ನವದೆಹಲಿ: ಬಿಲಿಯನೇರ್ ಉದ್ಯಮಿ ಬಿಲ್ ಗೇಟ್ಸ್ ಅವರು ರೊಟ್ಟಿ ಮಾಡಲು ಪ್ರಯತ್ನಿಸುತ್ತಿರುವ ವೀಡಿಯೊವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹಂಚಿಕೊಂಡಿದ್ದಾರೆ. ಅವರ ಕೌಶಲ್ಯವನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಭಾರತದ ಸಿರಿಧಾನ್ಯಗಳ ಕುರಿತು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ರೊಟ್ಟಿ ಮಾಡುವ ವಿಡಿಯೋ ಇತ್ತೀಚಿಗೆ ವೈರಲ್ ಆಗಿತ್ತು ಈ ವಿಡಿಯೋ ಅನ್ನು ಪ್ರಧಾನಿ ಶೇರ್ ಮಾಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಅಲ್ಲದೆ ಭಾರತದಲ್ಲಿರುವ ಸಿರಿಧಾನ್ಯಗಳ ಕುರಿತು ಸಲಹೆಯನ್ನೂ ನೀಡಿದ್ದಾರೆ, ಭಾರತದಲ್ಲಿನ ಸಿರಿಧಾನ್ಯಗಳಲ್ಲಿ ರಾಗಿ, ಗೋದಿ ಹೆಚ್ಚು ಮಾನ್ಯತೆ ಪಡೆದಿದೆ ಮುಂದಿನ ದಿನಗಳಲ್ಲಿ ಈ ಸಿರಿಧಾನ್ಯಗಳಿಂದಲೂ ಆಹಾರ ತಯಾರಿಸುವ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದ್ದಾರೆ.
ಅಮೆರಿಕಾದ ಪ್ರಖ್ಯಾತ ಬಾಣಸಿಗ ಈಟಾನ್ ಬರ್ನಾಥ್ ಜೊತೆ ಬಿಲ್ ಗೇಟ್ಸ್ ರೋಟಿ ತಯಾರಿಸಿರುವುದಾಗಿ ಹೇಳಿಕೊಂಡಿದ್ದಾರೆ, ಜೊತೆಗೆ ಈಟಾನ್ ಆಹಾರ ತಯಾರಿಕೆಯಲ್ಲಿ ಪ್ರಖ್ಯಾತಿ ಪಡೆದವರು ಅವರ ಜೊತೆ ನಾನು ರೋಟಿ ಮಾಡುವುದನ್ನು ಕಲಿತೆ ಎಂದು ಹೇಳಿಕೊಂಡಿದ್ದಾರೆ ಬಿಲ್ ಗೇಟ್ಸ್.
ಈ ವಿಡಿಯೋವನ್ನು ಬಾಣಸಿಗ ಬರ್ನಾಥ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಾನು ಇತ್ತೀಚೆಗೆ ಭಾರತಕ್ಕೆ ಬಂದಿದ್ದೇನೆ ಮತ್ತು ರೊಟ್ಟಿಗಳನ್ನು ಹೇಗೆ ಮಾಡಬೇಕೆಂದು ಕಲಿತಿದ್ದೇನೆ ಎಂದು ಬರ್ನಾಥ್ ಹೇಳಿಕೊಂಡಿದ್ದಾರೆ.
ಬಿಲ್‌ಗೇಟ್ಸ್ ಮತ್ತು ನಾನು ಒಟ್ಟಿಗೆ ಭಾರತೀಯ ರೋಟಿಯನ್ನು ತಯಾರಿಸಿದೆವು. ನಾನು ಈಗಷ್ಟೇ ಭಾರತದ ಬಿಹಾರದಿಂದ ಹಿಂತಿರುಗಿದೆ, ಅಲ್ಲಿ ನಾನು ಗೋಧಿ ಬೆಳೆಯುವ ರೈತರನ್ನು ಭೇಟಿಯಾದೆ, ಅವರ ಇಳುವರಿಯು ಹೊಸ ಆರಂಭಿಕ ಬಿತ್ತನೆ ತಂತ್ರಜ್ಞಾನಗಳಿಗೆ ಧನ್ಯವಾದಗಳು ಮತ್ತು ರೋಟಿ ಮಾಡುವಲ್ಲಿ ತಮ್ಮ ಪರಿಣತಿಯನ್ನು ಹಂಚಿಕೊಂಡ “ದೀದಿ ಕಿ ರಸೋಯಿ’ ಕ್ಯಾಂಟೀನ್‌ಗಳ ಮಹಿಳೆಯರಿಗೆ ಧನ್ಯವಾದಗಳು’ ಎಂದು ಹೇಳಿಕೊಂಡಿದ್ದಾರೆ.