Advertisement
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ, “ಸ್ವಚ್ಛ ಭಾರತ ಅಭಿಯಾನವು ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ. ಇತರ ದೇಶಗಳೂ ಸ್ವತ್ಛತೆಯ ಹಾದಿಯನ್ನು ಹಿಡಿಯುವ ಮೂಲಕ ತಮ್ಮಲ್ಲಿ ಮತ್ತಷ್ಟು ನೈರ್ಮಲಿಕರಣ ಸಾಧಿಸಬಹುದು. ಈ ಪ್ರಶಸ್ತಿಯು ಇಡೀ ಭಾರತಕ್ಕೆ ಸಂದ ಗೌರವ” ಎಂದರು.
Related Articles
Advertisement
ಸೋಲಾರ್ ಪಾರ್ಕ್ ಉದ್ಘಾಟನೆವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಛಾವಣಿಯಲ್ಲಿರುವ ಗಾಂಧಿ ಶಾಂತಿ ಉದ್ಯಾನವನದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗಾಂಧಿ ಸೋಲಾರ್ ಪಾರ್ಕ್ ಅನ್ನು ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಮುಖ್ಯಸ್ಥ ಅಂಟೋನಿಯೋ ಗುಟೆರ್ಸ್ ಹಾಗೂ ಇನ್ನಿತರ ವಿಶ್ವ ನಾಯಕರೊಂದಿಗೆ ಜಂಟಿಯಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗಾಂಧೀಜಿಯವರ ತತ್ವಾದರ್ಶಗಳು ಇಂದಿಗೂ ಜಗತ್ತಿಗೆ ದಾರಿದೀಪವಾಗಿವೆ ಎಂದರು. ಸುಮಾರು 7 ಕೋಟಿ ರೂ. ವೆತ್ಛದಲ್ಲಿ ನಿರ್ಮಿಸಲಾಗಿರುವ ಈ ಸೋಲಾರ್ ಪಾರ್ಕ್‌ನಲ್ಲಿನ ಸೋಲಾರ್ ಪ್ಯಾನೆಲ್‌ಗಳನ್ನು ಭಾರತ ದೇಣಿಗೆೆ ನೀಡಿದೆ. ವಿಶ್ವಸಂಸ್ಥೆಯ ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆಗೆ ಅನುಗುಣವಾಗಿ 193 ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ. ಅಂಚೆ ಚೀಟಿ ಬಿಡುಗಡೆ: ಗಾಂಧೀಜಿಯವರ 150ನೇ ಹುಟ್ಟುಹಬ್ಬದ ವಿಶೇಷಕ್ಕಾಗಿಯೇ, ಇದೇ ವೇದಿಕೆಯಲ್ಲಿ “ಲೀಡರ್‌ಶಿಪ್ ಮ್ಯಾಟರ್ಸ್: ರಿಲೆವೆನ್ಸ್ ಆಫ್ ಗಾಂಧಿ ಇನ್ ದ ಕಂಟೆಂಪರರಿ ವರ್ಲ್x’ ಎಂಬ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಇದೇ ವೇಳೆ ಗಾಂಧೀಜಿಯವರ 150ನೇ ಜನ್ಮದಿನದ ವಿಶೇಷ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಾಯಿತು. ಭಾರತದಲ್ಲಿ ಹೂಡಿಕೆಗೆ ಉತ್ತಮ ಅವಕಾಶ
ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಭಾಗವಹಿಸಲು ಅಮೆರಿಕಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ಕಾರ್ಪೊರೇಟ್ ತೆರಿಗೆ ಇಳಿಕೆ ಮಾಡಿದ್ದರಿಂದಾಗಿ ಹೂಡಿಕೆಗೆ ಉತ್ತಮ ಅವಕಾಶ ಎದುರಾಗಿದೆ ಎಂದು ಬುಧವಾರ ನ್ಯೂಯಾರ್ಕ್‌ನ ಬ್ಲೂಮ್‌ಬರ್ಗ್ ಗ್ಲೋಬಲ್ ಬ್ಯುಸಿನೆಸ್ ಫೋರಂನಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಹೇಳಿದ್ದಾರೆ. ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಬೇಕು ಎಂದಾದರೆ, ಉದ್ಯಮಿಗಳು ಭಾರತಕ್ಕೆ ಆಗಮಿಸಬೇಕು. ಹೂಡಿಕೆದಾರರನ್ನು ಆಕರ್ಷಿಸಲು ಮತ್ತು ಉದ್ಯಮದ ವಾತಾವರಣವನ್ನು ಸುಧಾರಿಸುವುದಕ್ಕೆಂದೇ ಕಾರ್ಪೊರೇಟ್ ತೆರಿಗೆಯನ್ನು ಇಳಿಕೆ ಮಾಡಲಾಗಿದೆ ಎಂದಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ದೇಶವು ಭಾರಿ ಹೂಡಿಕೆ ಮಾಡುತ್ತಿದೆ. ಕಳೆದ ಐದು ವರ್ಷದಲ್ಲಿ 1 ಟ್ರಿಲಿಯನ್ ಡಾಲರ್ ಅನ್ನು ದೇಶದ ಆರ್ಥಿಕತೆಗೆ ಸೇರಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಪ್ರಜಾಪ್ರಭುತ್ವ, ರಾಜಕೀಯ ಸ್ಥಿರತೆ, ನಿರೀಕ್ಷಿಸಬಹುದಾದ ನೀತಿ ಮತ್ತು ಸ್ವತಂತ್ರ ನ್ಯಾಯಾಂಗವಿದ್ದು, ಹೂಡಿಕೆಗೆ ಗ್ಯಾರಂಟಿ ನೀಡುತ್ತದೆ ಎಂದಿದ್ದಾರೆ. ವಿಶ್ವಸಂಸ್ಥೆಯಲ್ಲಿ ಸಿಂಗಪುರ ಪಿಎಂ ಲೀ ಹೀಸಿನ್ ಜತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ.