ಥಾಣೆ: ಥಾಣೆ ಪಶ್ಚಿಮದ ಯಶೋಧನ್ ನಗರದ ಬಿಲ್ಲವರ ಅಸೋಸಿಯೇಶನ್ ಥಾಣೆ ಸ್ಥಳೀಯ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 167ನೇ ಜಯಂತ್ಯುತ್ಸವ ಆಚರಣೆಯು ಇತ್ತೀಚೆಗೆ ನಡೆಯಿತು.
ಅರ್ಚಕ ಗಂಗಾಧರ ಕಲ್ಲಾಡಿ ಅವರು ಗುರುಪೂಜೆಯನ್ನು ನೆರ ವೇರಿಸಿದರು. ಥಾಣೆ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಸಂಜೀವ ಎಸ್. ಪೂಜಾರಿ ಮತ್ತು ಉಷಾ ಪೂಜಾರಿ ದಂಪತಿ ಪೂಜಾವ್ರತ ಕೈಗೊಂಡರು. ಗುರು ಸನ್ನಿಧಿಯಲ್ಲಿ ದೀಪ ಪ್ರಜ್ವಲನೆ ಬಳಿಕ ಭಜನ ಕಾರ್ಯಕ್ರಮ ನಡೆಯಿತು. ಬಳಿಕ ಮಹಾ ಮಂಗಳಾರತಿ, ಪ್ರಸಾದ ವಿತ ರಣೆ ಹಾಗೂ ಅನ್ನದಾನ ನಡೆಯಿತು.
ಗುರುಪೂಜೆಯಲ್ಲಿ ಬಿಲ್ಲವರ ಅಸೋಸಿಯೇಶನ್ ಉಪಾಧ್ಯಕ್ಷ ದಯಾನಂದ ಆರ್. ಪೂಜಾರಿ, ಸಾಂಸ್ಕೃತಿಕ ಉಪಸಮಿತಿಯ ಗೌರವ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಪ್ರಭಾ ಕೆ. ಬಂಗೇರ, ಸದಸ್ಯ ಜಗನಾಥ ಅಮೀನ್, ಥಾಣೆಯ ಮಾಜಿ ಮೇಯರ್ ಮೀನಾಕ್ಷಿ ಶಿಂಧೆ, ಸ್ಥಳೀಯ ನಗರ ಸೇವಕ ದಿಲೀಪ್ ಬಾಲ್‌ಟಕ್ಕೆ, ರಾಜಕೀಯ ನೇತಾರ ರಾಮ್ ಠಾಕೂರ್, ಭಾರತ್ ಬ್ಯಾಂಕ್‌ನ ನಿರ್ದೇಶಕಿ ಜ್ಯೋತಿ ಕೆ. ಸುವರ್ಣ, ಮಾಜಿ ನಿರ್ದೇಶಕ ಅಶೋಕ್ ಎಂ. ಕೋಟ್ಯಾನ್ ದಂಪತಿ, ಸಮಾಜ ಸೇವಕ, ಏಷ್ಯಾಟಿಕ್ ಕ್ರೈನ್ ಸರ್ವಿಸೆಸ್ ಮಾಲಕ ಗಣೇಶ್ ಆರ್. ಪೂಜಾರಿ, ಹಿಂದೂ ಮಹಾಸಭಾ ಮಹಾರಾಷ್ಟ್ರ ಇದರ ಅಧ್ಯಕ್ಷ ಪೊಲ್ಯ ಉಮೇಶ್ ಶೆಟ್ಟಿ, ಘೋಡ್‌ಬಂದರ್ ರೋಡ್ ಕನ್ನಡ ಅಸೋಸಿಯೇಶನ್‌ನ ಅಧ್ಯಕ್ಷ ಹರೀಶ್ ಡಿ. ಸಾಲ್ಯಾನ್ ಬಜಗೋಳಿ, ಥಾಣೆಯ ಉದ್ಯಮಿಗಳಾದ ಅಶೋಕ್ ಹೆಗ್ಡೆ ದಂಪತಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಮತ್ತೆ ಗಾಳಿಪಟ-2 ಹಾರಾಟ.. ಸೆ. 18ರಿಂದ ಚಿತ್ರೀಕರಣ
