Advertisement
ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಎಸ್. ಎಸ್. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಕಾರ್ಯಾಲಯದ ಉಪಾಧ್ಯಕ್ಷ ದಯಾನಂದ ಪೂಜಾರಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ಥಾಣೆಯ ಗಣೇಶ್ ಆರ್. ಪೂಜಾರಿ ಪಾಲ್ಗೊಂಡಿದ್ದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಪ್ರಭಾ ಬಂಗೇರ ಹಾಗೂ ಥಾಣೆ ಹೊಟೇಲ್ ಉದ್ಯಮಿಗಳಾದ ವಿಶ್ವನಾಥ ಆರ್. ಪೂಜಾರಿ, ಸುರೇಶ್ ಎಸ್. ಪೂಜಾರಿ, ಭಾರತ್ ಬ್ಯಾಂಕ್‌ನ ನಿರ್ದೇಶಕ ಜ್ಯೋತಿ ಕೆ. ಸುವರ್ಣ, ಸ್ಥಳೀಯ ಸಮಿತಿಯ ಗೌರವ ಕೋಶಾಧಿಕಾರಿ ದೇವದಾಸ್ ಕರ್ಕೇರ ಉಪಸ್ಥಿತರಿದ್ದರು.
Related Articles
Advertisement
ಬಿಲ್ಲವರ ಅಸೋಸಿಯೇಶನ್ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಪ್ರಭಾ ಬಂಗೇರ ಮಾತನಾಡಿ, ಮಹಿಳಾ ವಿಭಾಗದ ಸದಸ್ಯೆಯರು ಕೂಡಾ ಈ ಕಿಟ್ ವಿತರಣೆಗೆ ಸಹಕರಿಸಿದ್ದಾರೆ. ಇಂತಹ ಕಾರ್ಯಗಳಲ್ಲಿ ಮಹಿಳಾ ವಿಭಾಗವು ಎಂದೂ ಹಿಂಜರಿಯುವುದಿಲ್ಲ. ಮುಂದೆಯೂ ನಾವು ಇಂತಹ ಆಪತ್ಕಾಲದಲ್ಲಿ ಸಹಕಾರ ನೀಡುತ್ತೇವೆ ಎಂದರು.
ಜ್ಯೋತಿ ಕೆ. ಸುವರ್ಣ ಮಾತನಾಡಿ, ಬಿಲ್ಲವರ ಅಸೋಸಿಯೇಶನ್ ದಿ| ಜಯ ಸುವರ್ಣರ ಮಾರ್ಗದರ್ಶನದಂತೆ ಈಗಲೂ ಕಾರ್ಯ ನಿರ್ವಹಿಸುತ್ತಿದೆ. ಅವರ ದೂರದೃಷ್ಟಿಯ 22 ಸ್ಥಳೀಯ ಕಚೇರಿಗಳನ್ನು ಸ್ಥಾಪಿಸಲಾಗಿದೆ. ಅದರ ಸದುಪಯೋಗವನ್ನು ನಮ್ಮ ಸಮಾಜದ ಬಂಧುಗಳು ಪಡೆಯುತ್ತಿದ್ದಾರೆ. ಬಿಲ್ಲವರ ಅಸೋಸಿಯೇಶನ್ ನೀಡುವ ಆರ್ಥಿಕ ಸಹಾಯ, ಶೈಕ್ಷಣಿಕ ನೆರವಿನ ಯೋಜನೆಗಳ ಸದುಪಯೋಗವನ್ನು ಸ್ಥಳೀಯ ಸಮಿತಿಗಳ ಮುಖಾಂತರ ಸಮಾಜ ಬಾಂಧವರು ಪಡೆಯಬೇಕು ಎಂದರು. ಅತಿಥಿ-ಗಣ್ಯರು ನೂರಾರು ಸಮಾಜ ಬಾಂಧವರಿಗೆ ಆಹಾರ ಕಿಟ್‌ಗಳನ್ನು ವಿತರಿಸಿ ಶುಭ ಹಾರೈಸಿದರು. ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುರೇಶ್ ಎಸ್. ಪೂಜಾರಿ, ದೇವದಾಸ್ ಕರ್ಕೇರ, ಪ್ರಶಾಂತ್ ಪೂಜಾರಿ, ಲಕ್ಷ್ಮಣ್ ಕೆ. ಅಮೀನ್, ತ್ರಿವೇಣಿ ಪೂಜಾರಿ, ಎಂ. ಜಿ. ಸಾಲ್ಯಾನ್, ಜಯಂತ್ ಕೋಟ್ಯಾನ್, ಪ್ರೇಮಾನಂದ ಕುಕ್ಯಾನ್, ಗಿರಿಧರ ಕರ್ಕೇರ, ಜಯರಾಮ ಸಾಲ್ಯಾನ್, ಕೃಷ್ಣ ಸುವರ್ಣ, ವಸುಧಾ ಪೂಜಾರಿ, ರಾಘವ ಕೋಟ್ಯಾನ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಗೌರವ ಕಾರ್ಯಧ್ಯಕ್ಷ ಅನಂತ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.