Advertisement

ಬಿಲ್‌ ಬಾಕಿ: ಕೆಕೆಆರ್‌ಡಿಬಿ 300 ಕಾಮಗಾರಿ ಸ್ಥಗಿತ

05:45 PM Sep 08, 2020 | Suhan S |

ಕಲಬುರಗಿ: ಈ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕಳೆದ 5 ತಿಂಗಳು ಒಂದೇ ಒಂದು ಕಾಮಗಾರಿ ಬಿಲ್‌ ಆಗದಿರುವುದು ಹಾಗೂ ಜತೆಗೆ ಸಮಯ ವಿಸ್ತರಣೆ ಮಾಡದಿರುವುದು ಗುತ್ತಿಗೆದಾರರ ಅಸಮಾಧಾನಕ್ಕೆ ಕಾರಣವಾಗಿದ್ದು, ತಾಳ್ಮೆ ಪರೀಕ್ಷೆಸದಿರುವಂತೆ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ.

Advertisement

ರಾಜ್ಯ ಗುತ್ತಿಗೆದಾರರ ಸಂಘದ ಸಂಘಟನಾ ಕಾರ್ಯದರ್ಶಿ ಜಗನ್ನಾಥ ಶೇಗಜಿ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಗುತ್ತಿಗೆದಾರರು, ಕೆಕೆಆರ್‌ ಡಿಬಿಯಲ್ಲಿ 2020ರ ಏಪ್ರೀಲ್‌ ಟೆಂಡರ್‌ ಪಡೆದ ಕಾಮಗಾರಿಗಳಿಗೆ ಈಗ ಅರ್ಧಕ್ಕೆ ನಿಂತಿವೆ. ಕೆಲಸ ಮುಗಿದು ಮೂರನೇ ತಂಡದ ಪರಿವೀಕ್ಷಣ ವರದಿ ಜತೆಗೆ ಆಯಾ ವಿಭಾಗದ ಕಾಮಗಾರಿಗಳ ಬಿಲ್‌ಸಲ್ಲಿಕೆಯಾದರೂ ಪಾವತಿಯಾಗಿಲ್ಲ. ಒಟ್ಟಾರೆ ಕೆಕೆಆರ್‌ಡಿಬಿ ಕಾಮಗಾರಿಗಳು ಪಡೆದಿರುವ ಗುತ್ತಿಗೆದಾರರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎಂದು ಅಳಲು ತೋಡಿಕೊಂಡರು.

ಕೆಕೆಆರ್‌ಡಿಬಿ ಅಧ್ಯಕ್ಷರು ಜಿಲ್ಲೆಯವರೇ ಆಗಿದ್ದಾರೆ. ಈಗಲಾದರೂ ಕಾಮಗಾರಿಗಳತ್ತ ಕಣ್ಣು ಹಾಯಿಸಿ ಸ್ಥಗಿತಗೊಂಡಿರುವ 300 ಕಾಮರಿಗಳ ಚಾಲನೆಗೆ ಕ್ರಮ ಕೈಗೊಳ್ಳಬೇಕೆಂದು ಶೇಗಜಿ ಸಭೆಯಲ್ಲಿ ಒತ್ತಾಯಿಸಿದರು. ಸರ್ಕಾರದ ವಿಳಂಬ ಹಾಗೂ ನಿರ್ಲಕ್ಷ್ಯ ನೀತಿಯಿಂದ ಮಾರುಕಟ್ಟೆಯಲ್ಲಿ ದರಗಳು ಏರುತ್ತಿವೆ. ಇದಕ್ಕೆಲ್ಲ ನಷ್ಟ ಭರಿಸುವರ್ಯಾರು? ಆದ್ದರಿಂದ ಕೆಕೆಆರ್‌ಡಿಬಿ ಎಚ್ಚೆತ್ತು ಗುತ್ತಿಗೆದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಗುತ್ತಿಗೆದಾರರು ಒತ್ತಾಯಿಸಿದರು.

ಗುತ್ತಿಗೆದಾರರಾದ ಎಂ.ಕೆ. ಪಾಟೀಲ್‌, ಸಂಜಯ್‌ ಆರ್‌.ಕೆ ಸೇರಿದಂತೆ ಮುಂತಾದ ಗುತ್ತಿಗೆದಾರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next