ಬಾಲು ಎಲ್. ಸಾಲ್ಯಾನ್, ನವೋದಯ ಕನ್ನಡ ಸೇವಾ ಸಂಘದ ಕಾರ್ಯದರ್ಶಿ ಸುನಿಲ್ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ಥಾಣೆ ಕಿಸನ್ ನಗರ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಜಯರಾಮ ಪೂಜಾರಿ, ಕಾರ್ಯದರ್ಶಿ ರಮೇಶ್ ಕೋಟ್ಯಾನ್, ಉದ್ಯಮಿಗಳಾದ ಸದಾನಂದ ಅಂಚನ್, ವಾಸು ಪೂಜಾರಿ, ರವಿ ಪೂಜಾರಿ, ಸುರೇಂದ್ರ ಕರ್ಕೇರ, ಸುಧಾಕರ್ ಅಜೆಕಾರ್, ವಸಂತ್ ಸಾಲ್ಯಾನ್, ಚಿತ್ತರಂಜನ್ ಅಮೀನ್, ವಿಶ್ವನಾಥ್ ಆರ್. ಪೂಜಾರಿ, ದಿವಾಕರ್ ಸುವರ್ಣ, ಭಾರತ್ ಬ್ಯಾಂಕ್‌ನ ಥಾಣೆ ಶಾಖೆಯ ಪ್ರಬಂಧಕಿ ಚಿತ್ರಾ ಡಿ. ಸುವರ್ಣ, ಬಿಜೆಪಿ ಕಾರ್ಯಕರ್ತ ಹರೀಶ್ ಉದ್ಯಾವರ, ಥಾಣೆ ಚಾಂದನಿ ಕೋಳಿವಾಡ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಉಪಾಧ್ಯಕ್ಷ ವಿಕ್ರಮಾನಂದ ಶೆಟ್ಟಿ, ಅರುಣಾ ಟೈರ್ ಇದರ ವಿಶ್ವನಾಥ ಎ. ಪೂಜಾರಿ ಮತ್ತಿತರ ಗಣ್ಯರು, ಗುರು ಭಕ್ತರು ಗುರುಪೂಜೆಯಲ್ಲಿ ಪಾಲ್ಗೊಂಡಿದ್ದರು.
ಗೌರವಾರ್ಪಣೆ
ಗಣ್ಯರನ್ನು ಗುರು ಜಯಂತಿಯ ಧಾರ್ಮಿಕ ಕಾರ್ಯ ಕ್ರಮ ದಲ್ಲಿ ಥಾಣೆ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ಅನಂತ ಡಿ. ಸಾಲ್ಯಾನ್, ಕಾರ್ಯಾಧ್ಯಕ್ಷ ಸಂಜೀವ ಎಸ್. ಪೂಜಾರಿ, ಉಪ ಕಾರ್ಯಾಧ್ಯಕ್ಷ ಸುರೇಶ್ ಎಸ್. ಪೂಜಾರಿ, ಗೌರವ ಕಾರ್ಯದರ್ಶಿ ಹರೀಶ್ ಟಿ. ಪೂಜಾರಿ ಅವರು ಶಾಲು ಹೊದೆಸಿ, ಪ್ರಸಾದವನ್ನಿತ್ತು ಗೌರವಿಸಿದರು. ಅಪಾರ ಸಂಖ್ಯೆಯಲ್ಲಿ ಗುರು ಭಕ್ತರು ಗುರುಪೂಜೆಯಲ್ಲಿ ಪಾಲ್ಗೊಂಡು ಅನ್ನ ಪ್ರಸಾದವನ್ನು ಸ್ವೀಕರಿಸಿ ಗುರುದೇವರ ಕೃಪೆಗೆ ಪಾತ್ರರಾದರು.
ಥಾಣೆ ಸ್ಥಳೀಯ ಕಚೇರಿಯ ಜತೆ ಕಾರ್ಯದರ್ಶಿ ಪ್ರಶಾಂತ್ ಎಸ್. ಪೂಜಾರಿ, ಕೋಶಾಧಿಕಾರಿ ದೇವದಾಸ್ ಎಸ್. ಕರ್ಕೇರ, ಜತೆ ಕೋಶಾಧಿಕಾರಿ ಹರೀಶ್ ಕುಮಾರ್, ಸದಸ್ಯರಾದ ಲಕ್ಷ್ಮಣ್ ಕೆ. ಅಮೀನ್, ರವಿ ಎಸ್. ಕೋಟ್ಯಾನ್, ರೂಪಾ ಕೆ. ಪೂಜಾರಿ, ತ್ರಿವೇಣಿ ಬಿ. ಪೂಜಾರಿ, ಮಹಾಬಲ ಜಿ. ಸಾಲ್ಯಾನ್, ರಶ್ಮಿ ಎಸ್. ಪೂಜಾರಿ, ಲತಾ ಎ. ಪೂಜಾರಿ, ರವೀಂದ್ರ ಎಸ್. ಪೂಜಾರಿ ಹಾಗೂ ವಿಶೇಷ ಆಮಂತ್ರಿತರು, ಮಹಿಳಾ ವಿಭಾಗದ, ಯುವ ವಿಭಾಗದ ಸದಸ್ಯರು ಗುರುಪೂಜೆಯಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.
ಚಿತ್ರ-ವರದಿ: ರಮೇಶ್ ಉದ್ಯಾವರ್