ಮುಂಬಯಿ, ಸೆ. 9: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯ ಆಶ್ರಯದಲ್ಲಿ ಸೆ. 2 ರಂದು ಶ್ರೀ ನಾರಾಯಣ ಗುರುಗಳ 166 ನೇ ಜಯಂತೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಮೊದಲಿಗೆ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಘದ ಅರ್ಚಕ ಐತಪ್ಪ ಪೂಜಾರಿ ಮತ್ತು ವಿಶ್ವನಾಥ್ ಅಮೀನ್ ಅವರು ಪೂಜಾ ಕಾರ್ಯ ನೆರವೇರಿಸಿದರು.
ಸಂಘದ ಕಾರ್ಯಾಧ್ಯಕ್ಷ ದೇವರಾಜ ಪೂಜಾರಿ ಅವರು, ಮನುಕುಲಕ್ಕೆ ಬಂದ ಕೊರೊನಾದ ಸಂಕಟ ಬೇಗನೆ ದೂರವಾಗಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಸಿ. ಎನ್. ಕರ್ಕೇರ, ಮಾಜಿ ಕಾರ್ಯಾಧ್ಯಕ್ಷ ರವಿ ಸನಿಲ್, ಉಪಾಧ್ಯಕ್ಷರುಗಳಾದ ಚಂದ್ರಹಾಸ್ ಎಸ್. ಪಾಲನ್, ಶ್ರೀಧರ್ ಅಮೀನ್, ಕಾರ್ಯದರ್ಶಿ ಪುರಂದರ ಪೂಜಾರಿ, ಕೋಶಾ ಕಾರಿ ಸುನಿಲ್ ಸಾಲ್ಯಾನ್ ಮತ್ತು ಸಂಘದ ಪದಾಕಾರಿಗಳು ಮಹಿಳಾ ವಿಭಾಗದ ಪದಾಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಅನ್ನದಾನ ನೀಡಿದ ಮಂಜುನಾಥ್ ಕ್ಯಾಟರರ್ಸ್‌ನ ಟಿ. ಕೆ. ಕೋಟ್ಯಾನ್ ದಂಪತಿ, ದಾನಿಗಳದ ಗಿರಿಜಾ ಎಸ್. ಪಾಲನ್, ರಾಜು ಜಿ. ಪೂಜಾರಿ, ವಿಮಲಾ ಕೆ. ಅಂಚನ್, ಸತೀಶ್ ಕೋಟ್ಯಾನ್, ಹೇಮಾ ದೇವರಾಜ, ಕುಶ ರವಿ ಸನಿಲ್, ಶ್ರೀಧರ್ ಅಮೀನ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದು ಗುರುಜಯಂತಿ ಯಶಸ್ವಿಯಾಗಿ ಆಚರಿಸುವಲ್ಲಿ ಸಹಕರಿಸಿದರು. ಸರಕಾರದ ನಿರ್ದೇಶನದ ಅನುಸಾರ ಸಾಮಾಜಿಕ ಅಂತರವನ್ನು ಪಾಲಿಸಿ 166 ನೇ ಗುರುಜಯಂತಿಯನ್ನು ಅರ್ಥಪೂರ್ಣವಾಗಿ ಭಕ್ತಿ ಶ್ರದ್ಧೆಯಿಂದ ಸರಳವಾಗಿ ಆಚರಿಸಲಾಯಿತು.