ವಾಷಿಂಗ್ಟನ್ ಡಿಸಿ: ಉದ್ಯೋಗದ ಆಕಾಂಕ್ಷಿಗಳು ತಮ್ಮ ಕನಸಿನ ವೃತ್ತಿಜೀವನವನ್ನು ಹೊಂದುವಂತಹ ಪರಿಪೂರ್ಣವಾದ ರೆಸ್ಯೂಮ್ ತಯಾರಿಸಲು ಸಾಮಾನ್ಯವಾಗಿ ಹೆಣಗಾಡುತ್ತಾರೆ. ಕೆಲಸ ಪಡೆಯುವ ವೇಳೆ ಉತ್ತಮ ರೆಸ್ಯೂಮ್ ಹೇಗೆ ಸಹಾಯಕವಾಗುತ್ತದೆ ಎಂದು ನಿಮಗೆ ಗೊತ್ತೇ ಇದೆ.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಅವರು ಇಂದು ತಮ್ಮ ಮೊದಲ ರೆಸ್ಯೂಮ್ ನ್ನು ವಿಶ್ವದಾದ್ಯಂತ ಲಕ್ಷಾಂತರ ಯುವ ಉದ್ಯೋಗಾಕಾಂಕ್ಷಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಹಂಚಿಕೊಂಡಿದ್ದಾರೆ.
66 ವರ್ಷ ವಯಸ್ಸಿನ ಬಿಲ್ ಗೇಟ್ಸ್ 48 ವರ್ಷಗಳ ಹಿಂದಿನ ತಮ್ಮ ರೆಸ್ಯೂಮ್ ನ್ನು ಲಿಂಕ್ ಡಿನ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ “ನೀವು ಇತ್ತೀಚಿನ ಪದವೀಧರನಾಗಿರಲಿ ಅಥವಾ ಕಾಲೇಜು ಡ್ರಾಪ್ಔಟ್ ಆಗಿರಲಿ, ನಿಮ್ಮ ರೆಸ್ಯೂಮ್ ನನ್ನ 48 ವರ್ಷಗಳ ಹಿಂದೆ ಮಾಡಿದ್ದಕ್ಕಿಂತ ಉತ್ತಮವಾಗಿ ಕಾಣುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ವಿಶ್ವಕಪ್ ನಲ್ಲಿ ಚಿನ್ನಕ್ಕೆ ಗುರಿ… ಪ್ಯಾರಾ ಒಲಿಂಪಿಕ್ಸ್‌ಗೆ ಹುಬ್ಬಳ್ಳಿಯ ಶ್ರೀಹರ್ಷ
ಬಿಲ್ ಗೇಟ್ಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ವಿಲಿಯಂ ಹೆನ್ರಿ ಗೇಟ್ಸ್ III ಹಾರ್ವರ್ಡ್ ಕಾಲೇಜಿನಲ್ಲಿ ಮೊದಲ ವರ್ಷದಲ್ಲಿದ್ದಾಗಿನ ರೆಸ್ಯೂಮ್ ಇದಾಗಿದೆ.
ಮೈಕ್ರೋಸಾಫ್ಟ್ ನ ಒಡೆಯರಾಗಿರುವ ಬಿಲ್ ಗೇಟ್ಸ್ ತಾವು ಓಪರೇಟಿಂಗ್ ಸಿಸ್ಟಮ್ ಸ್ಟ್ರಕ್ಟರ್, ಡಾಟಾಬೇಸ್ ಮ್ಯಾನೇಜ್ ಮೆಂಟ್, ಕಂಪ್ಯೂಟರ್ ಗ್ರಾಫಿಕ್ಸ್ ಗಳ ಕೋರ್ಸ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.