Advertisement
Related Articles
Advertisement
ಸಮಾಜದಲ್ಲಿ ಸಮಾನವಾಗಿ ಬಾಳಿದಾಗ ಅದೇ ಮೊದಲ ನೆಮ್ಮದಿಯ ಜೀವ. ಬಿಲ್ಲವರಾದ ನಾವೂ ಸುಶಿಕ್ಷತರಾಗಿ ಎಲ್ಲಾ ಸಮುದಾಯಗಳ ಜೊತೆಗೆ ಸಾಮರಸ್ಯವಾಗಿ ಮುನ್ನಡೆಯೋಣ ಎಂದು ಎನ್. ಟಿ. ಪೂಜಾರಿ ತಿಳಿಸಿದರು.
ಅಸೋಸಿಯೇಶನ್‌ನ ಉಪಾಧ್ಯಕ್ಷ ರಾದ ಶಂಕರ ಡಿ. ಪೂಜಾರಿ, ಹರೀಶ್ ಜಿ. ಅಮೀನ್, ದಯಾನಂದ್ ಆರ್. ಪೂಜಾರಿ, ಶ್ರೀನಿವಾಸ ಆರ್. ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್. ಕೋಟ್ಯಾನ್, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್, ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್ ಎಂ. ಕೋಟ್ಯಾನ್, ಮಾಜಿ ಅಧ್ಯಕ್ಷ ನಿತ್ಯಾನಂದ್ ಡಿ. ಕೋಟ್ಯಾನ್, ಭಾರತ್ ಬ್ಯಾಂಕಿನ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ. ಆರ್. ಮೂಲ್ಕಿ, ಸೇವಾದಳದ ದಳಪತಿ ಗಣೇಶ್ ಜಿ. ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧನಂಜಯ ಶಾಂತಿ ಅವರ ಪೌರೋಹಿತ್ಯದಲ್ಲಿ ಕಲಾಶಾಭಿಷೇಕ, ಪೂಜೆ ನಡೆಯಿತು. ರವೀಂದ್ರ ಶಾಂತಿ, ಗಣೇಶ್ ಪೂಜಾರಿ, ಸುಭಾಶ್ಚಂದ್ರ ಮಾಬಿಯಾನ್, ಸಂತೋಷ್ ಕೆ. ಪೂಜಾರಿ ನೆರೆದ ಸದ್ಭಕ್ತರು, ಗುರುಭಕ್ತರಿಗೆ ತೀರ್ಥ ಪ್ರಸಾದ ವಿತರಿಸಿ ಹರಸಿದರು. ಜಗನ್ನಾಥ್ ಅಮೀನ್, ಅಶೋಕ್ ಸಸಿಹಿತ್ಲು, ಸಿ. ಆರ್. ಮೂಲ್ಕಿ, ಜಪಯಜ್ಞ ನಡೆಸಿದ ಪ್ರಭಾಕರ ಸಸಿಹಿತ್ಲು, ವಿವಿಧ ಸೇವೆಗೈದ ಗಣ್ಯರನ್ನು ಗೌರವಿಸಲಾಯಿತು. ಭಾರತ್ ಬ್ಯಾಂಕಿನ ನಿರ್ದೇಶಕರು, ಉನ್ನತಾಧಿಕಾರಿಗಳು, ಅಸೋಸಿ ಯೇಶನ್‌ನ ಎಲ್ಲಾ ಸ್ಥಳೀಯ ಸಮಿತಿಗಳ ಮುಖ್ಯಸ್ಥರು, ಪದಾಧಿಕಾರಿ, ಸದಸ್ಯರು ಸೇರಿದಂತೆ ಕಿಕ್ಕಿರಿದು ನೆರೆದ ಗುರುಭಕ್ತರು ಉಪಸ್ಥಿತರಿದ್ದರು. ಸಾಮಾಜಿಕ ಮತ್ತು ಧಾರ್ಮಿಕ ಸಮಿತಿಯ ಕಾರ್ಯಧ್ಯಕ್ಷ ಮೋಹನ್‌ದಾಸ್ ಜಿ. ಪೂಜಾರಿ ಸ್ವಾಗತಿಸಿದರು. ಅಸೋಸಿಯೇಶನ್‌ನ ಗೌ| ಪ್ರ| ಕಾರ್ಯದರ್ಶಿ ಧನಂಜಯ ಎಸ್. ಕೋಟ್ಯಾನ್ ಪ್ರಸ್ತಾವನೆಗೈದು ಅತಿಥಿಗಳು ಮತ್ತು ಸಮ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು.
ಹರೀಶ್ ಜಿ. ಸಾಲ್ಯಾನ್, ಧರ್ಮೇಶ್ ಸಾಲ್ಯಾನ್, ಕೇಶವ ಕೆ. ಕೋಟ್ಯಾನ್ ಅತಿಥಿಗಳನ್ನು ಪರಿಚಯಿಸಿದರು. ಧಾರ್ಮಿಕ ಸಮಿತಿಯ ಕಾರ್ಯದರ್ಶಿ ರವೀಂದ್ರ ಎ. ಅಮೀನ್ ವಂದಿಸಿದರು.
