ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕೇಂದ್ರ ಕಚೇರಿಯ ಮಹಿಳಾ ವಿಭಾಗ ಹಾಗೂ ಎಲ್ಲ ಸ್ಥಳೀಯ ಕಚೇರಿಯ ಮಹಿಳಾ ಸಮಿತಿಯ ಜಂಟಿ ಸಭೆ ಫೆ. 19ರಂದು ಅಪರಾಹ್ನ 3ರಿಂದ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಜರಗಿತು.
ಈ ಸಂದರ್ಭ ಕೇಂದ್ರ ಕಚೇರಿಯ ಕಾರ್ಯಕಾರಿ ಸಮಿತಿಯ ಸದಸ್ಯೆ ಯರೊಂದಿಗೆ ಎಲ್ಲ ಸ್ಥಳೀಯ ಕಚೇರಿಯ ಉಪಸ್ಥಿತ ಮಹಿಳೆ ಯರು ಪುಲ್ವಾಮದಲ್ಲಿ ಇತ್ತೀಚೆಗೆ ಆತಂಕವಾದಿಗಳ ದಾಳಿಗೆ ಹುತಾತ್ಮ ರಾದ ಸಿಆರ್‌ಪಿಎಫ್‌ನ ಯೋಧ
ರಿಗೆ ಕ್ಯಾಂಡಲ್ ಹೊತ್ತಿಸಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಯನ್ನು ಅರ್ಪಿಸಿದರು.
ಅಸೋಸಿಯೇಶನ್‌ನ ಮಹಿಳಾ ವಿಭಾಗದಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್ ಸಭೆಯಲ್ಲಿ ಮಾತನಾಡಿ, ಗಡಿ ಕಾಯುವ ಯೋಧರು ನಿಜವಾಗಿಯೂ ನಮ್ಮ ದೇಶದ ಹೆಮ್ಮೆಯ ಸುಪುತ್ರರು. ಅವರನ್ನು ನಾವು ಎಂದೂ ಮರೆಯಬಾರದು. ಮಹಿಳೆ ಯರು ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು. ನಮ್ಮ ಎಲ್ಲ ಸ್ಥಳೀಯ ಕಚೇರಿಯ ಮಹಿಳೆಯರು ಹುಮ್ಮಸ್ಸಿನಿಂದ ತಮ್ಮ ತಮ್ಮ ಸ್ಥಳೀಯ ಕಚೇರಿಗಳಲ್ಲಿ ಒಳ್ಳೆಯ ಕೆಲಸವನ್ನು ಮಾಡಿ ಸಂಸ್ಥೆಯ ಬೆಳವಣಿಗೆಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ನುಡಿದು ಸಂತೋಷವನ್ನು ವ್ಯಕ್ತ
ಪಡಿಸಿದರು. ಎಲ್ಲರೂ ತಮ್ಮ ಸಂಸ್ಥೆಯ ಉನ್ನತಿಯನ್ನು ಬಯಸಬೇಕು. ವಯಸ್ಕ ಬಡ ಮಹಿಳೆಯರಿಗೆ ಸಹಾಯ ಮಾಡುವಲ್ಲಿ ತಮ್ಮಿಂದಾದಷ್ಟು ನೆರವಾಗುವಂತೆ ಮನವಿ ಮಾಡಿದರು.
ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ್ ಎಸ್. ಕೋಟ್ಯಾನ್ ಇವರ ಮಾತನ್ನು ಸಮರ್ಥಿಸುತ್ತಾ ಮಹಿಳೆಯರು ತಮ್ಮ
ಸಂಸ್ಥೆಯ ವಿವಿಧ ಕಾರ್ಯಕಲಾಪಗಳಲ್ಲಿ ಭಾಗಿಗಳಾಗಿ ತಮ್ಮ ಪ್ರತಿಭೆ
ಯನ್ನು ಮೆರೆಯಬೇಕು. ತಮಗೆ ಯಾವುದೇ ಸಲಹೆ ಸೂಚನೆಗಳ ಅಗತ್ಯವಿದ್ದಲ್ಲಿ ಕೇಂದ್ರ ಕಚೇರಿಯ ಸದಸ್ಯರು ಯಾವಾಗಲೂ ಸಹಾಯ ಮಾಡುತ್ತಾರೆ ಎಂದು ಭರವಸೆಯನ್ನು ನೀಡಿ ವಿಧವಾ ವೇತನ ಮಾಸಾಶನ ಫಂಡ್‌ಗೆ ತಮ್ಮ ಧರ್ಮಪತ್ನಿಯ ಹೆಸರಲ್ಲಿ ಒಂದು ವರ್ಷದ ಒಬ್ಬರ ದೇಣಿಗೆಯನ್ನು ಘೋಷಿಸಿದರು. ಅವರೊಂದಿಗೆ ಉಪಸ್ಥಿತರಿದ್ದ ಹೆಚ್ಚಿನ ಮಂದಿ ತಾವು ಕೂಡ ಇದಕ್ಕೆ ನೆರವಾಗುವುದಾಗಿ ತಿಳಿಸಿದರು.
ಈ ಸಭೆಯಲ್ಲಿ ಎಲ್ಲ ಸ್ಥಳೀಯ ಕಚೇರಿಯ ಸದಸ್ಯೆಯರು ತಮ್ಮ ವಾರ್ಷಿಕ ಚಟುವಟಿಕೆಗಳನ್ನು ವಿವರಿಸಿದರು. ಸ್ಥಳೀಯ ಕಚೇರಿಗಳ ಹೆಚ್ಚಿನ ಸದಸ್ಯೆಯರು ಉಪಸ್ಥಿತರಿದ್ದರು. ಉಪ ಕಾರ್ಯಾಧ್ಯಕ್ಷೆ ಪ್ರಭಾ ಬಂಗೇರ ಹಾಗೂ ಗಿರಿಜಾ ಚಂದ್ರಶೇಖರ್, ಗೌರವ ಕಾರ್ಯದರ್ಶಿ ಸುಮಿತ್ರಾ ಎಸ್. ಬಂಗೇರ ಹಾಗೂ ಮಹಿಳಾ ವಿಭಾಗದ ಇತರ ಸದಸ್ಯೆಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೌರವ ಪ್ರಧಾನ ಕಾರ್ಯದರ್ಶಿ ಸುಮಿತ್ರಾ ಎಸ್. ಬಂಗೇರ ನಿರೂಪಿಸಿದರು. ಜತೆ ಕಾರ್ಯದರ್ಶಿ ಕುಸುಮಾ ಸಿ. ಅಮೀನ್ ವಂದಿಸಿದರು.