Advertisement

ಬಿಲ್‌ ಗೇಟ್ಸ್‌ ಚಿತ್ರಕ್ಕೆ ಅದ್ಧೂರಿ ಹಾಡು

12:22 PM Aug 18, 2018 | |

ಚಿತ್ರೀಕರಣ ಶುರುವಾದಾಗಿಂದಲೂ ಹಲವು ಕಾರಣಗಳಿಗೆ ಸುದ್ದಿಯಾಗುತ್ತಿರುವ “ಬಿಲ್‌ಗೇಟ್ಸ್‌’ ಚಿತ್ರ ಈಗ ಮತ್ತೂಂದು ಸುದ್ದಿ ಮಾಡಿದೆ. ಹೌದು, ಅದಕ್ಕೆ ಕಾರಣ, ಹಾಡೊಂದಕ್ಕೆ ಬರೋಬ್ಬರಿ 40 ಲಕ್ಷ ರುಪಾಯಿ ಖರ್ಚು ಮಾಡಿರೋದು. ಶ್ರೀ ಪಾಂಚಜನ್ಯ ಸಿನಿ ಕ್ರಿಯೇಷನ್ಸ್‌ನಡಿ ನಿರ್ಮಾಣವಾಗಿರವ ಈ ಚಿತ್ರವನ್ನು ಶ್ರೀನಿವಾಸ್‌ ನಿರ್ದೇಶನ ಮಾಡಿದ್ದಾರೆ.

Advertisement

ಇದೊಂದು ಮಕ್ಕಳ ಚಿತ್ರ ಎಂಬುದರ ಹೊರತಾಗಿಯೂ ತಾಂತ್ರಿಕವಾಗಿಯೂ ಅದ್ದೂರಿಯಾಗಿರಬೇಕೆಂಬ ಕಾರಣದಿಂದ ಚಿತ್ರ ತಂಡ ವಿಶೇಷವಾದೊಂದು ಹಾಡನ್ನು ರೂಪಿಸಿದೆ. ಈ ಹಾಡಿನಲ್ಲಿ ಬರೀ ಮಕ್ಕಳೇ ನಟಿಸಿದ್ದಾರಂತೆ. ಇದಕ್ಕೆ  ಒಟ್ಟಾರೆಯಾಗಿ ಖರ್ಚು ಮಾಡಿರೋ ಹಣ ನಲವತ್ತು ಲಕ್ಷ! ಸಾಮಾನ್ಯವಾಗಿ ಮಕ್ಕಳ ಚಿತ್ರಗಳೆಂದರೆ ಕೈ ಬಿಚ್ಚಿ ಖರ್ಚು ಮಾಡಲು ಹಿಂದೇಟು ಹಾಕಲಾಗುತ್ತದೆ.

ಆದರೆ ಔಟ್‌ಪುಟ್‌ ಚೆನ್ನಾಗಿರಬೇಕೆಂಬ ಕನಸಿನಿಂದ ಖರ್ಚು ಮಾಡಿ ಈ ಚಿತ್ರವನ್ನು ರೂಪಿಸಲಾಗಿದೆ. ಈ ಹಾಡನ್ನು ಮಂಡ್ಯ,  ಮಹದೇವಪುರ, ಸೀತಾಪುರ, ಕೊಳ್ಳೇಗಾಲ ಮುಂತಾದೆಡೆಗಳಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ರಾಕೇಶ್‌ ಸಿ ತಿಲಕ್‌ ಅವರ ಛಾಯಾಗ್ರಹಣದಲ್ಲಿ ಮನಮೋಹಕವಾಗಿ ಈ ಹಾಡು ಮೂಡಿಬಂದಿದೆ. ಜೆ  ಮಲ್ಲಿಕಾರ್ಜುನ್‌ಅವರ ಸಂಭಾಷಣೆ, ನೋಬಿನ್‌ಪಾಲ್‌ ಅವರ ಸಂಗೀತ, ಮರಿಸ್ವಾಮಿ ಅವರ ಸಂಕಲನ, ರಾಕೇಶ್‌ ಸಿ ತಿಲಕ್‌  ಛಾಯಾಗ್ರಹಣ, ಕಲೈ ನೃತ್ಯ ನಿರ್ದೇಶನವಿದೆ.

Advertisement

Udayavani is now on Telegram. Click here to join our channel and stay updated with the latest news.

Next