ಮುಂಬಯಿ: ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಇದರ ಮಹಿಳಾ ಉಪ ಸಮಿತಿಯ ಸಂಯೋಜನೆಯಲ್ಲಿ ಜು. 23 ರಂದು ಥಾಣೆ ಪಶ್ಚಿಮದ ರೋಟರಿ ಕ್ಲಬ್ ಸಭಾಗೃಹದಲ್ಲಿ ಆಷಾಢೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಮಹಿಳಾ ಸಮಿತಿಯು ಕುಂದಾಪುರ ಶೈಲಿಯ ವಿವಿಧ ಖಾದ್ಯ-ವೈವಿಧ್ಯಗಳನ್ನು ಹಾಗೂ ಆಷಾಢ ಮಾಸದಲ್ಲಿ ಊರುಗಳಲ್ಲಿ ತಯಾರಿಸುವ ತಿಂಡಿ-ತಿನಿಸುಗಳನ್ನು ಪ್ರದರ್ಶಿಸಿ ಸಮುದಾಯದ ಯುವ ಪೀಳಿಗೆಗೆ ಆಷಾಢೋತ್ಸವದ ಮೂಲಕ ಪರಿಚಯಿಸಿತು.
ಆಷಾಢೋತ್ಸವದ ಹಿನ್ನೆಲೆ ಮತ್ತು ಆಚರಣೆಯ ಕುರಿತು ಮಾಜಿ ಉಪಾಧ್ಯಕ್ಷರಾದ ಸಿ. ಎ. ಪೂಜಾರಿ ಮಾತನಾಡಿದರು. ಸಂಘದ ಪದಾಧಿಕಾರಿಗಳೊಂದಿಗೆ ಸಭಾಧ್ಯಕ್ಷರಾದ ಮಂಜುನಾಥ ಬಿಲ್ಲವ ಶಿರೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಆಚರಣೆಗಳನ್ನು ಯುವಪೀಳಿಗೆಗೆ ಮಾರ್ಗದರ್ಶನ ಮಾಡಿದಂತೆ, ನಮ್ಮ ಆಚಾರ-ವಿಚಾರ, ಸಂಸ್ಕಾರ-ಸಂಸ್ಕೃತಿಗಳು ಮುಂದಿನ ತಲೆಮಾರಿಗೆ ಪರಿಚಯಿಸುವ ಒಂದು ಮಹತ್ಕಾರ್ಯ ಇದಾಗಿದೆ. ಈ ಯಶಸ್ವಿ ಕಾರ್ಯಕ್ರಮ ಸಂಯೋಜನೆ ಮಾಡಲು ಮಹಿಳಾ ಸಮಿತಿಯವರು ಅಪಾರ ಶ್ರಮಪಟ್ಟಿದ್ದಾರೆ. ಅವರ ಪರಿಶ್ರಮದ ಪ್ರತೀಕವೆಂಬಂತೆ ನಾವೆಲ್ಲರೂ ಇಂದು ಉತ್ಸವವನ್ನು ಆಚರಿಸುತ್ತಿದ್ದೇವೆ. ಸಂಘದಲ್ಲಿ ನೆಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಉಪಸ್ಥಿತರಿದ್ದು ಸಂಘಟನೆಯ ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕು ಸಮುದಾಯದ ಶ್ರೇಯೋಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ ಎಂದು ನುಡಿದರು.
ಮಹಿಳಾ ಸಮಿತಿಯ ಗೌರವ ಕಾರ್ಯಾಧ್ಯಕ್ಷೆ ಸಂತೋಷಿ ಎಸ್. ಪೂಜಾರಿ ಮಾತನಾಡಿ, ಇಂದು ಹಲವಾರು ಬಗೆಯ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯ-ವೈವಿಧ್ಯಗಳನ್ನು ಹಾಗೂ ತಿಂಡಿ-ತಿನಿಸುಗಳನ್ನು ಮಾಡಿ ತಂದ ಮಹಿಳೆಯರಿಗೆ ಅಭಿನಂದನೆಗಳು ಎಂದರು. ಗೌರವ ಪ್ರಧಾನ ಕಾರ್ಯದರ್ಶಿ ಸೂರ್ಯ ಎಸ್. ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ಆನಂದ ಎಂ. ಪೂಜಾರಿ, ಎಸ್. ಟಿ. ಪೂಜಾರಿ, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಬೇಬಿ ಆರ್. ಪೂಜಾರಿ, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ¾ಣ ಪೂಜಾರಿ ಕೊಡೇರಿ, ಭಜನಾ ಮಂಡಳಿಯ ಸಂಚಾಲಕಿ ಸುಶೀಲಾ ಶೀನ ಪೂಜಾರಿ ಸಂದಭೋìಚಿತವಾಗಿ ಮಾತನಾಡಿದರು.
ಉಪ ಕಾರ್ಯಾಧ್ಯಕ್ಷೆಯರಾದ ಸುಶೀಲಾ ಎಸ್. ಪೂಜಾರಿ ಸ್ವಾಗತಿಸಿದರು. ಮಲ್ಲಿಕಾ ಎಸ್. ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಸೂರ್ಯ ಎಸ್. ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ಆನಂದ ಎಂ. ಪೂಜಾರಿ, ಎಸ್. ಟಿ. ಪೂಜಾರಿ, ಮಹಿಳಾ ಸಮಿತಿಯ ಗೌರವ ಕಾರ್ಯಾಧ್ಯಕ್ಷೆ ಸಂತೋಷಿ ಎಸ್. ಪೂಜಾರಿ, ಕಾರ್ಯಾಧ್ಯಕ್ಷೆ ಬೇಬಿ ಆರ್. ಪೂಜಾರಿ, ಕಾರ್ಯದರ್ಶಿ ಯಶೋದಾ ಎಸ್. ಪೂಜಾರಿ, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ¾ಣ ಪೂಜಾರಿ ಕೊಡೇರಿ, ಧಾರ್ಮಿಕ ಮತ್ತು ಸಾಮಾಜಿಕ ಸಮಿತಿಯ ಕಾರ್ಯಾಧ್ಯಕ್ಷ ಎಸ್. ಕೆ. ಪೂಜಾರಿ, ಭಜನಾ ಮಂಡಳಿಯ ಸಂಚಾಲಕಿ ಸುಶೀಲಾ ಶೀನ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ಸಮಿತಿ ಮತ್ತು ಇತರರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆರ್. ಪಿ. ರಾಜು ಅವರಿಂದ ಮ್ಯಾಜಿಕ್ ಶೋ ಜರಗಿತು. ಮಹಿಳಾ ಸಮಿತಿಯವರು ಪ್ರಾರ್ಥನೆಗೈದರು. ಕಾರ್ಯದರ್ಶಿ ಯಶೋದಾ ಎಸ್. ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಸುಶೀಲಾ ಆರ್. ಪೂಜಾರಿ ವಂದಿಸಿದರು.