Advertisement
ಇದೇ ಸಂದರ್ಭದಲ್ಲಿ 2018- 2021ರ ಸಾಲಿನ ಲೋನವಾಲ ಸ್ಥಳೀಯ ಕಚೇರಿಗೆ ನೂತನ ಪದಾಧಿ ಕಾರಿಗಳನ್ನು ನೇಮಿಸಲಾಯಿತು. ಕಾರ್ಯಾಧ್ಯಕ್ಷರಾಗಿ ಗಣೇಶ್ ಎ. ಪೂಜಾರಿ ಅವರನ್ನು ನೇಮಿಸಲಾಯಿತು. ನೂತನ ಪದಾಧಿಕಾರಿಗಳು, ಕಾರ್ಯ ಕಾರಿ ಸಮಿತಿಯ ಸದಸ್ಯರು ಅಧಿಕಾರ ಸ್ವೀಕರಿಸಿದರು.
ಉಪ ಕಾರ್ಯಾಧ್ಯಕ್ಷರಾಗಿ ಶೇಖರ್ ಎ. ಪೂಜಾರಿ, ಗೌರವ ಕಾರ್ಯದರ್ಶಿಯಾಗಿ ರಾಜೇಶ್ ಎಸ್. ಪೂಜಾರಿ, ಗೌರವ ಕೋಶಾಧಿಕಾರಿಯಾಗಿ ಸಂದೀಪ್ ಎಸ್. ಪೂಜಾರಿ, ಜತೆ ಕಾರ್ಯದರ್ಶಿಯಾಗಿ ಅಶೋಕ್ ಪೂಜಾರಿ, ಜತೆ ಕೋಶಾಧಿಕಾರಿಯಾಗಿ ದಯಾನಂದ ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶೇಖರ್ ಬಿ. ಪೂಜಾರಿ, ಸುರೇಶ್ ಡಿ. ಪೂಜಾರಿ, ರಾಜೇಶ್ ಎಸ್. ಪೂಜಾರಿ, ಆನಂದ ಬಿ. ಪೂಜಾರಿ, ದಿನೇಶ್ ಹೆಚ್. ಪೂಜಾರಿ, ವಿಲಾಸಿನಿ ಜಿ. ಪೂಜಾರಿ, ಸುಕನ್ಯಾ ಎಸ್. ಪೂಜಾರಿ, ಆಶಾಲತಾ ಎಸ್. ಪೂಜಾರಿ, ಮಹಿಳಾ ವಿಭಾಗದ ಸದಸ್ಯರಾಗಿ ಮೀನಾಕ್ಷಿ ಎಸ್. ಪೂಜಾರಿ, ಪ್ರೀತಿ ಡಿ. ಪೂಜಾರಿ, ಯುವ ವಿಭಾಗದ ಸದಸ್ಯರಾಗಿ ಲೋಹಿತ್ ಪೂಜಾರಿ, ಸಂತೋಷ್ ಪೂಜಾರಿ, ಗಣೇಶ್ ಪೂಜಾರಿ, ಉಮೇಶ್ ಕೋಟ್ಯಾನ್, ಆರತಿ ಆರ್. ಪೂಜಾರಿ, ಸುಜಾತಾ ಪೂಜಾರಿ ಅಧಿಕಾರ ವಹಿಸಿಕೊಂಡರು.
