Advertisement

ಬಿಲ್ಲವರ ಅಸೋಸಿಯೇಶನ್‌ ಕಾಂದಿವಲಿ ಕಚೇರಿ ಉದ್ಘಾಟನೆ 

12:32 PM Dec 18, 2017 | |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಕಾಂದಿವಲಿ ಸ್ಥಳೀಯ ಸಮಿತಿಯ ನೂತನ ಕಚೇರಿಯು ಸಂತ ಜ್ಞಾನೇಶ್ವರ ಕೋ. ಆಪರೇಟಿವ್‌ ಸೊಸೈಟಿಯ ಪ್ಲಾಟ್‌ ನಂಬರ್‌ -3, ತಳಮಹಡಿ, ಬಿಲ್ಡಿಂಗ್‌ ನಂಬರ್‌ 1, ಸಮತಾ ಕ್ರೀಡಾಭವನದ ಹಿಂದೆ, ಎಂ. ಜೆ. ರೋಡ್‌ ಕಾಂದಿವಲಿ ಪಶ್ಚಿಮ ಇಲ್ಲಿ ಡಿ. 16 ರಂದು ಪೂರ್ವಾಹ್ನ ಲೋಕಾರ್ಪಣೆಗೊಂಡಿತು.

Advertisement

ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ, ಬಿಲ್ಲವ  ಧುರೀಣ ಜಯ ಸಿ. ಸುವರ್ಣ ಅವರು ನೂತನ ಕಚೇರಿಯನ್ನು ರಿಬ್ಬನ್‌ ಬಿಡಿಸಿ ಉದ್ಘಾಟಿಸಿದರು. ಆನಂತರ ಕಾಂದಿವಲಿ ಪಶ್ಚಿಮದ ಸಮತಾ ನಗರ ಕ್ರೀಡಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಂಸದ ಗೋಪಾಲ್‌ ಸಿ. ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜನಸ್ಪಂದನೆಯ ಮೂಲಕ ಯಾವುದೇ ಕಾರೊÂàದ್ಧೇಶವನ್ನು ಮಾಡಬಹುದು ಎಂಬುವುದಕ್ಕೆ ಬಿಲ್ಲವರ ಅಸೋಸಿಯೇಶನ್‌ ಕಾಂದಿವಲಿ ಸ್ಥಳೀಯ ಸಮಿತಿ ಸಾಕ್ಷಿಯಾಗಿದೆ. ಸಮಿತಿಯ ಸುದೀರ್ಘ‌ ಕಾಲದ ಯೋಜನೆಯ ಕನಸಿಂದು ನನಸಾಗಿದೆ. ನಾವು ಮಾಡುವ ಕೆಲಸ ಸಮಾಜಕ್ಕೆ ಆಧಾರವಾಗಬೇಕು ಎಂಬ ಉದ್ಧೇಶ ಇಂದು ಸಾರ್ಥಕಗೊಂಡಿದೆ. ಇದರ ಪ್ರಯೋಜನವು ಮುಂದೆ ಪರಿಸರದ ಬಿಲ್ಲವ ಬಂಧುಗಳಿಗೆ ದೊರೆಯಲಿದೆ. ಸಶಕ್ತ ಹಣಕಾಸು ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಸಮಾಜ ಬಾಂಧವರಿಗೆ ಸದೃಢ ಉದ್ಯೋಗ ಸೃಷ್ಟಿಸಿದ ಭಾರತ್‌ ಬ್ಯಾಂಕ್‌ನ ಸಾಧನೆ ಅಪಾರ. ದೇಶದಲ್ಲಿ ಇಂದು ಶ್ರೀಮಂತಿಕೆ ಮತ್ತು ಬೆಂಬಲದ ನಡುವಿನ ಅಸಮಾನತೆ ಎದ್ದು ಕಾಣುತ್ತಿರುವ ಸಮಯದಲ್ಲಿ ಜಯ ಸಿ. ಸುವರ್ಣ ಅವರ ದೂರದೃಷ್ಟಿತ್ವದ ಚಿಂತನೆಯ ಮುಂದಾಳತ್ವವು ಸಮಾಜವನ್ನು ಬಲಿಷ್ಠಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ನುಡಿದು ಶುಭಹಾರೈಸಿದರು.

ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಯೋಗೇಶ್‌ ಕೆ. ಹೆಜ್ಮಾಡಿ ಸ್ವಾಗತಿಸಿದರು. ಅತಿಥಿಗಳನ್ನು ಸ್ಥಳೀಯ ಸಮಿತಿಯ ವತಿಯಿಂದ ಪದಾಧಿಕಾರಿಗಳು ಶಾಲು ಹೊದೆಸಿ, ಸ್ಮರಣಿಕೆಯನ್ನಿತ್ತು ಗೌರವಿಸಿದರು.

ಬಿಲ್ಲವರ ಅಸೋಸಿಯೇಶನ್‌ ನಿಕಟಪೂರ್ವ ಅಧ್ಯಕ್ಷ ಎಲ್‌. ವಿ. ಅಮೀನ್‌ ಅವರು ಮಾತನಾಡಿ, ಶ್ರೀ ನಾರಾಯಣ ಗುರುಗಳ ತತ್ವದ ಅನುಕರಣೆಯ ಮೂಲಕ ಜಯ ಸಿ. ಸುವರ್ಣ ಅವರ ಕಾರ್ಯಚಟುವಟಿಕೆ ಇಂದು ಬಿಲ್ಲವ ಸಮಾಜ ಬೃಹತ್‌ ಮಟ್ಟದಲ್ಲಿ ಬೆಳೆಯಲು ಕಾರಣವಾಗಿದೆ. 22 ಸಮನ್ವಯ ಸಮಿತಿಗಳ ಸ್ಥಾಪನೆಯ ಮೂಲಕ 85 ವರ್ಷಗಳ ಇತಿಹಾಸದ ಒಕ್ಕೂಟಕ್ಕೆ ಹೊಸ ಭಾಷ್ಯ ಬರೆದಿದ್ದಾರೆ. ಇದನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ಜವಾಬ್ದಾರಿ  ಯುವಪೀಳಿಗೆಯ ಕೈಯಲಿದೆ ಎಂದರು.

ಬಿಲ್ಲವ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟಿÅàಯ ಕಾರ್ಯಾಧ್ಯಕ್ಷ ಎನ್‌. ಟಿ. ಪೂಜಾರಿ ಅವರು ಮಾತನಾಡಿ, ಈ ವರ್ಷದಲ್ಲಿ ಮೂರು ಸ್ಥಳೀಯ ಸಮಿತಿಗಳ ಸ್ಥಾಪನೆ ಅಸೋಸಿಯೇಶನ್‌ನ ಬಹುದೊಡ್ಡ ಸಾಧನೆಯಾಗಿದೆ. ನವಿಮುಂಬಯಿಯಲ್ಲಿ ಸ್ಥಾಪನೆಗೊಳ್ಳಲಿರುವ ಭವನ ನವಿಮುಂಬಯಿ ಬಿಲ್ಲವರ ಸಾಧನೆಗೆ ಕಿರೀಟವಾಗಿದ್ದು, ಈ ಎಲ್ಲಾ ಯಶಸ್ಸಿಗೆ ಜಯ ಸಿ. ಸುವರ್ಣರ ದೂರದೃಷ್ಟಿಯ ಯೋಜನೆ, ಮಾಜಿ ಅಧ್ಯಕ್ಷರು ಹಾಗೂ ಎಲ್‌. ವಿ. ಅಮೀನ್‌  ಮೊದಲಾದವರ ಮಾರ್ಗದರ್ಶನ ನಮ್ಮ ಸಫಲತೆಗೆ ಕಾರಣವಾಗಿದೆ ಎಂದು ಹೇಳಿದರು.