ಜಯ ಸಿ. ಸುವರ್ಣರು ನಮಗೆಲ್ಲಾ ಗುರು ಸಮಾನರು. ಅವರು ನಮ್ಮೆಲ್ಲರ ಬದುಕಿನ ಪರಿವರ್ತನೆಯ ಹರಿಕಾರರು. ಬಾಂಧವ್ಯದ ಸಮನ್ವಯಕರಾಗಿ ನಮ್ಮೆಲ್ಲರನ್ನು ಈ ಮಟ್ಟಕ್ಕೆ ಬೆಳೆಸಿದವರು. ನಾರಾಯಣ ಗುರುಗಳ ಅಂತಹ ತತ್ವಾದರ್ಶಗಳನ್ನು ನಾವೂ ಪಾಲಿಸಿ ಮುಂದಿನ ಬಾಳನ್ನು ಹಸನ್ಮುಖಗೊಳಿಸೋಣ.-ಚಂದ್ರಹಾಸ ಶೆಟ್ಟಿ, ಉಪಾಧ್ಯಕ್ಷರು,
ಬಂಟರ ಸಂಘ ಮುಂಬಯಿ ಜಯ ಸುವರ್ಣ ಸಂಘಟನಾ ಚಾತುರ್ಯತೆ ಎಲ್ಲರಿಗೂ ಮಾದರಿ. ಸುವರ್ಣರು ಮತ್ತು ಚಂದ್ರಶೇಖರ ಪೂಜಾರಿ ಅವರು ನಮ್ಮನ್ನು ಶಿವಗಿರಿಗೆ ಕರೆದೊಯ್ದ ನಾರಾಯಣ ಗುರುಗಳ ಅನುಗ್ರಹಕ್ಕೆ ಪ್ರೇರೆಪಿಸಿದವರು. ಗುರುಗಳ ಆಶಯದಂತೆ ನಾವಿಂದು ಹಲವು ತಾಯಿಯ ಮಕ್ಕಳು ಈ ವೇದಿಕೆಯನ್ನು ಅಲಂಕರಿಸುವಂತಾಗಿದೆ. ಇದು ಸಾಮರಸ್ಯ ಸಾರುವ ಸಹೋದರತ್ವದ ವೇದಿಕೆಯೇ ಸರಿ.
– ಭಾಸ್ಕರ ಶೆಟ್ಟಿ ಕಲ್ಯಾಣ್, ಸಮಾಜ ಸೇವಕ ಗುರು ನಾರಾಯಣರು ಜ್ಞಾನದ ದಾರಿದೀಪವಾಗಿದ್ದು ಅವರ ತತ್ವಾದರ್ಶಗಳನ್ನು ಮೈಗೂಡಿಸಿ ಮುನ್ನಡೆಯುವ ಬಿಲ್ಲವರು ಸದಾ ಭಜನೆಯೊಂದಿಗೆ ಗುರುಗಳ ಸ್ಮರಣೆಗೈದು ಈ ಮಹಾನಗರಕ್ಕೆ ಒಳಿತಾಗುವಂತೆ ಮಾಡುತ್ತಿದ್ದಾರೆ. ಗುರುಬಲ ಮತ್ತು ದೆ„ವ-ದೇವರಬಲ ವಿನಃ ಎಲ್ಲವೂ ಅಸಾಧ್ಯ. ಆದುದರಿಂದ ಜೀವನಕ್ಕೆ ಗುರುಬಲವೇ ಧೀಶಕ್ತಿ ಆಗಿರುತ್ತದೆ. ಇದನ್ನೆಲ್ಲಾ ನಾವು ರೂಢಿಸಿ ಮುನ್ನಡೆದಾಗ ಬಾಳು ಹಸನಾಗುವುದು.
– ಕಡಂದಲೆ ಸುರೇಶ್ ಭಂಡಾರಿ, ಸ್ಥಾಪಕಾಧ್ಯಕ್ಷರು, ಭಂಡಾರಿ ಮಹಾ ಮಂಡಲ ಬಾಂಧವ್ಯತ್ವದ ಬಾಳಿಗೆ ಬಿಲ್ಲವರು ಪ್ರೇರಕರು. ಸರ್ವರಲ್ಲೂ ಪ್ರೀತಿ ಭಾಂದವ್ಯವನ್ನು ಬೆಳೆಸಿ ಉಳಿಸಿ ಮುನ್ನಡೆಗೆ ಸರ್ವರಿಗೂ ಆದರಣೀಯರು. ಭಜನೆಯಿಂದ ದೇವಶಕ್ತಿ ಉದ್ಭವಿಸುತ್ತದೆ. ಇಂತಹ ಭಕ್ತಿ ಪ್ರಧಾನ ಭಜನೆಯ ನ್ನು ದಿನಾ ಬಿಲ್ಲವರ ಭವನದಲ್ಲಿ ನಡೆಸಿ ಸಮಗ್ರ ಸಮಾಜಕ್ಕೆ ಆರೋಗ್ಯ, ನೆಮ್ಮದಿಯ ಜೀವನ ದಯಪಾಲಿಸುವ ನಿಮ್ಮಿಂದ ಇನ್ನಷ್ಟು ಸಮಾಜ ಸೇವೆ ನಡೆಯಲಿ.
– ಧರ್ಮಪಾಲ್ ದೇವಾಡಿಗ, ಮಾಜಿ ಅಧ್ಯಕ್ಷರು, ದೇವಾಡಿಗ ಸಂಘ ಮುಂಬಯಿ ವರದಿ-ಚಿತ್ರ : ರೋನ್ಸ್ ಬಂಟ್ವಾಳ್