ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಂಧೇರಿ ಇದರ ಸ್ಥಳೀಯ ಸಮಿತಿಯ ವತಿಯಿಂದ ಗುರುಪೂರ್ಣಿಯು ಜು. 26 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಸಂಜೆ 5 ರಿಂದ ರಾತ್ರಿ 8 ರವರೆಗೆ ಸಮಿತಿ ಸದಸ್ಯರಿಂದ ಭಜನೆಯು ನೆರವೇರಿತು. ಅಂದಿನ ವಿಶೇಷ ಗುರುಪೂಜೆ ಹಾಗೂ ಅನ್ನದಾನ ಸೇವೆಯನ್ನು ಗೌರವಾಧ್ಯಕ್ಷರುಗಳಾದ ಬಾಬು ಕೆ. ಪೂಜಾರಿ ಹಾಗೂ ಪರಿವಾರದವರೊಂದಿಗೆ ಭಕ್ತಾದಿಗಳು ಗುರುಪೂಜೆಯನ್ನು ಸಲ್ಲಿಸಿದರು.
ಬಾಬು ಕೆ. ಪೂಜಾರಿ ಅವರನ್ನು ಕಾರ್ಯಾಧ್ಯಕ್ಷರಾದ ರವೀಂದ್ರ ಎಸ್. ಕೋಟ್ಯಾನ್ ಅವರು ಶಾಲು ಹೊದೆಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷರುಗಳಾದ ಸುರೇಶ್ ಸುವರ್ಣ, ಜಗನ್ನಾಥ್ ಕರ್ಕೇರ, ಕೋಶಾಧಿಕಾರಿ ಸುಧಾಕರ್ ಜತ್ತನ್, ಇತರ ಪದಾಧಿಕಾರಿಗಳು, ಮಹಿಳಾ ವಿಭಾಗದ ಸದಸ್ಯೆಯರು, ಯುವ ವಿಭಾಗದ ಸದಸ್ಯರುಗಳು ಉಪಸ್ಥಿತ ರಿದ್ದು ಗುರುವಿನ ಆಶೀರ್ವಾದ ಹಾಗೂ ತೀರ್ಥಪ್ರಸಾದವನ್ನು ಸ್ವೀಕರಿಸಿದರು.
ಅಂದಿನ ಗುರುಪೂಜೆಯ ವಿಧಿ-ವಿಧಾನಗಳನ್ನು ಸಂಘದ ಕಾರ್ಯದರ್ಶಿ ಹಾಗೂ ಪುರೋಹಿತ ಹರೀಶ್ ಶಾಂತಿಯವರ ನೇತೃತ್ವದಲ್ಲಿ ನೆರವೇರಿತು.
ಯೋಗಾನಂದ್ ಸಾಲ್ಯಾನ್ ಅವರು ಸಹಕರಿಸಿದರು. ಪೂಜೆಯಲ್ಲಿ ಅತೀ ಹೆಚ್ಚಿನ ಭಕ್ತರು ಪಾಲ್ಗೊಂಡು ಗುರುವಿನ ಆಶೀರ್ವಾದವನ್ನು ಪಡೆದರು. ಗುರುಪೂರ್ಣಿಮೆಯ ಈ ಸುಸಂದರ್ಭ ದಲ್ಲಿ ಸಮಿತಿಯ ಎÇÉಾ ಸದಸ್ಯರುಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.