Advertisement

ಸ್ಥಳಿಯ ಸಮಿತಿಯ ಸ್ಥಾಪನೆಗೆ ಪ್ರಮುಖ ಪಾತ್ರವಹಿಸಿದ ಗಂಗಾಧರ ಜೆ. ಪೂಜಾರಿ ಅವರು ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಮತ್ತು ಸ್ಥಳೀಯ ಸಮಿತಿಯ ಸ್ಥಾಪನೆಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರು ಮಾತನಾಡಿ, ಹಲವಾರು ಸಿಹಿಕಹಿ ಘಟನೆಯ ನಡುವೆಯೂ 85 ವರ್ಷಗಳ ಇತಿಹಾಸದ ಬಿಲ್ಲವ ಸಂಘಟನೆಯ ರಥವನ್ನು ಯಶಸ್ವಿಯಾಗಿ ಎಳೆದು ಸಾಧನೆಯತ್ತ ಕೊಂಡೊಯ್ದ ಹಿರಿಮೆ ನಮ್ಮದಾಗಿದೆ. ಮುಂದೆ ಯುವ ಶಕ್ತಿಯ ಅಗತ್ಯವಿದೆ. ಅದಕ್ಕಾಗಿ ಸಂಸ್ಥೆಯೊಳಗೆ ಹಲವಾರು ಚಿಂತನೆ ನಡೆಯುತ್ತಿದೆ. ಕಾಂದಿವಲಿ ಪರಿಸರದ ಸಮಾಜ ಬಾಂಧವರ ಪರಿಶ್ರಮಕ್ಕೆ ಇಂದು ಜಯಸಿಕ್ಕಿದೆ. ಇದರ ಅನುಕೂಲ, ಪ್ರಯೋಜನ ಎಲ್ಲಾ ಪರಿಸರದ ಬಿಲ್ಲವರಿಗೆ ದೊರೆಯಲಿದೆ. ರಾಜಕೀಯವಾಗಿಯೂ ಬಿಲ್ಲವರು ಶಕ್ತಿ ಪ್ರದರ್ಶಿಸುವ ಅನಿವಾರ್ಯತೆ ಇದೆ. ಸಮಾಜಕ್ಕೆ ಸಮಯ ನೀಡಿ ಸಮಾಜದೊಂದಿಗೆ ಬೆಳೆಯುವ ವ್ಯಕ್ತಿಗಳು ನಾವಾಗಬೇಕು ಎಂದರು.

ವೇದಿಕೆಯಲ್ಲಿ ಭಾರತ್‌ ಬ್ಯಾಂಕಿನ ನಿರ್ದೇಶಕ ಆರ್‌. ಡಿ. ಪೂಜಾರಿ, ಉದ್ಯಮಿ ಕೇಶವ್‌ ಸಾಲ್ಯಾನ್‌, ಕೈಗಾರಿಕೋದ್ಯಮಿ ಗೋಪಾಲ ಎಂ. ಪೂಜಾರಿ, ಕೇಂದ್ರ ಕಚೇರಿಯ ಉಪಾಧ್ಯಕ್ಷರುಗಳಾದ ಪುರುಷೋತ್ತಮ ಕೋಟ್ಯಾನ್‌, ರಾಜಾ ವಿ. ಸಾಲ್ಯಾನ್‌. ಸ್ಥಳೀಯ ಸಮಿತಿಯ ಪ್ರತಿನಿಧಿಗಳಾದ ಶಂಕರ ಡಿ. ಪೂಜಾರಿ, ಭಾಸ್ಕರ ವಿ. ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೋಟ್ಯಾನ್‌, ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಭಾಸ್ಕರ ಎಂ. ಪೂಜಾರಿ, ಗೌರವ ಕಾರ್ಯದರ್ಶಿ ಉಮೇಶ್‌ ಎನ್‌. ಸುರತ್ಕಲ್‌, ಕೋಶಾಧಿಕಾರಿ ರಮೇಶ್‌ ಬಂಗೇರ, ಉಪ ಕಾರ್ಯಾಧ್ಯಕ್ಷ ಜಿ. ಟಿ. ಪೂಜಾರಿ, ಜಿ. ವಿ. ಅಂಚನ್‌, ದೀಪಕ್‌ ಸುವರ್ಣ, ಸಮಿತಿಯ ಸದಸ್ಯರು, ಮಹಿಳಾ ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಭಾರತ್‌ ಬ್ಯಾಂಕಿನ ನಿರ್ದೇಶಕರಾದ ಭಾಸ್ಕರ ಸಾಲ್ಯಾನ್‌, ಸೋಮನಾಥ್‌ ಬಿ. ಅಮೀನ್‌, ಉದ್ಯಮಿ ದಿನೇಶ್‌ ಅಮೀನ್‌, ರಾಜಶೇಖರ್‌ ಸಾಲ್ಯಾನ್‌, ನಾಗೇಶ್‌ ಕೋಟ್ಯಾನ್‌, ಉಮೇಶ್‌ ಮಾರ್ನಾಡ್‌, ಕೃಷ್ಣ ಪೂಜಾರಿ, ಸದಾಶಿವ ಕರ್ಕೇರ, ದಿನೇಶ್‌ ಪೂಜಾರಿ, ದೇವರಾಜ್‌ ಪೂಜಾರಿ ಡೊಂಬಿವಲಿ, ಮೋಹನ್‌ದಾಸ್‌ ಹೆಜ್ಮಾಡಿ, ಶಂಕರ ಸುವರ್ಣ, ಯುವ ಅಭ್ಯುದಯ ಸಮಿತಿಯ ನಿಲೇಶ್‌ ಪೂಜಾರಿ, ಕಾಂದಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಜಯಪಾಲ್‌ ಶೆಟ್ಟಿ, ಸ್ಥಳೀಯ ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಿಲ್ಲವರ ಅಸೋಸಿಯೇಶನ್‌ ಗೌರವ ಕಾರ್ಯದರ್ಶಿ ಧರ್ಮಪಾಲ್‌ ಜೆ. ಅಂಚನ್‌  ಮತ್ತು ಧನಂಜಯ ಕೋಟ್ಯಾನ್‌ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ ಜರಗಿತು. ಅತಿಥಿ-ಗಣ್ಯರುಗಳನ್ನು ಮಹಿಳಾ ಸದಸ್ಯೆಯರ ಕಲಶದೊಂದಿಗೆ ಮೆರವಣಿಗೆಯ ಮೂಲಕ ಚೆಂಡೆ-ವಾಲಗದ ನಿನಾದದೊಂದಿಗೆ ಸಭಾಗೃಹಕ್ಕೆ ಬರಮಾಡಿಕೊಳ್ಳಲಾಯಿತು.

