Advertisement

ಬಿಲ್ಲವರ ಅಸೋಸಿಯೇಶನ್‌ ನವಿಮುಂಬಯಿ: ಗುರು ಜಯಂತಿ 

02:23 PM Sep 15, 2017 | Team Udayavani |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ನವಿ ಮುಂಬಯಿ ಸ್ಥಳೀಯ ಸಮಿತಿಯ ವತಿಯಿಂದ ಶ್ರೀ ನಾರಾಯಣ ಗುರುಗಳ 163ನೇ ಜಯಂತಿ ಆಚರಣೆಯು ಸೆ. 10ರಂದು ನೆರೂಲ್‌ ಶ್ರೀ ಶನೀಶ್ವರ ಮಂದಿರದ ಸಭಾಂಗಣದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.

Advertisement

ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ ಅವರು ಕಲಶ ಪ್ರತಿಷ್ಠಾಪನೆಗೈದರು. ಕೃಷ್ಣ ಐ. ಕೋಟ್ಯಾನ್‌ ಮತ್ತು ಕೆ. ಟಿ. ಅಮೀನ್‌ ಅವರು ಪೂಜಾ ಕಾರ್ಯಕ್ರಮಗಳಲ್ಲಿ ಸಹಕರಿಸಿದರು. ಬಳಿಕ ಸದಸ್ಯರಿಂದ ಹಾಗೂ ಮಹಿಳೆಯರಿಂದ ಭಜನ ಕಾರ್ಯಕ್ರಮ ನಡೆಯಿತು. ರಾತ್ರಿ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು. ಉದ್ಯಮಿಗಳಾದ ವಿಶ್ವನಾಥ ಕೆ. ಪೂಜಾರಿ, ಕೃಷ್ಣ ಎಂ. ಪೂಜಾರಿ, ಎಸ್‌. ಕೆ. ಕೋಟ್ಯಾನ್‌, ರವಿ ಪೂಜಾರಿ ಬೋಳ ಅವರ ಪ್ರಾಯೋಜಕತ್ವದಲ್ಲಿ ಅನ್ನಸಂತರ್ಪಣೆ ನೆರವೇರಿತು.

ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌, ಉಪಾಧ್ಯಕ್ಷ ಪುರುಷೋತ್ತಮ ಕೋಟ್ಯಾನ್‌, ಗೌರವ ಕೋಶಾಧಿಕಾರಿ ಮಹೇಶ್‌ ಸಿ. ಪೂಜಾರಿ, ಸಾಮಾಜಿಕ ಮತ್ತು ಧಾರ್ಮಿಕ ಉಪ ಸಮಿತಿಯ ಕಾರ್ಯದರ್ಶಿ ರವೀಂದ್ರ ಶಾಂತಿ, ಯುವ ವಿಭಾಗದ ಕಾರ್ಯಾಧ್ಯಕ್ಷ ನೀಲೇಶ್‌ ಪೂಜಾರಿ ಪಲಿಮಾರು, ಗೌರವ ಕಾರ್ಯದರ್ಶಿ ಉಮೇಶ್‌ ಎನ್‌. ಕೋಟ್ಯಾನ್‌, ನೆರೂಲ್‌ ಶ್ರೀ ಶನಿಮಂದಿರದ ಕಾರ್ಯಾಧ್ಯಕ್ಷಸಂತೋಷ್‌ ಡಿ. ಶೆಟ್ಟಿ, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ ಶೆಟ್ಟಿ ಅವರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ನೆರೂಲ್‌ ಶ್ರೀ ಅಯ್ಯಪ್ಪ ಹಾಗೂ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ, ಹೆಗ್ಗಡೆ ಸೇವಾ ಸಂಘ ಐರೋಲಿ, ರಂಗಭೂಮಿ ಫೈನ್‌ಆರ್ಟ್ಸ್, ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿ ಟೆಬಲ್‌ ಟ್ರಸ್ಟ್‌, ಬಂಟರ ಸಂಘ ನವಿ ಮುಂಬಯಿ ಪ್ರಾದೇಶಿಕ ಸಮಿತಿ ಹಾಗೂ ಇತರ ತುಳು-ಕನ್ನಡಿಗರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ರಮೇಶ್‌ ಎಂ. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ, ಗೌರವ ಕೋಶಾಧಿಕಾರಿ ಜಯರಾಮ ಪಿ. ಪೂಜಾರಿ, ಉಪ ಕಾರ್ಯಾಧ್ಯಕ್ಷ ವಿಶ್ವನಾಥ್‌ ಕೆ. ಪೂಜಾರಿ, ಜತೆ ಕಾರ್ಯದರ್ಶಿ ಎನ್‌. ಕೆ. ಪೂಜಾರಿ, ಜತೆ ಕೋಶಾಧಿಕಾರಿ ಶಂಕರ್‌ ಬಿ. ಪಾಲನ್‌, ಕಾರ್ಯಕಾರಿ ಸಮಿತಿಯ ಮಹಿಳಾ ವಿಭಾಗ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದು ಸಹಕರಿಸಿದರು. ರಂಗಭೂಮಿ ಫೈನ್‌ಆರ್ಟ್ಸ್ನ ಉಪಾಧ್ಯಕ್ಷ ಜಗದೀಶ್‌ ಶೆಟ್ಟಿ ಪನ್ವೇಲ್‌ ಇವರ ಮೇಲ್ವಿಚಾರಣೆಯಲ್ಲಿ ಗುರುದೇವರ ಮಂಟಪವನ್ನು ಅಲಂಕರಿಸಲಾಗಿತ್ತು. ಸಮಾಜ ಬಾಂಧವರು, ಗುರುಭಕ್ತರು, ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next