ಮುಂಬಯಿ: ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಇದರ ನಿಕಟಪೂರ್ವ ಮಹಿಳಾ ಉಪ ಸಮಿತಿಯ ಸಂಯೋಜನೆಯಲ್ಲಿ ಜು. 22 ರಂದು ಥಾಣೆ ಪಶ್ಚಿಮದಲ್ಲಿರುವ ಮಂಗಲ್ ಕಾರ್ಯಾಲಯ ಸಭಾ ಗೃಹದಲ್ಲಿ ಆಷಾಢೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಮಹಿಳಾ ವಿಭಾಗದ ಸದಸ್ಯೆಯರು ಕುಂದಾಪುರ ಶೈಲಿಯ ವಿವಿಧ ಖಾದ್ಯ- ವೈವಿಧ್ಯಗಳನ್ನು ಹಾಗೂ ಆಷಾಢ ಮಾಸದಲ್ಲಿ ಊರುಗಳಲ್ಲಿ ತಯಾರಿಸುವ ತಿಂಡಿ-ತಿನಿಸುಗಳನ್ನು ಸಮುದಾಯದ ಜನತೆಗೆ ಆಷಾಢೋತ್ಸವದ ಮೂಲಕ ಪರಿಚಯಿಸಿದರು. ಸಮುದಾಯದ ಗಣ್ಯರೊಂದಿಗೆ ಸಭಾಧ್ಯಕ್ಷರಾದ ಮಂಜುನಾಥ ಬಿಲ್ಲವ ಶಿರೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಷಾಢೋತ್ಸವದ ಹಿನ್ನೆಲೆ ಮತ್ತು ಆಚರಣೆಯ ಕುರಿತು ಮಾಜಿ ಉಪಾಧ್ಯಕ್ಷರಾದ ಸಿ. ಎ. ಪೂಜಾರಿ, ಭಾಸ್ಕರ ಕೆ. ಪೂಜಾರಿ, ಹೇರಂಜಾಲು ಗೋಪಾಲ ಗಾಣಿಗ ಮತ್ತು ಸುಬ್ರಹ್ಮಣ್ಯ ನಾವುಡ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಜುನಾಥ ಬಿಲ್ಲವ ಶಿರೂರು ಮಾತನಾಡಿ, ಇಂತಹ ಆಚರಣೆಗಳು ಯುವಪೀಳಿಗೆಗೆ ಮಾರ್ಗದರ್ಶನ ಮಾಡಿದಂತೆ, ನಮ್ಮ ಆಚಾರ-ವಿಚಾರ, ಸಂಸ್ಕಾರ-ಸಂಸ್ಕೃತಿಗಳು ಮುಂದಿನ ತಲೆಮಾರಿಗೆ ಪರಿಚಯಿಸುವ ಒಂದು ಮಹತ್ಕಾರ್ಯ ಇದಾಗಿದೆ. ಈ ಯಶಸ್ವಿ ಕಾರ್ಯಕ್ರಮ ಸಂಯೋಜನೆ ಮಾಡಲು ಮಹಿಳೆಯರು ಅಪಾರ ಶ್ರಮಪಟ್ಟಿದ್ದಾರೆ. ಅವರ ಪರಿಶ್ರಮದ ಪ್ರತೀಕವೆಂಬಂತೆ ನಾವೆಲ್ಲರೂ ಇಂದು ಉತ್ಸವವನ್ನು ಆಚರಿಸುತ್ತಿದ್ದೇವೆ. ಸಂಘ ದಲ್ಲಿ ನಡೆಯುವ ಎಲ್ಲ ಕಾರ್ಯ ಕ್ರಮಗಳಲ್ಲಿ ತಾವೆಲ್ಲರೂ ಉಪಸ್ಥಿತರಿದ್ದು ಸಂಘಟನೆಯ ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕು ಸಮುದಾಯದ ಶ್ರೇಯೋಭಿವೃದ್ಧಿಯೇ ನಮ್ಮ ಧ್ಯೇಯ ವಾಗಬೇಕು ಎಂದರು.
