ಹೊಸದಿಲ್ಲಿ: ತ್ರಿವಳಿ ತಲಾಖ್ ಹಾಗೂ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಮಸೂದೆಗಳಿಗೆ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿರುವ ಕೇಂದ್ರ ಸರಕಾರವು ಈಗ ಮತಾಂತರ ತಡೆಯಲು ಮಸೂದೆ ಮಂಡಿಸುವ ಸಾಧ್ಯತೆಯಿದೆ. ಮುಂದಿನ ಅಧಿವೇಶನದಲ್ಲಿ ಈ ಮಸೂದೆ ಮಂಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಈಗಾಗಲೇ ಚರ್ಚೆ ನಡೆಯುತ್ತಿದ್ದು, ಪೂರ್ವತಯಾರಿ ಆರಂಭ ವಾಗಿದೆ. ಮಸೂದೆಯಲ್ಲಿ ಎಲ್ಲ ರೀತಿಯ ಮತಾಂತರವನ್ನೂ ನಿಷೇಧಿಸಲು ಸರಕಾರ ನಿರ್ಧರಿಸುವ ಸಾಧ್ಯತೆಯಿದೆ.
ಬಜೆಟ್ ಅಧಿವೇಶನದಲ್ಲಿ ಸರಕಾರ ರಾಜ್ಯಸಭೆಯಲ್ಲೂ ತ್ರಿವಳಿ ತಲಾಖ್, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಸಹಿತ ಹಲವು ಮಸೂದೆಗಳಿಗೆ ಅನುಮೋದನೆ ಪಡೆಯಲು ಸಾಧ್ಯವಾಗಿದ್ದರಿಂದ ದಾಖಲೆಯ ಮಸೂದೆಗಳು ಪಾಸಾಗಿದ್ದವು. ಈ ಹಿನ್ನೆಲೆಯಲ್ಲಿ ಸರಕಾರ ತನ್ನ ಪ್ರಣಾಳಿಕೆಯಲ್ಲಿದ್ದ ಎಲ್ಲ ಮಸೂದೆ ಗಳು ಹಾಗೂ ನೀತಿಗಳನ್ನು ಜಾರಿ ಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಿದೆ.
ಸದ್ಯ ದೇಶದಲ್ಲಿ ಯಾವುದೇ ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರವನ್ನು ನಿಷೇಧಿ ಸುವ ಕಾನೂನು ಚಾಲ್ತಿಯಲ್ಲಿಲ್ಲ. ಬಲವಂತದ ಮತಾಂತರವನ್ನಷ್ಟೇ ನಿಷೇಧಿಸಲಾಗಿದೆ. ಸರಕಾರ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಎಲ್ಲ ರೂಪದ ಮತಾಂತರವನ್ನೂ ಕಾನೂನು ಮೂಲಕ ನಿಷೇಧಿ ಸುವ ಸಾಧ್ಯತೆಯಿದೆ.