ನನಗೆ ಸಮಾಜ ಸೇವೆಗೈಯಲು ನಿಮ್ಮಿಂದ ಸೌಭಾಗ್ಯ ಸಿಕ್ಕಿದೆ. ಸಮಾಜದ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿ ಸಮಿತಿಯ ಮೂಲಕ ಸಮಾಜವನ್ನು ಬಲಪಡಿಸುವ ಪ್ರಯತ್ನ ನಡೆಸುವೆ ಎಂದು ರವಿ ಪೂಜಾರಿ ತಿಳಿಸಿದರು. ಲೋನಾವಳ ಸ್ಥಳೀಯ ಕಚೇರಿಯ ಸ್ಥಾಪನೆಯ 15 ವರ್ಷಗಳ ಬಳಿಕ ನಾವೆಲ್ಲರೂ ಬಹಳಷ್ಟು ಸಕ್ರೀಯರಾಗಿದ್ದೇವೆ. ಆ ಮೊದಲು ಸಮಾಜ ಬಾಂಧವರ ಒಗ್ಗೂಡುವಿಕೆ ಸಾಧ್ಯವಾಗಿಲ್ಲ. ಆದರೆ ಭವಿಷ್ಯತ್ತಿನಲ್ಲಿ ನಾವೆಲ್ಲರೂ ಏಕಾಗ್ರಸ್ಥರಾಗಿ ಸಮಾಜವನ್ನು ಮುನ್ನಡೆಸುವ ಸ್ಥೈರ್ಯ ನಮ್ಮವರಲ್ಲಿ ಮೊಳಗಿದೆ. ಸಮುದಾಯದ ಜೊತೆಗೆ ಸಹೋದರತ್ವದಿಂದ ಬೆಸೆದು ಬದುಕುವುದೂ ಇಂದಿನ ಅಗತ್ಯವಾಗಿದೆ. ಸಮಾಜದ ಶ್ರೇಯೋಭಿವೃದ್ಧಿಗೂ ಸ್ಪಂದಿಸೋಣ ಎಂದು ಶ್ರೀಧರ ಪೂಜಾರಿ ತಿಳಿಸಿದರು.
Related Articles
Advertisement
ಲೋನವಾಲದಲ್ಲಿ ಬಿಲ್ಲವರ 60 ಮನೆಗಳಿದ್ದರೂ ಇಷ್ಟೊಂದು ಸಂಖ್ಯೆಯಲ್ಲಿ ಒಗ್ಗೂಡಿದ್ದು ಬಿಲ್ಲವ ಸಮಾಜದ ತಾಕತ್ತು ತೋರುತ್ತದೆ. ಸಂಖ್ಯಾ ಬಲ ಕಡಿಮೆ ಇದ್ದರೂ ಅಖಂಡ ಬಿಲ್ಲವ ಬಾಂಧವರನ್ನು ಒಗ್ಗೂಡಿಸುವ ಕೀರ್ತಿ ಜಯ ಸುವರ್ಣ ಅವರಿಗೆ ಸಲ್ಲುತ್ತದೆ. ಅವರ ದೂರದೃಷ್ಟಿತ್ವ ಮತ್ತು ಶ್ರದ್ಧಾಪೂರ್ವಕ ಕೆಲಸದ ಮೂಲಕ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ನಡೆದಿದೆ. ನಾವೆಲ್ಲರೂ ಸರ್ವರನ್ನು ಸಮಾನತೆ, ಸೌಹಾರ್ದತೆಯಿಂದ ಕಂಡು ಸಮೃದ್ಧಿ, ನೆಮ್ಮದಿಯಿಂದ ಬದುಕುವುದು ಅಗತ್ಯವಿದೆ. ಆ ಮೂಲಕ ಇತರರಿಗೆ ಮಾದರಿ ಆಗೋಣ. ಬಿಲ್ಲವರೆಲ್ಲರೂ ಸಾಂಘಿಕರಾಗಿ, ಸ್ನೇಹಬಾಳ್ವೆಯ ಸಮನ್ವಯಕರಾಗಿ ಬಾಳುತ್ತಾ ಸಮಾಜಕ್ಕೆ ಮಾರ್ಗದರ್ಶರಾಗೋಣ -ಚಂದ್ರಶೇಖರ್ ಪೂಜಾರಿ,
ಅಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಚಿತ್ರ-ವರದಿ: ರೋನ್ಸ್ ಬಂಟ್ವಾಳ್