೂಜಾರಿ,
ವಿದ್ಯಾ ಮೋಹನ್‌ ಪೂಜಾರಿ ಮಾತನಾಡಿದರು.ಶೋಭಾ ಎಚ್‌. ಪೂಜಾರಿ ಅವರು 20 ಖಾದ್ಯಮತ್ತು ತಯಾರಕರ ಹೆಸರನ್ನು ವಾಚಿಸಿದರು. ಗೌರವ ಕಾರ್ಯದರ್ಶಿಎನ್‌. ಪಿ. ಕೋಟ್ಯಾನ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕೋಶಾಧಿಕಾರಿ ಎಚ್‌. ಎಂ. ಪೂಜಾರಿ, ಶೇಖರ ಜಿ. ಪೂಜಾರಿ, ಆರ್ಚಕ ಶ್ಯಾಮ ಅಮೀನ್‌ ಉಪಸ್ಥಿತರಿದ್ದರು. ವಿಜಯ ಎನ್‌. ಅಮೀನ್‌, ಕಲ್ಪನಾ ನಾರಾಯಣ ಕೋಟ್ಯಾನ್‌, ಸುಂದರಿ ಆರ್‌.
ಕೋಟ್ಯಾನ್‌, ರಾಧಾ ಎಸ್‌. ಕೋಟ್ಯಾನ್‌, ಭಾರತಿ ಎ. ಅಂಚನ್‌, ಸಂಜೀವಿ ಎಸ್‌. ಪೂಜಾರಿ, ಜಿ. ಕೆ. ಕೆಂಚನಕೆರೆ, ಶೋಭಾ ಎಚ್‌. ಪೂಜಾರಿ, ಶಾಂಭವಿ ಜಿ. ಸಾಲ್ಯಾನ್‌, ಸುಲೋಚನಾ ಮಾಬೀಯನ್‌,ಇಂದಿರಾ ಸುವರ್ಣ, ದಿನೇಶ್‌ ಸುವರ್ಣ,ಲೀಲಾಧರ ಸನಿಲ್‌, ಶಂಕರ ಎಲ್‌. ಪೂಜಾರಿ,
ಗಣೇಶ್‌ ಬಂಗೇರ, ಚಿತ್ರಾ ರಮೇಶ್‌ ಅಮೀನ್‌,ಇಂದಿರಾ ಸುವರ್ಣ, ಶಾಂಭವಿ ಜಿ. ಸಾಲ್ಯಾನ್‌,ಯಶೋದಾ ಎಸ್‌. ಕೋಟ್ಯಾನ್‌, ಶಾಂತಿ ಪೂಜಾರಿ,ಪೂರ್ಣಿಮಾ ಪೂಜಾರಿ, ರತ್ನಾ ಪೂಜಾರಿ, ಮಲ್ಲಿಕಾ ಜಿ. ಸಾಲ್ಯಾನ್‌, ಉಜ್ವಲಾ ಎಸ್‌. ಸಾಲ್ಯಾನ್‌, ಸುಮಿತ್ರಾ ಪೂಜಾರಿ, ಲಕ್ಷ್ಮೀ ಅಮೀನ್‌ ಸಹಿತ ಮೊದಲಾದವರು ಸಹಕರಿಸಿದರು.

Advertisement

ಔಷಧ ಆಹಾರವಾಗಬಾರದು
ಆಟಿ ತಿಂಗಳಲ್ಲಿ ಪ್ರಕೃತಿದತ್ತವಾಗಿ ಸಿಗುವ ಸಸ್ಯಜನ್ಯ ಪದಾರ್ಥಗಳು, ಹಾಳೆಯ ಮರದ ಕೆತ್ತೆಯ ಕಷಾಯ ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ. ಆಹಾರ ಔಷಧವಾಗಬೇಕೇ ಹೊರತು, ಔಷಧ ಆಹಾರವಾಗಬಾರದು. ಇದರಿಂದ ನಮ್ಮ ಪೂರ್ವಿಕರು ಕಷ್ಟದ ನಡುವೆಯೂ
ಆರೋಗ್ಯಕರ ಜೀವನ ನಡೆಸುತ್ತಿದ್ದರು.
-ಭೋಜ ಬಿ. ಸಾಲ್ಯಾನ್‌, ಗೌರವಾಧ್ಯಕ್ಷರು,
ಬಿಲ್ಲವರ ಅ. ಮೀರಾರೋಡ್‌ ಸಮಿತಿ

ಚಿತ್ರ-ವರದಿ: ರಮೇಶ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next