ಸಮಾಜದಲ್ಲಿ ಸುಶಿಕ್ಷಿತರು ಇನ್ನು ಹೆಚ್ಚಿನವರು ಉತ್ಸುಕರಾಗಿ ಅಸೋಸಿಯೇಶನ್‌ನಲ್ಲಿ ಸದಸ್ಯ ರಾಗಿ ಹೊಸ ಯೋಚನೆ ಯೋಜನೆಗಳಲ್ಲಿ ಕಾರ್ಯಶೀಲ ರಾಗಬೇಕು. ಇದರಿಂದ ಅಸೋಸಿಯೇಶನ್‌ನೊಂದಿಗೆ ಸಮಾಜ ಬೆಳೆಯಲು ಸಾಧ್ಯವಿದೆ 
– ಎಂ. ಎನ್‌. ಸನಿಲ್‌ 
(ಮಾಜಿ ನಿರ್ದೇಶಕರು : ಭಾರತ್‌ ಬ್ಯಾಂಕ್‌).

ಸ್ಥಳೀಯ ಸಮಿತಿಯ ಹೊಸ ಕಚೇರಿಯಿಂದ ಸ್ಥಳೀಯರಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದ್ದು, ನನ್ನ ಪರಿಸರದಲ್ಲಿ ಇದ್ದ ಸಮಿತಿಗೆ ಯಾವುದೇ ಸಹಾಯ ಮಾಡಲು ಸಿದ್ಧಳಿದ್ದೇನೆ 
– ಪ್ರತಿಭಾ ಗಿರ್ಕರ್‌ (ಸ್ಥಳೀಯ ನಗರ ಸೇವಕಿ).

ಸ್ಥಳೀಯ ಸಮಿತಿಯ ಯಶೋಗಾಥೆಗೆ ಕಾರಣ ಕರ್ತ ರಾದ ಗಂಗಾಧರ ಜೆ. ಪೂಜಾರಿ ಅವರ ದಕ್ಷ     ಕಾರ್ಯ ಚತುರತೆಯ15 ವರ್ಷ ಗಳ ಕನಸು ಇಂದು ನನಸಾಗಿದೆ. ಉಳಿದ 3 ಸ್ಥಳೀಯ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರೆಲ್ಲರೂ ಒಗ್ಗೂಡಬೇಕು. ಒಟ್ಟಾಗಿ ಸಾಧನೆ ಮಾಡಿದರೆ ಯಾವುದೂ ಅಸಾಧ್ಯವಲ್ಲ. ಕಾಂದಿವಲಿ ಸ್ಥಳೀಯ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಹಾಗೂ ಮಾಜಿ ಕಾರ್ಯಾಧ್ಯಕ್ಷರುಗಳ ಸಾಧನೆ ಇತರರಿಗೆ ಮಾದರಿಯಾಗಿದೆ 
– ಜಯ ಸಿ. ಸುವರ್ಣ 
(ಕಾರ್ಯಾಧ್ಯಕ್ಷರು : ಭಾರತ್‌ ಬ್ಯಾಂಕ್‌).

ಚಿತ್ರ-ವರದಿ:ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next