ಮಾಜಿ ಅಧ್ಯಕ್ಷರುಗಳಾದ ಆನಂದ ಎಂ. ಪೂಜಾರಿ, ಎಸ್. ಟಿ. ಪೂಜಾರಿ ಮತ್ತು ಸಂಘದ ನಿಕಟಪೂರ್ವ ಪದಾಧಿಕಾರಿಗಳಾದ ಗೌರವ ಪ್ರಧಾನ ಕಾರ್ಯದರ್ಶಿ ಸೂರ್ಯ ಎಸ್. ಪೂಜಾರಿ, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಬೇಬಿ ಆರ್. ಪೂಜಾರಿ, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ¾ಣ ಪೂಜಾರಿ ಕೊಡೇರಿ, ಭಜನಾ ಮಂಡಳಿಯ ಸಂಚಾಲಕಿ ಸುಶೀಲಾ ಶೀನ ಪೂಜಾರಿ ಆಷಾಢೋತ್ಸವ ಮತ್ತು ಸಂಘಟನಾಭಿವೃದ್ಧಿಯ ಕುರಿತು ಮಾತನಾಡಿದರು.
ಸುಶೀಲಾ ಎಸ್. ಪೂಜಾರಿ, ಭಾಸ್ಕರ ಕಾಂಚನ್, ಹೇರಂಜಾಲು ಗೋಪಾಲ ಗಾಣಿಗ ಮತ್ತು ಸುಬ್ರಹ್ಮಣ್ಯ ನಾವುಡ ಅವರಿಗೆ ಸಭಾಧ್ಯಕ್ಷರು ಗೌರವಿಸಿದರು. ಅತಿಥಿ-ಗಣ್ಯರುಗಳನ್ನು ಮಹಿಳಾ ಸದಸ್ಯೆಯರು ಗೌರವಿಸಿದರು. ಸಭಾಧ್ಯಕ್ಷರಾದ ಮಂಜುನಾಥ ಬಿಲ್ಲವ ಶಿರೂರು, ಆನಂದ ಎಂ. ಪೂಜಾರಿ, ಎಸ್. ಟಿ. ಪೂಜಾರಿ, ಸೂರ್ಯ ಎಸ್. ಪೂಜಾರಿ, ಅಶೋಕ ಎನ್. ಪೂಜಾರಿ, ಬೇಬಿ ಆರ್. ಪೂಜಾರಿ, ಯಶೋದಾ ಎಸ್. ಪೂಜಾರಿ, ಲಕ್ಷ¾ಣ್ ಪೂಜಾರಿ ಕೊಡೇರಿ, ಎಸ್. ಕೆ. ಪೂಜಾರಿ, ಸುಶೀಲಾ ಶೀನ ಪೂಜಾರಿ ಮತ್ತು ಶ್ರೀಧರ ವಿ. ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮನೋರಂಜನೆಯ ಅಂಗವಾಗಿ ಮಹಿಳೆಯರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಮಹಿಳಾ ಸದಸ್ಯರು ಪ್ರಾರ್ಥನೆಗೈದರು. ಯಶೋದಾ ಎಸ್. ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.
ಸುಶೀಲಾ ಆರ್. ಪೂಜಾರಿ ವಂದಿಸಿದರು. ಪೂರ್ಣಿಮಾ ಶ್ರೀಧರ ಪೂಜಾರಿ ವಿಶೇಷ ಸಹಕಾರ ನೀಡಿದರು. ಶಕುಂತಲಾ ಎ. ಪೂಜಾರಿ, ಮಲ್ಲಿಕಾ ಎಸ್. ಪೂಜಾರಿ, ಸುಶೀಲಾ ಸುರೇಶ ಪೂಜಾರಿ, ಸುಮತಿ ಎಸ್. ಪೂಜಾರಿ, ರೇಖಾ ಎನ್. ಬಿಲ್ಲವ, ಗಿರಿಜಾ ಕೆ. ಹೊಕ್ಕೋಳಿ, ಗಿರಿಜಾ ಬಿ. ಪೂಜಾರಿ, ಲಲಿತಾ ಎಸ್. ಪೂಜಾರಿ, ಶಾರದಾ ಬಿ. ಪೂಜಾರಿ, ಕುಸುಮ ಎ. ಪೂಜಾರಿ ಮತ್ತು ವಿಜಯಾ ಎಂ. ಚಂದನ್ ಸಹಕರಿಸಿದರು.
ಸಮಾಜ ಬಾಂಧವರು, ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.