Advertisement

ಬಿಲ್‌ ಬಾಕಿ: ಅರ್ಧಕ್ಕೆ ನಿಂತ ಕಾಮಗಾರಿ

02:42 PM Oct 14, 2019 | Suhan S |

ಬಂಗಾರಪೇಟೆ: ಬಿಲ್‌ ಪಾವತಿ ಮಾಡಿಲ್ಲ ಎಂದು ಗುತ್ತಿಗೆದಾರರು ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ಪಟ್ಟಣದಿಂದ ಬೇತಮಂಗಲ ಮೂಲಕ ವಿ.ಕೋಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ನನೆಗುದಿಗೆ ಬಿದ್ದಿದೆ.

Advertisement

ಇದರಿಂದ ವಾಹನ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ. ರಾಜ್ಯ ಸರ್ಕಾರದಿಂದ 2017-18ನೇ ಸಾಲಿನಲ್ಲಿ 43 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಗುಜರಾತ್‌ ಮೂಲದ ರದಾನಿಗೆ ರಸ್ತೆ ಅಭಿವೃದ್ಧಿ ಗುತ್ತಿಗೆ ನೀಡಲಾಗಿದೆ. ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು, ಬಂಗಾರಪೇಟೆ ಪಟ್ಟಣದ ದೇಶಿಹಳ್ಳಿ ಬಳಿಯಿಂದ ಆರಂಭಿಸಬೇಕಾಗಿದ್ದ ಈ ಕಾಮಗಾರಿ ಆಂಧ್ರಪ್ರದೇಶದ ವಿ.ಕೋಟೆಯಿಂದ ಮಾಡಲಾಗುತ್ತಿದೆ. ಸುಂದರಪಾಳ್ಯ ಗ್ರಾಮದ ಬಳಿ ಆರು ತಿಂಗಳ ಹಿಂದೆ ಹಾಕಿದ್ದ ಜಲ್ಲಿ ಹಾಗೆ ಬಿಟ್ಟಿದ್ದು, ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ.  ಬ್ಲ್ಯೂ

ಲೋಕೋಪಯೋಗಿ ಇಲಾಖೆಗೆ ಸೇರಿದ್ದ ಈ ರಸ್ತೆಯನ್ನು ಎರಡು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ಬಂಗಾರಪೇಟೆ, ಕೆಜಿಎಫ್, ಕೋಲಾರದಿಂದ ಬೇತಮಂಗಲ ಮಾರ್ಗವಾಗಿ ತಾಲೂಕಿನ 200 ಗ್ರಾಮಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಹತ್ತು ವರ್ಷಗಳಿಂದ ಡಾಂಬರು ಹಾಗೂ ಪ್ಯಾಚ್‌ ವರ್ಕ್‌ ಕಾಣದ ಈ ರಸ್ತೆಯ ಉದ್ದಕ್ಕೂ ಗುಂಡಿಗಳು ಬಿದ್ದಿವೆ. ದ್ವಿಚಕ್ರ ಹಾಗೂ ಇತರೆ ಯಾವುದೇ ವಾಹನಗಳು ಓಡಾಡಲು ಸಾಧ್ಯವೇ ಇಲ್ಲದಂತಾಗಿದೆ.

