ಮುಂಬಯಿ: ರೋಗ ನಿರೋಧಕ ಶಕ್ತಿ ಹೊಂದಿದ ಹಾಲೆಯ ತೊಗಟೆಯ ಕಷಾಯ ಬೌದ್ಧಿಕ, ದೈಹಿಕ ಮಾನಸಿಕ ಕ್ಷಮತೆಯನ್ನು ಹೆಚ್ಚಿಸುವ ಔಷಧೀಯ ಗುಣಗಳಿರುವ ಹಸಿರು ಸೊಪ್ಪು, ತರಕಾರಿಗಳು ಆಟಿ ತಿಂಗಳಿನ ವಿಶೇಷತೆಯಾಗಿದೆ. ಇದು ಪ್ರಕೃತಿ ಹಾಗೂ ಮನುಷ್ಯರ ಸಂಬಂಧವನ್ನು ಸೂಚಿಸುತ್ತದೆ. ಆಟಿ ತಿಂಗಳು ಬದುಕನ್ನು ನಡೆಸುವ ಪೂರ್ವ ತಯಾರಿ ತಿಂಗಳಾಗಿದೆ ಎಂದು ಲೇಖಕಿ ಲತಾ ಸಂತೋಷ್ ಶೆಟ್ಟಿ ಅವರು ನುಡಿದರು.
ಆ. 6ರಂದು ಭಾಯಂದರ್ ಪೂರ್ವದ ಗೋಡೆªàವ್ ನಾಕಾದ ತೇಜೋ ಭವನದ ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಭಾಯಂದರ್ ಸ್ಥಳೀಯ ಸಮಿತಿಯ ಆಟಿಡೊಂಜಿ ಅಟಿಲ್ ಮತ್ತು ಶೈಕ್ಷಣಿಕ ನೆರವು ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಆಷಾಢ ಮಾಸ ಮಧುರ ಬಾಂಧವ್ಯದ ಬೆಸುಗೆಯಾಗಿದೆ. ತುಳುನಾಡಿನ ಸಂಪ್ರದಾಯಗಳು ಉಳಿಯಲು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ. ಮುಂದಿನ ಪೀಳಿಗೆ ಇದನ್ನು ನೋಡಿ ಕಲಿಯಲಿ ಎಂದು ನುಡಿದರು.
ಬಿಲ್ಲವರ ಅಸೋಸಿಯೇಶನ್ ಕೇಂದ್ರ ಕಚೇರಿಯ ವಿದ್ಯಾ ಉಪಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಬಂಗೇರ ಅವರು ಮಾತನಾಡಿ, ಮಕ್ಕಳ ಭವಿಷ್ಯ ಉತ್ತಮ ಪಥದಲ್ಲಿ ಸಾಗಲು ಮುಂಬಯಿ ಬಿಲ್ಲವರ ಅಸೋಸಿಯೇಶನ್ ಮಹತ್ತರ ಯೋಗದಾನ ನೀಡುತ್ತಿದೆ. ಯುವ ಪೀಳಿಗೆಗೆ ಬೇಕಾಗಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಂಘಟನೆಯ ಮುಖ್ಯವಾಹಿನಿಯಲ್ಲಿ ಸೇರಿಸಿ ಮುನ್ನಡೆಯಬೇಕು ಎಂದು ಹೇಳಿದರು.
ಭಾಯಂದರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ನರೇಶ್ ಕೆ. ಪೂಜಾರಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಸ್ಥಳೀಯ ಶಾಸಕ ನರೇಂದ್ರ ಮೆಹ್ತಾ, ರಾಜಕೀಯ ಮುಖಂಡ ಚೇತನ್ ಶೆಟ್ಟಿ, ಬೋಂಬೆ ಫೋರ್ಟ್ ರಾತ್ರಿಶಾಲೆಯ ಕಾರ್ಯಾಧ್ಯಕ್ಷ ಆರ್. ಕೆ. ಮೂಲ್ಕಿ, ಚಿತ್ರಾಪು ಕೆ. ಎಂ. ಕೋಟ್ಯಾನ್ ಮಾತನಾಡಿದರು. ಗೌರವ ಕಾರ್ಯದರ್ಶಿ ರಘುನಾಥ ಹಳೆಯಂಗಡಿ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಕೇಂದ್ರ ಕಾರ್ಯಾ ಲಯದ ಪದಾಧಿಕಾರಿಗಳಾದ ಗಣೇಶ್ ಪೂಜಾರಿ, ಮಹಿಳಾ ವಿಭಾಗದ ವತ್ಸಲಾ ಪೂಜಾರಿ, ಪ್ರೇಮಾ ಕೋಟ್ಯಾನ್, ಹಿರಿಯ ಸದಸ್ಯ ಶ್ರೀನಿವಾಸ ಕರ್ಕೇರ, ಸಂಘಟಕರಾದ ಎ. ಕೆ. ಹರೀಶ್, ಸುಮಿತ್ರಾ ಕರ್ಕೇರ, ಸ್ಥಳೀಯ ಕಚೇರಿಯ ಪದಾಧಿಕಾರಿಗಳಾದ ಉದಯ ಡಿ. ಸುವರ್ಣ, ವಾಸುದೇವ ಪೂಜಾರಿ, ಕೃಷ್ಣ ಬಂಗೇರ, ಆನಂದಿ ಬಂಗೇರ, ವಸಂತಿ ಬಂಗೇರ ಮತ್ತಿತರರು ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಸದಸ್ಯೆಯರಿಂದ ಖಾದ್ಯೋತ್ಸವ ಸ್ಪರ್ಧೆ ನಡೆಯಿತು. ಸಾಂಸ್ಕೃತಿಕವಾಗಿ ಕಾರ್ಯಕ್ರಮದಲ್ಲಿ ನೃತ್ಯ ವೈವಿಧ್ಯ ಜರಗಿತು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ: ರಮೇಶ್ ಅಮೀನ್