Advertisement

Bilkis Bano case; ಅತ್ಯಾಚಾರಿಗಳ ಬಿಡುಗಡೆ ಕ್ರಮ ಸರಿಯಲ್ಲ: Supreme Court

10:19 PM Apr 18, 2023 | Team Udayavani |

ನವದೆಹಲಿ: ಬಿಲ್ಕಿಸ್‌ ಬಾನೋ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ 11 ಮಂದಿಯನ್ನು ಬಿಡುಗಡೆ ಮಾಡಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಲುವಿನ ಬಗ್ಗೆ ಸುಪ್ರೀಂಕೋರ್ಟ್‌ ಕಟುವಾಗಿ ಆಕ್ಷೇಪ ಮಾಡಿದೆ. “ಈಗ ಬಿಲ್ಕಿಸ್‌ ಬಾನೋ ವಿರುದ್ಧ ಅತ್ಯಾಚಾರ ಮಾಡಿದವರನ್ನು ಬಿಡುಗಡೆ ಮಾಡುತ್ತೀರಿ.

Advertisement

ಮುಂದೆ ಇನ್ನು ಯಾರನ್ನೋ’ ಎಂದು ನ್ಯಾ.ಕೆ.ಎಂ.ಜೋಸೆಫ್ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠ ಕಟುವಾಗಿ ಪ್ರಶ್ನೆ ಮಾಡಿದೆ. ಅವಧಿಗಿಂತ ಮೊದಲೇ ಸನ್ನಡತೆಯ ಆಧಾರದಲ್ಲಿ ಅವರನ್ನು ಬಿಡುಗಡೆ ಮಾಡಲು ಕಾರಣವಾದ ನಿರ್ಧಾರಗಳು ಯಾವುವು ಎಂದೂ ನ್ಯಾಯಪೀಠ ಪ್ರಶ್ನೆ ಮಾಡಿದೆ.

ಮೂರು ವರ್ಷಗಳ ಅವಧಿಯಲ್ಲಿ ಆರೋಪಿಗಳಿಗೆ 1 ಸಾವಿರ ದಿನಗಳ ಕಾಲ ಪರೋಲ್‌ ನೀಡಲಾಗಿದೆ. ಅವರಿಗೆ ನೀಡಲಾಗಿರುವ ಈ ಸವಲತ್ತೇ ಒಂದು ಅಪರಾಧದಂತೆ ಇದೆ ಎಂದು ನ್ಯಾಯಪೀಠ ಕಟು ಶಬ್ದಗಳಿಂದ ಆಕ್ಷೇಪಿಸಿತು. ಇದಕ್ಕೂ ಮುನ್ನ ಸುಪ್ರೀಂಕೋರ್ಟ್‌ ಮಾ.27ರಂದು ಶಿಕ್ಷೆ ತಗ್ಗಿಸಲು ಕಾರಣವಾಗಿದ್ದ ಅಂಶಗಳ ಬಗೆಗಿನ ಕಡತ ಸಿದ್ಧಗೊಳಿಸಿ ಎಂಬ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲೂ ನ್ಯಾಯಪೀಠ ಅವಕಾಶ ಕಲ್ಪಿಸಿಕೊಡಲು ನ್ಯಾಯಪೀಠ ಒಪ್ಪಿತು. ಜತೆಗೆ ಅಪರಾಧಿಗಳ ಬಿಡುಗಡೆ ಸರ್ಕಾರದ ವ್ಯಾಪ್ತಿಯಲ್ಲಿ ಎಂದೂ ಕೇಂದ್ರ ಮತ್ತು ಗುಜರಾತ್‌ ಸರ್ಕಾರಗಳು ಅರಿಕೆ ಮಾಡಿಕೊಂಡವು.

 

Advertisement

Udayavani is now on Telegram. Click here to join our channel and stay updated with the latest news.

Next