ಗುಂಡಿ ಮುಚ್ಚಲು ಪ್ರತಿಭಟನೆ: ವಿ.ಕೋಟೆಯಿಂದ ಬೇತಮಂಗಲಕ್ಕೆ ಬರುವ 5 ಕಿ.ಮೀ. ರಸ್ತೆ ನಿರ್ಮಿಸಿದ್ದರೂ ಸುಂದರಪಾಳ್ಯ ಗ್ರಾಮದ ಬಳಿ 2 ಕಿ.ಮೀ. ಜಲ್ಲಿ ಹಾಕಿ, ಹಾಗೆ ಬಿಟ್ಟಿದ್ದರಿಂದ ವಾಹನ ಸಂಚಾರ ಕಷ್ಟವಾಗಿದೆ. ಈ ರಸ್ತೆಯ ಉದ್ದಕ್ಕೂ ಮೊಣಕಾಲುದ್ದ ಗುಂಡಿಗಳು ಬಿದ್ದಿದ್ದರೂ ಕೇಳಲು ಅಧಿಕಾರಿಗಳೇ ಕೈಗೆ ಸಿಗುತ್ತಿಲ್ಲ. ಇತ್ತೀಚೆಗೆ ತಾಲೂಕಿನ ನೇರಳೆಕೆರೆ ಗೇಟ್‌ ಬಳಿ ಬಿದ್ದಿರುವ ದೊಡ್ಡ ಗುಂಡಿ ಮುಚ್ಚುವಂತೆ ಕರ್ನಾಟಕ ಸಿಂಹ ಘರ್ಜನೆ ಸಂಘಟನೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಬದಲಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ಮಾಡಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ ಚಿಕ್ಕಬಳ್ಳಾಪುರದಲ್ಲಿದೆ. ಇದರಿಂದ ಕೋಲಾರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಕೇಳುವವರೆ ಇಲ್ಲದಂತಾಗಿದೆ. ಮೊಬೈಲ್‌ ಮೂಲಕ ಈ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಸದ್ಯ ಮಳೆಗಾಲ ಆರಂಭವಾಗಿದ್ದು, ವಾಹನಗಳ ಓಡಾಟ ಕಷ್ಟಕರವಾಗಿದೆ. ಕೂಡಲೇ ಅಧಿಕಾರಿಗಳು ಗಮನ ಹರಿಸಬೇಕು.

 

Advertisement

 

ಬಂಗಾರಪೇಟೆ ಪಟ್ಟಣದ ದೇಶಿಹಳ್ಳಿಯಿಂದ ವಿ. ಕೋಟೆವರೆಗೂ ಲೋಕೋಪಯೋಗಿ ಇಲಾಖೆಗೆ ಸೇರಿದ್ದ ಈ ರಸ್ತೆಯನ್ನು ಎರಡು ವರ್ಷಗಳ ಹಿಂದೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ಏನೇ ಸಮಸ್ಯೆ ಇದ್ರೂ ಪ್ರಾಧಿಕಾರವೇ ನೋಡಿಕೊಳ್ಳಬೇಕು. ಅದರ ಸ್ಥಳೀಯ ಕಚೇರಿ ಇಲ್ಲ, ಹೀಗಾಗಿ ಹೋರಾಟಗಾರರು ಇಲಾಖೆ ವಿರುದ್ಧ ಪ್ರತಿಭಟಿಸುತ್ತಾರೆ. ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಉತ್ತರ ನೀಡಬೇಕು.ಅಮರಪ್ಪ ಬಿ.ಹೊಸಪೇಟ್‌, ಎಇಇ ಪಿಡಬ್ಲ್ಯೂಡಿ

 ಬಂಗಾರಪೇಟೆಯಿಂದ ಆಂಧ್ರದ ವಿ.ಕೋಟೆವರೆಗಿನ ರಸ್ತೆ ಅಗಲೀಕರಣ ಕಾರ್ಯ ಪ್ರಧಿಕಾರಕ್ಕೆ ನೀಡಲಾಗಿದೆ. ಈ ರಸ್ತೆಯನ್ನು ಗುಜರಾತ್‌ ಮೂಲದ ರದಾನಿಗೆ ಗುತ್ತಿಗೆ ನೀಡ ಲಾಗಿದೆ. ವಿ.ಕೋಟೆ ಕಡೆಯಿಂದ ರಸ್ತೆ ನಿರ್ಮಾಣ ಮಾಡಲಾ ಗುತ್ತಿದೆ. ಪ್ರಸ್ತುತ ಕೇಂದ್ರ ಸರ್ಕಾರದ 13 ಕೋಟಿ ರೂ. ಬಿಲ್‌ ಬಾಕಿ ಇದೆ. ಹೀಗಾಗಿ ಕಾಮಗಾರಿ ಮಾಡಲು ಸಾಧ್ಯವಿಲ್ಲ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿ ಗಳಿಗೆ ವರದಿ ನೀಡಲಾಗಿದೆ. ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ನೋಟಿಸ್‌ ನೀಡಲಾಗಿದೆ. ಬಾಕಿ ಬಿಲ್‌ ಪಾವತಿಗೆ ಸರ್ಕಾರಕ್ಕೂ ಮನವಿ ಮಾಡಲಾಗಿದೆ.- ಮಲ್ಲಿಕಾರ್ಜುನ ಮೊಲಕೇರಿ, ಎಇಇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ. ಚಿಕ್ಕಬಳ್ಳಾಪುರ

 

-ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next